ರೈತ ಭವನ ಕಟ್ಟಡ ಪ್ರಗತಿ ಪರಿಶೀಲನೆ

Ravi Talawar
ರೈತ ಭವನ ಕಟ್ಟಡ ಪ್ರಗತಿ ಪರಿಶೀಲನೆ
WhatsApp Group Join Now
Telegram Group Join Now
ಬೆಳಗಾವಿ :  ತುಮ್ಮರಗುದ್ದಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ರೈತ ಭವನ ಕಟ್ಟಡ ಕಾಮಗಾರಿಯ ಪ್ರಗತಿಯನ್ನು ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಸೋಮವಾರ ಪರಿಶೀಲನೆ ನಡೆಸಿದರು.
ಗ್ರಾಮಸ್ಥರ ಸಲಹೆ ಪಡೆದು, ಅವರ ಅಪೇಕ್ಷೆಯಂತೆ ಕಟ್ಟಡ ನಿರ್ಮಾಣವಾಗಬೇಕು. ಅತ್ಯಂತ ಸುಂದರವಾಗಿ ಮತ್ತು ಗುಣಮಟ್ಟದಿಂದ ಕೂಡಿದ ಮಾದರಿ ಕಟ್ಟಡ ನಿರ್ಮಾಣವಾಗಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಕಲ್ಲಪ್ಪ ಶಿಣಗಿ, ಪ್ರಕಾಶ್ ಶಿಣಗಿ, ವಿಲ್ಸನ್ ಮಾಹಾರ, ಗ್ರಾಮದ ಮುಖಂಡರಾದ ಬಾಳಪ್ಪ ಶಿನಗಿ, ಶೇಖರ್ ಹೊಸೂರಿ, ಬಸನಗೌಡ ಪಾಟೀಲ್, ಸತ್ಯಪ್ಪ ನಂದ್ಯಾಗೋಳ, ಲಕ್ಷ್ಮಣ ಕೆಂಪದಿನ್ನಿ, ಸುರೇಶ ಬಡಿಗೇರ್, ಸತ್ಯಪ್ಪ ತಳವಾರ್, ಕಲ್ಲಪ್ಪ ಬಸರಿಮರದ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article