ಮಾಜಿ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ ನಿವಾಸವನ್ನು ಕೊನೆಗೂ ಖರೀದಿ ಮಾಡಿದ ಕರ್ನಾಟಕ ಸರ್ಕಾರ

Ravi Talawar
ಮಾಜಿ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ ನಿವಾಸವನ್ನು ಕೊನೆಗೂ ಖರೀದಿ ಮಾಡಿದ ಕರ್ನಾಟಕ ಸರ್ಕಾರ
WhatsApp Group Join Now
Telegram Group Join Now

ಬೆಂಗಳೂರು, ಡಿಸೆಂಬರ್ 13: ಎಐಸಿಸಿ ಮಾಜಿ ಅಧ್ಯಕ್ಷ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ ಅವರ ಚಿತ್ರದುರ್ಗದ ನಿವಾಸವನ್ನು ಕೊನೆಗೂ ಕರ್ನಾಟಕ ಸರ್ಕಾರ ಖರೀದಿ ಮಾಡಿದೆ. ಮಾರುಕಟ್ಟೆ ಮೌಲ್ಯಕ್ಕಿಂತಲೂ ಸುಮಾರು 1 ಕೋಟಿ ರೂ. ಕಡಿಮೆ ಮೊತ್ತಕ್ಕೆ ಸರ್ಕಾರ, ನಿಜಲಿಂಗಪ್ಪ ನಿವಾಸವನ್ನು ಖರೀದಿ ಮಾಡಿದ ಬಗ್ಗೆ ವರದಿಯಾಗಿದೆ. ನಿಜಲಿಂಗಪ್ಪ ಅವರು ಬದುಕಿ, ಬಾಳಿರುವ ಚಿತ್ರದುರ್ಗದ ಮನೆಯ ಖರೀದಿಗೆ ಸರ್ಕಾರ ಉತ್ಸಾಹ ತೋರದ್ದರಿಂದ ಇತ್ತೀಚೆಗೆ ಕೆಲವು ದಿನಗಳ ಹಿಂದೆ ಅವರ ಮಗ ಎಸ್​ಎನ್​ ಕಿರಣಶಂಕರ್ ‘‘ಮನೆ ಮಾರಾಟಕ್ಕಿದೆ’’ ಎಂದು ಜಾಹೀರಾತು ನೀಡಿದ್ದರು. ಇದರಿಂದ ಐತಿಹಾಸಿಕ ನಿವಾಸ ಖಾಸಗಿಯವರ ಪಾಲಾಗುವ ಆತಂಕ ಎದುರಾಗಿತ್ತು.

ಮಹಾತ್ಮಾ ಗಾಂಧಿಯ ಭಾಗವಹಿಸಿದ್ದ 1924 ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಸಂದರ್ಭದಲ್ಲೇ ಬೆಳಗಾವಿಯಲ್ಲಿನ ಐತಿಹಾಸಿಕ ನಿವಾಸ ಸರ್ಕಾರದ ಅಧೀನಕ್ಕೆ ಬಂದಿರುವುದು ವಿಶೇಷ.

WhatsApp Group Join Now
Telegram Group Join Now
Share This Article