ಪಾಕಿಸ್ತಾನಿ ಒಳನುಸುಳುಕೋರನ ಬಂಧನ

Ravi Talawar
ಪಾಕಿಸ್ತಾನಿ ಒಳನುಸುಳುಕೋರನ ಬಂಧನ
WhatsApp Group Join Now
Telegram Group Join Now

ಪೂಂಚ್, ಜಮ್ಮು ಕಾಶ್ಮೀರ: ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಬುಧವಾರ ತಡರಾತ್ರಿ ಭಾರತೀಯ ಸೇನೆಯು 18 ವರ್ಷದ ಪಾಕಿಸ್ತಾನಿ ಒಳನುಸುಳುಕೋರನೋರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಸಾದಿಕ್ ಬಂಧಿತ ಪಾಕ್ ಪ್ರಜೆ ಎಂದು ತಿಳಿದು ಬಂದಿದೆ. ಗಡಿ ಪ್ರದೇಶದಲ್ಲಿ ಕಣ್ಗಾವಲು ಕಾರ್ಯಾಚರಣೆ ವೇಳೆ ಗಡಿ ನಿಯಂತ್ರಣ ರೇಖೆಯಲ್ಲಿ ಒಳ ನುಗ್ಗಲು ಯತ್ನಿಸುತ್ತಿದ್ದ ಸಾದಿಕ್ ಎಂಬಾತನನ್ನು ಬಂಧಿಸಿರುವುದಾಗಿ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ಸಾದಿಕ್ ತಡರಾತ್ರಿ ಪಾಕ್​ ಗಡಿಯಾಚೆಯಿಂದ ಭಾರತದ ಗಡಿಯೊಳಗೆ ಜಾಗರೂಕತೆಯಿಂದ ನುಸುಳಲು ಪ್ರಯತ್ನಿಸಿದಾಗ ಸೇನಾಪಡೆಗಳು ಗುರುತಿಸಿ ತಡೆದು ಬಂಧಿಸಿವೆ. ಬಂಧನದ ಬಳಿಕ ಆತನ ಬಗ್ಗೆ ಅನುಮಾನ ಮೂಡಿದ್ದರಿಂದ ಭಾರತೀಯ ಸೇನೆಯು ಆತನನ್ನು ಕರೆತಂದು ವಿಚಾರಣೆ ನಡೆಸಿದಾಗ ತಾನು ಪಾಕಿಸ್ತಾನಿ ಪ್ರಜೆ ಎಂದು ಹೇಳಿಕೊಂಡಿದ್ದಾನೆ. ಆದರೆ, ಬಂಧನದ ವೇಳೆ ಆತನ ಬಳಿ ಯಾವುದೇ ಆಯುಧವಾಗಲಿ ಅಥವಾ ಶಸ್ತ್ರಾಸ್ತ್ರಗಳಾಗಲಿ ಕಂಡು ಬಂದಿಲ್ಲ. ಉದ್ದೇಶಪೂರ್ವಕವಾಗಿ ಗಡಿ ದಾಟಿರಬಹುದೋ ಅಥವಾ ಆಕಸ್ಮಿಕವಾಗಿ ದಾಟಿದ್ದಾನೋ ಎಂಬ ಬಗ್ಗೆ ತಿಳಿದು ಬಂದಿಲ್ಲ. ಸದ್ಯ ಆತನ ವಿಚಾರಣೆ ನಡೆದಿದೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article