ಪಂಚಮಸಾಲಿ ಸಮಾಜದ ಮೇಲೆ ನಡೆದ ಲಾಟಿ ಚಾರ್ಜ್‌: ರಸ್ತೆ ತಡೆದು ಪ್ರತಿಭಟನೆ

Ravi Talawar
ಪಂಚಮಸಾಲಿ ಸಮಾಜದ ಮೇಲೆ ನಡೆದ ಲಾಟಿ ಚಾರ್ಜ್‌: ರಸ್ತೆ ತಡೆದು ಪ್ರತಿಭಟನೆ
WhatsApp Group Join Now
Telegram Group Join Now

ಚನ್ನಮ್ಮನ ಕಿತ್ತೂರು: ಬೆಳಗಾವಿ ಸುವರ್ಣ ಸೌಧ ಮುಂಬಾಗದ ಕೊಂಡಸಕೊಪ್ಪ ಗ್ರಾಮದ ಹೊರವಲಯದಲ್ಲಿ ಡಿ 10 ರಂದು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಪೀಠಾದಿಪತಿಗಳಾದ ಬಸವ ಜಯ ಮೃತ್ಯಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಲಿಂಗಾಯತರಿಗೆ 2 ಹಾಗೂ ಲಿಂಗಾಯತ ಓಬಿಸಿ ಮೀಸಲಾತಿ ಚಳುವಳಿಗಾರರ ಮೇಲೆ ಲಿಂಗಾಯತ ವಿರೋಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಮಾಡಿದ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಗುರುವಾರ ಕಿತ್ತೂರು ರಾಣಿ ಚನ್ನಮ್ಮನ ವೃತ್ತದಲ್ಲಿ ರಸ್ತೆ ತಡೆ ಚಳುವಳಿ ಹಾಗೂ ಬೃಹತ್ ಪ್ರತಿಭಟನೆ ಜರುಗಿತು.

ನ್ಯಾಯವಾದಿ ಶಿವಾನಂದ ಬೊಗುರ ಮಾತನಾಡಿ ನಮ್ಮ ಸಮಾಜದ ಬಾಂಧವರ ಮೇಲೆ ನಡೆದ ಲಾಟಿ ಚಾರ್ಜನ್ನು ಖಂಡಿಸುತ್ತೇವೆ. ಶಾಸಕರು ಸರ್ಕಾರಗಳಲ್ಲಿ ಶಾಸನ ಮಾಡಲೆಂದು ನಮ್ಮ ಸಮಾಜದ ಅನೇಕರನ್ನ ಚುನಾಯಿಸಿ ಕಳಿಸಿದ್ದೇವೆ ಅವರು ಶಾಸನ ಸಭೆಗಳಲ್ಲಿ ಶಾಸನಗಳನ್ನು ಮಾಡದೆ, ಈಗಿರುವ ಕಾಯಿದೆಯಲ್ಲಿಯೇ ಮೀಸಲಾತಿ ಕೊಡು ಎಂದರೆ ಕೊಡಲು ಸಾದ್ಯವಿಲ್ಲ. ಶಾಸಕರು ಶಾಸನ ಸಭೆಯಲ್ಲಿ ಶಾಸನಗಳನ್ನು ಮಾಡಲು ಶಾಸಕರು ಒತ್ತಾಯಿಸಬೇಕು. ಪ್ರತಿಯೊಂದು ಸಮಸ್ಯೆಗಳಿಗೆ ನಾವೇ ರಸ್ತೆಗಿಳಿದು ಪರಿಹಾರ ದೊರಕಿಸಿಕೊಳ್ಳಬೇಕಾದರೆ ಇವರು ಶಾಸಕರಾಗಿರುವುದಾದರು ಏತಕ್ಕಾಗಿ?. ಕೇವಲ ಸಂಬಳ, ಭತ್ಯ, ಕಾರು, ಬಂಗಲೆ ಪಡೆಯಲಿಕ್ಕಾಗಿಯೆ? ಇವರನ್ನು ನಾವು ಚುನಾಯಿಸಿ ಕಳಿಸಿದ್ದು ಶಾಸನ ಮಾಡಿ ನಮಗೆ ಬೇಕಾದ ಸೌಕರ್ಯಗಳನ್ನು ಒದಗಿಸಲೆಂದು ಅಲ್ಲವೆ? ಎಂದು ಲಿಂಗಾಯತ ಪಂಚಮಸಾಲಿ ಸಮಾಜದ ಶಾಸಕರ ವಿರುದ್ಧ ಹಾರಿಹಾಯ್ದರು.

