ಚಚಡಿಯಲ್ಲಿ ಗ್ರಾಮದಲ್ಲಿ ರೈತ ಸಂಘಟನೆ ಮರು ಸ್ಥಾಪನೆಗೊಂಡಿದ್ದು ಸಂತಸ ತಂದಿದೆ: ನಾಗರಾಜ ದೇಸಾಯಿ

Ravi Talawar
ಚಚಡಿಯಲ್ಲಿ ಗ್ರಾಮದಲ್ಲಿ ರೈತ ಸಂಘಟನೆ ಮರು ಸ್ಥಾಪನೆಗೊಂಡಿದ್ದು ಸಂತಸ ತಂದಿದೆ: ನಾಗರಾಜ ದೇಸಾಯಿ
WhatsApp Group Join Now
Telegram Group Join Now

 

ಮುರಗೋಡ -ಹಲವು ವರ್ಷಗಳಿಂದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯದ ರೈತರ ಸಮಸ್ಯೆಗಳಿಗೆ ಸ್ಪಂಧಿಸುತ್ತ ಬಂದಿದ್ದು, ಚಚಡಿ ಗ್ರಾಮದಲ್ಲಿ ಮರು ಸ್ಥಾಪನೆಯಾಗುತ್ತಿರುವುದು ಸಂತಸ ತಂದಿದೆ ಎಂದು ಉದಯೊಣ್ಮುಖ ಕೃಷಿ ಪಂಡಿತ, ಮಿಲೆನಿಯಮ ಫಾರ್ಮರ್ ಪ್ರಶಸ್ತಿ ಪುರಸ್ಕೃತರಾದ ನಾಗರಾಜ ದೇಸಾಯಿ ಹೇಳಿದರು.

ಸಮೀಪದ ಚಚಡಿ ಗ್ರಾಮದಲ್ಲಿ ಕೋಡಿಹಳ್ಳಿ ಚಂದ್ರಶೇಖರ ಅವರ ನೇತೃತ್ವದ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕದ ನಾಮ ಫಲಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನ ಅಲಂಕರಿಸಿ ಅವರು ಮಾತನಾಡಿದರು.

ನಮ್ಮ ತಂದೆಯವರಾದ ಈಶಪ್ರಭು ದೇಸಾಯಿ ಅವರು ಕೂಡ ರೈತ ಸಂಘಟನೆಯಲ್ಲಿ ಸೇವೆ ಸಲ್ಲಿಸಿವುದರ ಜೊತೆಯಲ್ಲಿ ಕೃಷಿಯಲ್ಲಿ ಆಸಕ್ತಿ ಉಳ್ಳವರಾಗಿದ್ದರು.ಅವರ ಮಾರ್ಗದರ್ಶನ ನಮಗೆ ದಾರಿದೀಪವಾಗಿದೆ.

ಕಾರಣಾತoರಗಳಿಂದ

ಗ್ರಾಮದಲ್ಲಿ ರೈತ ಸಂಘಟನೆ ಮರೆಯಾಗಿತ್ತು.

ರಾಜ್ಯಾಧ್ಯಕ್ಷರಾದ ಚಂದ್ರಶೇಖರ ಕೋಡಿಹಳ್ಳಿ ಅವರ ನೇತೃತ್ವದಲ್ಲಿ ಮತ್ತೆ ಸಂಘಟನೆ ಮರು ಸ್ಥಾಪಿಸಲಾಗಿದೆ.

ಸಂಘಟನೆ ಜೊತೆಗೂಡಿ

ರೈತರ ಸಮಸ್ಯೆಗಳಿಗೆ ಸ್ಪಂಧಿಸುವುದಾಗಿ ತಿಳಿಸಿದರು.

ನೂತನ ಗ್ರಾಮ ಘಟಕ ಉದ್ಘಾಟಿಸಿದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಅವರು ಮಾತನಾಡಿ, ಚುನಾವಣೆ ಸಮಯದಲ್ಲಿ ಹಲವು ಆಮಿಷಗಳನ್ನು ಒಡ್ಡಿ ಸಂಘಟನೆ ಒಡೆದು

ರೈತರನ್ನು ದಾರಿ ತಪ್ಪಿಸುವುದೇ ಸರಕಾರಗಳ ಮೂಲ ಉದ್ದೇಶವಾಗಿದೆ.

