ಬೆಳಗಾವಿ, ಡಿಸೆಂಬರ್ 13: ಪಂಚಮಸಾಲಿ ಹೋರಾಟಗಾರರ ಮೇಲೆ ಪೊಲೀಸರ ಲಾಠಿ ಚಾರ್ಜ್ ಖಂಡನೀಯ ಎಂದು ಶಿವಾಪುರ ಮುಪ್ಪಿನ ಕಾಡಸಿದ್ಧೇಶ್ವರ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂಚಮಸಾಲಿ ಹೋರಾಟಗಾರರನ್ನು ಮನಸೋಇಚ್ಛೇ ಥಳಿಸಿ, ಹೀನಾಯವಾಗಿ ನಡೆದುಕೊಂಡಿದ್ದು ಪೊಲೀಸ್ ಇಲಾಖೆಯ ದರ್ಪ ತೋರಿಸುತ್ತದೆ. ಅಲ್ಲದೇ ಜನರ ಕಲ್ಯಾಣ ಬಯಸಬೇಕಾದ ಸಿದ್ದರಾಮಯ್ಯ ಸರ್ಕಾರ ಇಷ್ಟೊಂದು ಹೀನಾಯವಾಗಿ ನಡೆದುಕೊಂಡಿದ್ದು, ಅಕ್ಷಮ್ಯ ಎಂದು ಕಾಡಸಿದ್ಧೇಶ್ವರ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ರೀತಿ ಮತ್ತೊಮ್ಮೆ ನಡೆದುಕೊಂಡಿದ್ದೇ ಆದರೆ ಸರ್ಕಾರ ವಿಪರೀತ ಪರಿಣಾಮ ಎದುರಿಸಬೇಕಾಗಬಹುದು, ಹೋರಾಟಗಾರರು ಇನ್ನೂ ಉಗ್ರ ಹೋರಾಟಕ್ಕೆ ಅಣಿಯಾಗಬಹುದು ಎಂದು ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.