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಕಿತ್ತೂರು ತಾಲೂಕಾ ಘಟಕದ ಅಧ್ಯಕ್ಷ ಡಿ. ಆರ್.‌ಪಾಟೀಲ ಮಾತನಾಡಿ ನಮ್ಮ ಶ್ರೀಗಳ ನೇತೃತ್ವದಲ್ಲಿ ಸುಮಾರು ವರ್ಷಗಳಿಂದ ಪಂಚಮಸಾಲಿ ಸಮಾಜಕ್ಕೆ ಮಿಸಲಾತಿ ನೀಡಬೇಕು ಎಂದು ಹೋರಾಟವನ್ನು ಮಾಡುತ್ತ ಬಂದಿದ್ದೇವೆ ಈ ಹಿಂದೆ ಇದ್ದ ಯಾವುದೇ ಸರ್ಕಾರಗಳು ನಮ್ಮ ಮೇಲೆ ಯಾವುದೇ ತರಹದ ತೊಂದರೆ ಮಾಡಿರಲಿಲ್ಲ ಬಹಳ ಸೌಜನ್ಯಯುತವಾಗಿ ನಡೆದುಕೊಂಡಿದ್ದವು. ಆದರೆ ಇಂದಿನ ಬಂಡ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೇಸ್‌ಸರ್ಕಾರ ನಮ್ಮ ಮೇಲೆ ಲಾಟಿ ಚಾರ್ಜ್‌ಮಾಡಿಸಿದೆ ಇದು ಸಮಸ್ತ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಮಾಡಿದ ಅನ್ಯಾಯವಾಗಿದ್ದು ಸಿಮ್‌ಸಿದ್ದರಾಮಯ್ಯ ಮತ್ತು ಸರ್ಕಾರದ ಸಚಿವರುಗಳು ಲಿಂಗಾಯತ ಪಂಚಮಸಾಲಿ ಸಮಾಜ ಮತ್ತು ಸಮಾಜದ ಶ್ರೀಗಳ ಕ್ಷಮೆ ಕೇಳಬೇಕು ಇಲ್ಲದಿದ್ದರೆ ಸರ್ಕಾರರವನ್ನು ಕೆಡುವಬೇಕಾದಿತು ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೇಸ ಮುಖಂಡರಾದ ಕಿರಣ ವಾಳದ, ಅಶೋಕ ಅಳ್ನಾವರ, ರೈತ ಸಂಘದ ಮುಖಂಡರಾದ ಬಸನಗೌಡ ಪಾಟೀಲ, ಸಮಾಜ ಸೇವಕರಾದ ನಾಗೇಶ ಬೆಣ್ಣಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಟಾಯರ್‌ಗೆ ಬೆಂಕಿ ಹಚ್ಚಿ ಸಿಎಂ ಸಿದ್ದರಾಮಯ್ಯ ಮತ್ತು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಒಂದು ಗಂಟೆಗೂ ಅಧಿಕ ಕಾಲ ರಸ್ತೆ ತಡೆದು ಪ್ರತಿಭಟನೆ ಮಾಡಲಾಯಿತು

 ಬಾಕ್ಸ್‌ ಐಟಮ್

ಇಂತಹ ಕ್ರೂರ ಕೃತ್ಯಕ್ಕೆ ಕಡಿವಾಣ ಹಾಕಬೇಕು: ಲಿಂಗಾಯತರ ಹೋರಾಟ ಹತ್ತಿಕ್ಕುವ ಹುನ್ನಾರದ ರೂವಾರಿ ಸಿ.ಎಂ. ಸಿದ್ದರಾಮಯ್ಯನವರೇ ಆಗಿದ್ದಾರೆ ಮುಂದಿನ ದಿನಗಳಲ್ಲಿ ಇದಕ್ಕೆ ಪಂಚಮಸಾಲಿಗಳು ತಕ್ಕ ಉತ್ತರ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಪಂಚಮಸಾಲಿ ಸಮುದಾಯದ ವಕೀಲರ ಮೇಲೆ ಹಾಗೂ ರೈತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಸರ್ಕಾರದ ಧೋರಣೆ ಸರಿಯಲ್ಲ. ಸ್ವತಃ ಲಾಟಿ ಹಿಡಿದುಕೊಂಡು ಪಂಚಮಸಾಲಿಗಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪೊಲೀಸ್ ಮಹಾ ನಿರ್ದೇಶಕ (ಎಡಿಜಿಪಿ) ಆರ್. ಹಿತೇಂದ್ರ ಅವರನ್ನು ಕೂಡಲೇ ಸೇವೆಯಿಂದ ವಜಾ ಗೊಳಿಸಬೇಕು. ಮುಖ್ಯಮಂತ್ರಿಗಳು ಸಮಾಜದ ಹಾಗೂ ಜಗದ್ಗುರುಗಳ ಕ್ಷಮೆ ಕೇಳಬೇಕು ಅಲ್ಲದೆ ಪಂಚಮಸಾಲಿಗಳ ಹಾಗೂ ರೈತರ ಮೇಲೆ ಹಾಕಿರುವ ಕೇಸ್ ಅನ್ನು ಹಿಂಪಡೆಯಬೇಕು ಎಂದು ಪಂಚಮಸಾಲಿ ಸಮಾಜದ ಮುಖಂಡರು ಆಗ್ರಹ ಮಾಡಿದರು.

ಈ ವೇಳೆ ಮಡಿವಾಳೆಪ್ಪ ದಾಸನಕೊಪ್ಪ, ಬಸವರಾಜ ಅವರಾದಿ, ಬಸವರಾಜ ಮಾತನವರ, ಶಂಕರ ಕೊಳ್ಳಿ, ಪಾಪು ನರಗುಂದ, ಮಹಾಂತೇಶ ಕರಬಸನ್ನವರ, ಪ್ರಮೋದ ಕಾಜಗಾರ, ಮಡಿವಾಳೆಪ್ಪ ಕೋಟಿ, ಬಸವರಾಜ ಬುಡಸೆಟ್ಟಿ, ಪ್ರವೀಣ ಸರದಾರ, ಕಿರಣ ಪಾಟೀಲ, ನಾಗರಾಜ ಮಿರಜಗಿ, ಮಡಿವಾಳೆಪ್ಪ ಕೋರಿಶೆಟ್ಟಿ, ಪಡೆಪ್ಪ ಬೊಗುರ, ಸೇರಿದಂತೆ ಸಮಾಜದ ಬಾಂಧವರು ಹಾಗೂ ಪಟ್ಟಣದ ನಾಗರಿಕರು ಇದ್ದರು.

 

 

WhatsApp Group Join Now
Telegram Group Join Now
Share This Article