ಕೊವಿಡ್ ಅಕ್ರಮ: ಎಫ್​ಐಆರ್​ ದಾಖಲು; ರಾಜಕಾರಣಿಗಳಿಗೆ ಸಂಕಷ್ಟ!

Ravi Talawar
ಕೊವಿಡ್ ಅಕ್ರಮ: ಎಫ್​ಐಆರ್​ ದಾಖಲು; ರಾಜಕಾರಣಿಗಳಿಗೆ ಸಂಕಷ್ಟ!
WhatsApp Group Join Now
Telegram Group Join Now

ಬೆಂಗಳೂರು, (ಡಿಸೆಂಬರ್ 14): ಈ ಹಿಂದಿನ ಬಿಜೆಪಿ ಸರ್ಕಾರವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ಎಫ್​ಐಆರ್ ದಾಖಲಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಮುಖ್ಯ ಲೆಕ್ಕಾಧಿಕಾರಿ ಡಾ.ಎಂ.ವಿಷ್ಣುಪ್ರಸಾದ್ ಅವರ ದೂರು ಆಧರಿಸಿ ಬೆಂಗಳೂರಿನ ವಿಧಾನಸೌಧ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.  ಐವರು ವೈದ್ಯರು, ಲ್ಯಾಗ್​ ಎಕ್ಸ್​ಪರ್ಟ್​​ ಕಂಪನಿ‌ ಹಾಗೂ ಜನಪ್ರತಿನಿಧಿಗಳ‌ ವಿರುದ್ಧ ಎಫ್​ಐಆರ್ ದಾಖಲಾಗಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಪ್ರಕರಣದ ತನಿಖೆಗೆ SIT ರಚನೆ ಮಾಡುವ ಸಾಧ್ಯತೆ ಇದೆ.  ಹೀಗಾಗಿ ಈ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಲಿದೆ.

WhatsApp Group Join Now
Telegram Group Join Now
Share This Article