ಧಾರವಾಡ: ಡಿಸೆಂಬರ 15 ರಂದು ಮಹಿಳೆಯರಿಗಾಗಿ ಧಾರವಾಡದ ಜೆಎಸ್ಎಸ್ ಮಹಾವಿದ್ಯಾಲಯದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಲಾಗಿದೆ ಎಂದು ಜೆಎಸ್ ಎಸ್ ಕಾರ್ಯದರ್ಶಿ ಡಾ.ಅಜೀತ ಪ್ರಸಾದ ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಅಜಿತ್ ಪ್ರಸಾದ್ ಮಾತನಾಡಿ , ರ್‍ಯಾಪಿಡ್ ಸಂಸ್ಥೆ ಧಾರವಾಡ ಮತ್ತು ಜೆ.ಎಸ್.ಎಸ್ ಮಂಜು ನಾಗೇಶ ತರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಇದೀಗ ಮಹಿಳೆಯರಿಗಾಗಿ ತಮ್ಮ ನಾಲ್ಕನೇ ಉದ್ಯೋಗಮೇಳಕ್ಕೆ ಸಜ್ಜಾಗುತ್ತಿವೆ. ಈ ಉದ್ಯೋಗಮೇಳ 15ನೇ ಡಿಸೆಂಬರ್ 2024 ರಂದು ನಡೆಯಲಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮವು ಧಾರವಾಡದ ಜೆ.ಎಸ್.ಎಸ್ ಆವರಣದಲ್ಲಿ ಬೆಳಿಗ್ಗೆ 8:30 ನೋಂದಣಿಯೊಂದಿಗೆ ಪ್ರಾರಂಭವಾಗಿ ಸಂಜೆ 5:00 ಗಂಟೆಯವರೆಗೆ ನಡೆಯಲಿದೆ
ಈ ಉದ್ಯೋಗ ಮೇಳವು ಯಾವುದೇ ಪದವಿ, ಡಿಪ್ಲೊಮಾ, ಸ್ನಾತಕೋತ್ತರ, ದ್ವಿತೀಯ ಪಿಯುಸಿ, ಎಸ್.ಎಸ್.ಎಲ್.ಸಿ ಮತ್ತು ಎಸ್.ಎಸ್.ಎಲ್.ಸಿ ಗಿಂತ ಕೆಳಗಿನ 18 ರಿಂದ 45 ವರ್ಷ ವಯಸ್ಸಿನ ಮಹಿಳೆಯರಿಗೆ
ಮುಕ್ತವಾಗಿರುತ್ತದೆ.
ಹುಬ್ಬಳ್ಳಿ-ಧಾರವಾಡ, ಬೆಂಗಳೂರು ಮತ್ತು ಹಾಸನದಿಂದ ಸುಮಾರು 40 ಕಂಪನಿಗಳು 5000 ಉದ್ಯೋಗಾವಕಾಶಗಳೊಂದಿಗೆ ಈ ಉದ್ಯೋಗ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಇದರಲ್ಲಿ ವಿದ್ಯಾಸಂಸ್ಥೆಗಳು, ಕಂಪನಿಗಳು, ಗಾರ್ಮೆಂಟ್ಸ್, ಸೆಕ್ಯುರಿಟಿ ಎಜನ್ಸಿಗಳು ಹಾಗೂ ಇನ್ನಿತರ ಸಂಸ್ಥೆಗಳು
ಭಾಗವಹಿಸಲಿವೆ ಎಂದರು.
ಉದ್ಯೋಗ ಮೇಳದಲ್ಲಿ ವಿವಿಧ ಹುದ್ದೆಗಳಿಗೆ ಅವಕಾಶಗಳಿದ್ದು, ಮಾರ್ಕೆಟಿಂಗ್ ಮ್ಯಾನೇಜರ್, ಬಿಸಿನೆಸ್ ಡೆವಲಪ್‌ಮೆಂಟ್ ಎಕ್ಸಿಕ್ಯೂಟಿವ್, ರಿಸೆಪ್ಪನಿಸ್ಟ್, ಫೀಲ್ಡ್ ಆಫೀಸರ್, ಎಚ್‌ಆರ್, ಆಪರೇಷನ್ ಮ್ಯಾನೇಜರ್, ಅಕೌಂಟ್ಸ್ ಮ್ಯಾನೇಜರ್, ಐಟಿ ನೆಟ್‌ವರ್ಕ್ ಇಂಜಿನಿಯರ್, ಡೆಸ್ಕ್‌ಟಾಪ್ ಇಂಜಿನಿಯರ್, ಟೀಚರ್, ಲೆಕ್ಚರರ್, ವಾರ್ಡನ್, ಕ್ಲರ್ಕ್, ಅಕೌಂಟೆಂಟ್, ಕ್ವಾಲಿಟಿ ಚೆಕರ್ಸ್, ಸೂಪರ್‌ವೈಸರ್‌ಗಳು, ನಸಿರ್ಂಗ್ ಮತ್ತು ಪ್ಯಾರಾಮೆಡಿಕಲ್, ಟೈಲರಿಂಗ್, ಹೌಸ್ ಕೀಪಿಂಗ್, ಸೆಕ್ಯುರಿಟಿ ಗಾರ್ಡ್, ಅಡುಗೆಯವರು, ಅಸೆಂಬ್ಲಿ ಲೈನ್ ಆಪರೇಟರ್, ಹೋಮ್ ನರ್ಸ್, ಕೇಟೇಕರ್, ಮತ್ತು ಇನ್ನೂ ಅನೇಕ ಹುದ್ದೆಗಳಿವೆ.
ಈ ಮೇಳವು ಅನೇಕ ಮಹಿಳೆಯರಿಗೆ ಉತ್ತಮ ಉದ್ಯೋಗಗಳನ್ನು ಪಡೆಯಲು ಮತ್ತು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಾಯವಾಗಲಿದೆ ಎಂದರು
ಈ ಉದ್ಯೋಗಮೇಳದ ಉದ್ಘಾಟನೆಯನ್ನು ಜೆ.ಎಸ್.ಎಸ್ ಕಾರ್ಯದರ್ಶಿಗಳಾದ ಡಾ. ಅಜೀತ ಪ್ರಸಾರವರು ನಡೆಸಿಕೊಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ರೆಜಿಸ್ಟಾರ ಅನುರಾಧಾ ವಸ್ತ್ರದ್, ನಬಾರ್ಡನ ಡಿಸ್ಟ್ರಿಕ್ಷ ಡೆವೆಲಪಮೆಂಟ್ ಅಸಿಸ್ಟಂಟ್ ಜನರಲ್ ಮ್ಯಾನೇಜರ್ ಮಯೂರ್ ಕಾಂಬಳೆ ಆಗಮಿಸಲಿದ್ದಾರೆ. ರ್‍ಯಾಪಿಡ್ ಕಾರ್ಯದರ್ಶಿಗಳಾದ ವಾಣಿಶ್ರೀ ಪುರೋಹಿತ ಅಧ್ಯಕ್ಷತೆ ವಹಿಸಲಿದ್ದಾರೆ. ಮಹಾವೀರ ಉಪಾಧ್ಯೆ, ಶ್ರೀಮತಿ ಮಾಲವಿಕಾ ಕಡಕೋಳ ಉಪಸ್ಥಿತರಿರಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ ಅಜಿತ್ ಪ್ರಸಾದ್ ಶ್ರೀ ಮಹಾವೀರ ಉಪಾಧ್ಯೆ ಶ್ರೀಮತಿ ಮಾಲವಿಕಾ ಕಡಕೋಳ ಉಪಸ್ಥಿತರಿದ್ದರು