ಪಂಚಮಸಾಲಿ ಮೀಸಲಾತಿ ಸುವರ್ಣಾಸೌಧಕ್ಕೆ ಟ್ರ್ಯಾಕ್ಟರ್ ಮುತ್ತಿಗೆ ಸವಾರರನ್ನು ಬಂದಿಸಿದ ಪೊಲೀಸರು

Ravi Talawar
ಪಂಚಮಸಾಲಿ ಮೀಸಲಾತಿ ಸುವರ್ಣಾಸೌಧಕ್ಕೆ ಟ್ರ್ಯಾಕ್ಟರ್ ಮುತ್ತಿಗೆ ಸವಾರರನ್ನು ಬಂದಿಸಿದ ಪೊಲೀಸರು
WhatsApp Group Join Now
Telegram Group Join Now

ಬೆಳಗಾವಿ. ದಿ 10 ರಂದು ಸುಮಾರು 500 ಟ್ರ್ಯಾಕ್ಟರಗಳ ಮುಖಾಂತರ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿಗೆ ಅಗ್ರಹಿಸಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವ ಪ್ರಯತ್ನಕ್ಕೆ ಜಿಲ್ಲಾಡಳಿತ ಟ್ರ್ಯಾಕ್ಟರ್ ಮುತ್ತಿಗೆಗೆ ನಿರ್ಭಧ ಹೇರಿದ್ದ ಬೆನ್ನಲೇ ಪಂಚಮಸಾಲಿ ನಾಯಕರು, ಸಮಾಜದ  ಜನತೆ ಟ್ರ್ಯಾಕ್ಟರ್ ತೆಗೆದುಕೊಂಡು ಬರುವಾಗ ಹಿರೇ ಬಾಗೇವಾಡಿ ಪೊಲೀಸ್ ನಾಕಾಬಂದಿ  ಕಡೆ ಬಂಧಿಸಿ ಹಿರೇಬಾಗೇವಾಡಿ ಪೊಲೀಸ್ ಠಾಣೆಗೆ ಕರೆದೋಯ್ದರು.

ಆದರೂ ಪ್ರತಿಭಟನಾ ಸಮಾಜದ ಮುಖಂಡರು, ಸಮಾಜದ ಜನತೆ ಬೇಕೇ ಬೇಕು ನ್ಯಾಯ ಬೇಕು ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಬೇಕು, ಜೈ ಕಿತ್ತೂರು ಚನ್ನಮ್ಮ  ಎಂದು ಘೋಷಣೆ ಕೂಗಿದರು.

ಪ್ರತಿಭಟನಾಕಾರರು ಬಾಗೇವಾಡಿಯ ಬಸವೇಶ್ವರ ವೃತ್ತದ ಬಳಿ ಸಮಾಜದ  ಜನರೊಂದಿಗೆ ವಕೀಲರಾದ ಎಫ್ ಎಸ್ ಸಿದ್ದನಗೌಡರ ಮಾತನಾಡಿ ಸಮಾಜದ ಪಂಚಮಸಾಲಿ ಹಾಗೂ ಒಳ ಪಂಗಡಗಳಿಗೆ ಮೀಸಲಾತಿ ಕಲ್ಪಿಸಲು ನಮ್ಮ ಕೂಡಲಸಂಗಮ ಶ್ರೀ ಜಯ ಮೃತ್ಯುಂಜಯ ಮಹಾಸ್ವಾಮಿಗಳು ನಮ್ಮ ಮಕ್ಕಳ ಭವಿಷ್ಯಕ್ಕಾಗಿ ನಿರಂತರ ಹೋರಾಟ ಮಾಡುತ್ತಿದ್ದಾರೆ ಅವರ ಹೋರಾಟಕ್ಕೆ ನಮ್ಮಸಮಾಜದ  ಸಂಪೂರ್ಣ ಬೆಂಬಲ ಇದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ವಿ ಆಯ. ಪಾಟೀಲ, ಎಮ್ ವಾಯ್. ಸೋಮಣ್ಣವರ, ಆಡಿವೇಶ ಇಟಗಿ ಸೇರಿದಂತೆ ಪಂಚಮಸಾಲಿ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.

WhatsApp Group Join Now
Telegram Group Join Now
Share This Article