ಧಾರವಾಡ: ಮೃತ್ಯುಂಜಯ ನಗರದ ಕೊಟ್ಟಣದ ಓಣಿಯ ಶ್ರೀ ವೀರಭದ್ರೇಶ್ವರ ಜಾತ್ರಾಮಹೋತ್ಸವದ ಮೊದಲ ದಿನದ ಕಾರ್ಯಕ್ರಮ ಗುಗ್ಗಳಮಹೋತ್ಸವವು ಜರುಗಿತು.
ಅಮ್ಮಿನಭಾವಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಸುಳ್ಳದ ಶ್ರೀಗಳಾದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಹೂವಿನಹಡಗಲಿ ಶ್ರೀಗಳಾದ ಚನ್ನವೀರ ಮಹಾಸ್ವಾಮಿಗಳು ಚಾಲನೆ ನೀಡಿದರು.
ಗುತ್ತಲದ ಪ್ರಸಿದ್ಧ ಪುರವಂತರು ಓಡಪುಗಳನ್ನು ಹೇಳುತ್ತಾ ವಿವಿಧ ವಾದ್ಯ, ಮುತೈದೆಯರು ಆರತಿಗಳೊಂದಿಗೆ ಭಾಗವಹಿಸಿದರು. ಗುಗ್ಗಳದ ಮೆರವಣಿಗೆಯು ದೇವಸ್ಥಾನದಿಂದ ಆರಂಭಗೊಂಡು ಸವದತ್ತಿ ರಸ್ತೆ, ತೊಟ್ಟಿಗೇರ ಓಣಿ, ಮೂರುಸಾವಿರ ಮಠ ರಸ್ತೆ, ಡಿಪೋ ಸರ್ಕಲ್ ಮುಖಂತರ, ಅರಿಗೇರಿ ಓಣಿ, ಬಣಗಾರ ಓಣಿ, ಮುರುಘಾಮಠಕ್ಕೆ ಬಂದು ಪೂಜೆ ಸಲ್ಲಿಸಿ, ನಂತರ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಆಗಮಿಸಿ, ನೂರಾರು ಭಕ್ತರು ಕೆಂಡ ಹಾಯುವದರ ಮುಖಾಂತರ ಗುಗ್ಗಳ ಸಂಪಣ್ಣಗೊಂಡಿತು.
ನಂತರ ಸಾವಿರಾರು ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಈ ಸಂಧರ್ಭದಲ್ಲಿ ವೀರಭದ್ರೇಶ್ವರ ದೇವಸ್ಥಾನದ ಅಧ್ಯಕ್ಷರಾದ ಅರವಿಂದ ಏಗನಗೌಡರ, ಮೃತ್ಯುಂಜಯ ಸಿದ್ನಾಳ, ದೀಪಕ ಇಂಡಿ, ಸಿದ್ದಪ್ಪ ಕರಡಿಗುಡ್ಡ, ಈಶ್ವರ ಮಾಲಗಾರ, ಮಹಾಂತೇಶ ಕುರಟ್ಟಿದೇಸಾಯಿ,ಸುರೇಶ ಅರಕೇರಿ,ಮಹಾಂತೇಶ ಗೊರವನಕೊಳ್ಳ, ಸೋಮಣ್ಣ ಗೋಡಿಕಟ್ಟಿ, ಶಿವಯೋಗಿ ಹಂಚಿನಾಳ, ಗುರುಸಿದ್ದಪ್ಪ ಭಾವಿಕಟ್ಟಿ, ಪ್ರಭು ಕಲ್ಲಾಪುರ ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು. ಪ್ರಸಾದ ವ್ಯವಸ್ಥೆಯ ಜವಾಬ್ದಾರಿಯನ್ನು ಮೃತ್ಯುಂಜಯ ಯುವಕ ಮಂಡಳದ ಸದಸ್ಯರು ವಹಿಸಿಕೊಂಡಿದ್ದರು.