ಮಹಾತ್ಮಗಾಂಧಿ ಅವರ ಲೋಗೋ ಅನಾವರಣ! ಅನುಭವ ಮಂಟಪದ ತೈಲ ಕಲಾಕೃತಿ ಲೋಕಾರ್ಪಣೆ

Ravi Talawar
ಮಹಾತ್ಮಗಾಂಧಿ ಅವರ ಲೋಗೋ ಅನಾವರಣ! ಅನುಭವ ಮಂಟಪದ ತೈಲ ಕಲಾಕೃತಿ ಲೋಕಾರ್ಪಣೆ
WhatsApp Group Join Now
Telegram Group Join Now

ಬೆಳಗಾವಿ: ಸುವರ್ಣ ಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಗಾಂಧಿ ಭಾರತ ಲಾಂಚನವನ್ನು ಸೋಮವಾರ ಅನಾವರಣ ಮಾಡಿದ ಕ್ಷಣಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್, ಸಚಿವರಾದ ಎಚ್ ಕೆ ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಮತ್ತಿತರರು ಸಾಕ್ಷಿಯಾದರು.

 

ಬೆಳಗಾವಿ ಚಳಿಗಾಲದ ಅಧಿವೇಶನದ ಮೊದಲ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ಮಹಾತ್ಮ ಗಾಂಧಿ ಅವರ ನೇತೃತ್ವದಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ” ಕಾರ್ಯಕ್ರಮದ ಮಹಾತ್ಮಗಾಂಧಿ ಅವರ ಲೋಗೋ ಅನಾವರಣ ಗೊಳಿಸಿದರು.

ಬಳಿಕ ಸುವರ್ಣಸೌಧದ ಮೊದಲ ಮಹಡಿಯಲ್ಲಿ ಅನುಭವ ಮಂಟಪದ ತೈಲ ಕಲಾಕೃತಿಯನ್ನು ಲೋಕಾರ್ಪಣೆಗೊಳಿಸಿದ, ಸಭಾಧ್ಯಕ್ಷರ ಕೊಠಡಿಯಲ್ಲಿ ಅನುಭವ ಮಂಟಪ ತೈಲ ಕಲಾಕೃತಿಯ ಕಲಾವಿದರನ್ನು ಸನ್ಮಾನಿಸಿದರು.‌

 

WhatsApp Group Join Now
Telegram Group Join Now
Share This Article