ರಾಜಕೀಯ ಕುತಂತ್ರಕ್ಕೆ ರೈತರು ಬಲಿಯಾಗದೆ ಜಾಗೃತರಾಗಬೇಕಿದೆ.

ಬೆಳೆ ವಿಮೆ, ಸಮಯಕ್ಕೆ ಸರಿಯಾಗಿ ರೈತರ ಖಾತೆಗಳಿಗೆ ಪರಿಹಾರ ನೀಡದೆ ಇರುವುದು,

ವಿದ್ಯುತ್ ಖಾಸಗೀಕರಣ, ಸರಿಯಾದ ಪರಿಹಾರ ನೀಡದೆ ರೈತರ ಜಮೀನು ಸ್ವಾಧೀನ ಪಡಿಸಿಕೊಳ್ಳುವುದು, ಪಹಣಿಗಳಲ್ಲಿ ಅನಧಿಕೃತ ವಾಗಿ ವಖ್ಫ್ ಬೋರ್ಡ್ ನ ಹೆಸರು ಸೇರಿಸುವುದು ಹೀಗೆ ರಾಜಕೀಯ ಮುಖಂಡರು ರೈತರನ್ನು ಹಲವು ಸಮಸ್ಯೆಗಳಗೆ ಸಿಲುಕಿಸುತ್ತಿದ್ದಾರೆ.

ಅದರಿಂದ ನಾವು ಹೊರ ಬರಬೇಕಿದ್ದಲ್ಲಿ ಸಂಘಟನೆ ಬಹು ಮುಖ್ಯ ಪಾತ್ರ ವಹಿಸುತ್ತದೆ.

ಒಗ್ಗಟ್ಟಿನಲ್ಲಿ ಬಲವಿದೆ ಎಂಬ ನುಡಿಯಂತೆ ನಾವೆಲ್ಲರೂ ಸಂಘಟಿತರಾಗಿ ರೈತ ವಿರೋಧಿ ಸರಕಾರಗಳಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದರು.

ಜಿಲ್ಲಾ ಕಾರ್ಯಧ್ಯಕ್ಷ ಮಡಿವಾಳಯ್ಯ ಹಿರೇಮಠ,ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಈಶ್ವರ ಶಿಲ್ಲೇದಾರ,

ಸವದತ್ತಿ ತಾಲೂಕು ಅಧ್ಯಕ್ಷ ರಾಮಪ್ಪ ಕುಲಗೋಡ,

ಬೈಲಹೊಂಗಲ ತಾಲೂಕು ಅಧ್ಯಕ್ಷ ವಿಠ್ಠಲ ಯಾಸನ್ನವರ,

ಯುವ ರೈತ ಮುಖಂಡರಾದ ಮಡಿವಾಳಪ್ಪ ಹಿರೇಹೊಳಿ,

ಬಾಳಪ್ಪ ಕುರುಬರ,

ಮಂಜು ಹುದಲಿ,

ಪ್ರಶಾಂತ ಮಳಗಲಿ,

ಸತ್ತೇಪ್ಪ ಯರಗಾವಿ,

ಬಸವರಾಜ ಪೂಜೇರಿ,

ಈರಪ್ಪ ತೋಟಗಿ,ಗದಗಯ್ಯ ಮಠಪತಿ,

ಮಹಾಂತೇಶ ತೋಟಗಿ,

ಯಮನಪ್ಪ ಮುತ್ತೇನ್ನವರ, ಈರಣ್ಣ ಕುರುಬರ,ರಮೇಶ ಮಳಗಲಿ, ಕರೆಪ್ಪ ಕುರುಬರ, ಈರಪ್ಪ ಕಡಕೋಳ, ಬಸವಂತ ದಳವಾಯಿ, ಶಿವಾನಂದ ಅಂಬಡಗಟ್ಟಿ,ಬೀರಪ ಸನ್ನಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article