ನೇಸರಗಿ: ಇಲ್ಲಿನ ಸರ್ಕಾರಿ ಪದವಿ ಕಾಲೇಜಿನ ಕಾರ್ಯಕ್ರಮ ವೇದಿಕೆ ಸಭಾಂಗಣ (ಶಾಮಿಯಾನ ) ನಿರ್ಮಾಣಕ್ಕೆ ಮತ್ತು ನಾಲ್ಕು ಕೊಟ್ಟಡಿಗಳ ನಿರ್ಮಾಣಕ್ಕೆ ಶಾಸಕ ಬಾಬಾಸಾಹೇಬ ಪಾಟೀಲ ಅವರ ಕಾರ್ಯದಕ್ಷತೆಯಿಂದ ಕಾಲೇಜು ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿ, ಉನ್ನತ ಶಿಕ್ಷಣ ಇಲಾಖೆಯ ಕಾಲೇಜು ಶಿಕ್ಷಣ ಇಲಾಖೆ 2024-25 ನೇ ಸಾಲಿನ ಸಾಮಾನ್ಯ ಯೋಜನೆಯ ಹೊಸ ಕಾಮಗಾರಿಗೆ 2 ಕೋಟಿ ರೂಪಾಯಿಗಳ ಅನುಧಾನ ಮಂಜೂರಾಗಿದ್ದು ನೇಸರಗಿ ಭಾಗದ ವಿದ್ಯಾರ್ಥಿಗಳು , ಶಿಕ್ಷಣ ಪ್ರೇಮಿಗಳು ಶಾಸಕ ಬಾಬಾಸಾಹೇಬ ಪಾಟೀಲರ ಕಾರ್ಯಕ್ಕೆ ಪ್ರಶಂಶೆ ವ್ಯಕ್ತಪಡಿಸಿದ್ದಾರೆ.
“ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಯಾವುದೇ ಕೆಲಸ ಕಾರ್ಯಗಳು ಆಗುತ್ತಾ ಇಲ್ಲಾ ಎಂಬ ವಿರೋಧ ಪಕ್ಷದ ವಾದಕ್ಕೆ ತದ್ವಿರುದ್ಧ ಎಂಬುವಂತೆ ನನ್ನ ಕ್ಷೇತ್ರದ ರಸ್ತೆ, ಮೂಲಭೂತ ಸೌಕರ್ಯ, ದೇವಸ್ಥಾನ ಅಭಿವೃದ್ಧಿಗೆ, ಶಾಲಾ ನಿರ್ಮಾಣ, ಕಾಲೇಜು ಸುಧಾರಣೆ, ಕಿತ್ತೂರು ಪಟ್ಟಣದಲ್ಲಿ ಥೀಮ್ ಪಾರ್ಕ್ ನಿರ್ಮಾಣ,ಇನ್ನೂ ಅನೇಕ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಕೆಲವು ಪ್ರಾರಂಭವಾಗಬೇಕಿದ್ದು ಮತಕ್ಷೇತ್ರದ ಎಲ್ಲ ಕ್ಷೇತ್ರಗಳಲ್ಲಿ ಕಾರ್ಯ ಮಾಡಲಾಗುವದು ಅದೇ ರೀತಿ ನೇಸರಗಿ ಸರ್ಕಾರಿ ಪದವಿ ಕಾಲೇಜಿಗೆ ಅನುಧಾನ ಮಂಜೂರಾಗಿದ್ದು ಶೀಘ್ರ ಕಾಮಗಾರಿ ಪ್ರಾರಂಭವಾಗಲಿದೆ”
– ಬಾಬಾಸಾಹೇಬ ಪಾಟೀಲ, ಶಾಸಕರು, ಚನ್ನಮ್ಮನ ಕಿತ್ತೂರು
“ಶಾಸಕರು ಶಿಕ್ಷಣ ಪ್ರೇಮಿಗಳಾಗಿದ್ದು ಅವರ ಈ ಭಾಗದ ಶಿಕ್ಷಣ ಅಭಿವೃದ್ಧಿಗೆ ಪಣ ತೊಟ್ಟಿದ್ದು ಒಕ್ಕಲುತನ ಅವಲಂಬಿತ ಸಣ್ಣ ರೈತರ ವಲಯವಾದ ನೇಸರಗಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಶಾಸಕರು ಕಾರ್ಯ ಮಾಡುತ್ತಿದ್ದಾರೆ”– ಆಡಿವಪ್ಪ ಮಾಳನ್ನವರ, ಉಪಾಧ್ಯಕ್ಷರು ಸರ್ಕಾರಿ ಪದವಿ ಕಾಲೇಜು ಸುಧಾರಣೆ ಸಮಿತಿ ನೇಸರಗಿ“ಬಾಕ್ಸ್.ಶಾಸಕರಿಗೆ ಕಾಲೇಜು ಅಭಿವೃದ್ಧಿ ಕುರಿತು ಪೂರ್ವ ಸಮಾಲೋಚನೆ, ಚರ್ಚೆ, ಕಾರ್ಯಕ್ರಮವೇಧಿಕೆ ಸಭಾಂಗಣ, ಕೊಟ್ಟಡಿಗಳ ಬಗ್ಗೆ ಗಮನಕ್ಕೆ ತಂದಾಗ ಆದಷ್ಟು ಬೇಗ ಕೆಲಸ ಮಾಡುವದಾಗಿ ಹೇಳಿದ್ದರು. ಈಗ ಅನುಷ್ಠಾನ ಕಾಮಗಾರಿಗೆ 2 ಕೋಟಿ ಅನುಧಾನ ಸಿಕ್ಕಿದೆ ಶಾಸಕರ ಶ್ರಮಕ್ಕೆ ವಂದನೆಗಳು”-ಡಾ.ಎಫ್ ಡಿ. ಗದ್ದಿಗೌಡರ. ಪ್ರಾಂನ್ಸುಪಾಲರು, ಸರ್ಕಾರಿ ಪದವಿ ಮಹಾವಿದ್ಯಾಲಯ ನೇಸರಗಿ