ಘಟಪ್ರಭಾ ರೇಲ್ವೆ ಸ್ಟೇಶನ್ ಹಾಗೂ ಸುತ್ತ ಮುತ್ತಲಿನ ನಾಗರಿಕರ ಮತ್ತು ವ್ಯಾಪಾರಿ ಗಳ ಕುಂದು ಕೊರತೆಗಳ ಮಾಹಿತಿ ಪಡೆದ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಘಟಪ್ರಭಾ ರೇಲ್ವೆ ಸ್ಟೇಶನ್ ಮತ್ತು ಪರಿಸರದ ವ್ಯಾಪಾರಿಗಳು ಹಾಗೂ ನಾಗರಿಕರ ಮನವಿ ಗೆ ಸ್ಪಂದಿಸಿದ ರಾಜ್ಯ ಸಭಾ ಸದಸ್ಯ ಶ್ರೀ ಈರಣ್ಣ ಕಡಾಡಿ ಅವರು ಇಂದು ರವಿವಾರ ದಿನಾಂಕ 08-12-2024 ರಂದು ಘಟಪ್ರಭಾ ರೇಲ್ವೆ ಸ್ಟೇಶನ್ ಹಾಗೂ ಪರಿಸರ ವನ್ನು ಪರೀಶೀಲನೆ ಮಾಡಿ ಸಾರ್ವಜನಿಕರಿಂದ ಮನವಿ ಸ್ವೀಕರಿಸಿದರು
ಈ ಸಂದರ್ಭದಲ್ಲಿ ಹಿರಿಯರಾದ ಸುರೇಶ್ ಪಾಟೀಲ ರಾಮಣ್ಣ ಹುಕ್ಕೇರಿ, ಸುರೇಶ್ ಕಾಡದವರ, ಮಲ್ಲಿಕಾರ್ಜುನ ಗೌರಾಣಿ , ಶ್ರೀಕಾಂತ ಮಹಾಜನ, ವಿಶ್ವನಾಥ್ ಯಾದಗೂಡೆ, ಪ್ರಕಾಶ್ ಗಾಯಕವಾಡ, ಅಶೋಕ್ ನಾಯಿಕ , ಗಣುಸಿಂಗ ರಜಪೂತ, ಸಚೀನ ಖಡಬಡಿ ಗಣೇಶ ಗಾಣಿಗ ವಿಜಯ ಗುಪ್ತಾ, ಹಾಲುಂಡಿ, ಶೇಖರ್ ಕುಲಗೋಡ, ಸುನೀಲ್ ನಾಯಿಕ, ಸೇರಿದಂತೆ ನಾಗರೀಕ ವ್ಯಾಪಾರಿಗಳು ಹಾಜರ ಇದ್ದರು