ವಿಜಯೇಂದ್ರ ವಿರುದ್ಧ ಹೋರಾಟ ನಿರಂತರ: ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ 

Ravi Talawar
ವಿಜಯೇಂದ್ರ ವಿರುದ್ಧ ಹೋರಾಟ ನಿರಂತರ: ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ 
WhatsApp Group Join Now
Telegram Group Join Now

ನವದೆಹಲಿ/ಬೆಂಗಳೂರು, ಡಿಸೆಂಬರ್​ 02: ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ  ಕೆಲಸ ಮಾಡುತ್ತಿಲ್ಲ. ಬಿ.ವೈ.ವಿಜಯೇಂದ್ರ ಅವರ ವಿರುದ್ಧ ಹೋರಾಟ ನಿರಂತರವಾಗಿರುತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್  )​​ ಹೇಳಿದರು. ಬಿಎಸ್​ ಯಡಿಯೂರಪ್ಪ ಬೆದರಿಕೆಯಿಂದ ಬಿವೈ ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಬಿ.ಎಸ್​.ಯಡಿಯೂರಪ್ಪ ಅವರ ವಿರುದ್ಧ ಗಂಭೀರವಾದ ಪ್ರಕರಣಗಳಿವೆ. ಬಿಎಸ್ ಯಡಿಯೂರಪ್ಪ, ಬಿವೈ ವಿಜಯೇಂದ್ರ ಹೆದರಬೇಕು, ನಾನು ಯಾಕೆ ಹೆದರಬೇಕು? ಎಂದು ಪ್ರಶ್ನಿಸಿದರು.

ನವದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನೊಟೀಸ್ ಬಂದ ಕೂಡಲೇ ಒಂದೇ ನಿಮಿಷದಲ್ಲಿ ಉತ್ತರ ಕೊಡುತ್ತೇನೆ. ಈಗಾಗಲೇ ಉತ್ತರ ಸಿದ್ಧಪಡಿಸಿದ್ದೇನೆ. ಆದರೆ, ಅಧಿಕೃತವಾಗಿ ಕೇಂದ್ರ ಸಮಿತಿಯಿಂದ ನೋಟಿಸ್ ಬಂದಿಲ್ಲ. ಇದುವರೆಗೆ ಮೂರು ನೋಟಿಸ್ ಬಂದಿತ್ತು. ಎರಡು ನೋಟಿಸ್​ಗೆ ಉತ್ತರಿಸಿದ್ದೇನೆ. ಮತ್ತೊಂದು ನೋಟಿಸ್ ಫೇಕ್ ಎಂಬ ಅನುಮಾನ ಬಂದಿತ್ತು. ಹೀಗಾಗಿ ಮೂರನೇ ನೋಟಿಸ್​ಗೆ ನಾನು ಯಾವುದೇ ಉತ್ತರ ನೀಡಲಿಲ್ಲ ಎಂದು ಹೇಳಿದರು.

ಬಿವೈ ವಿಜಯೇಂದ್ರ ಅವರು ನೋಟಿಸ್ ಕಳುಹಿಸಿರುವ ಸಾಧ್ಯತೆ ಇದೆ. ಹೀಗಾಗಿ ಉತ್ತರಿಸಲಿಲ್ಲ. ಇ-ಮೇಲ್​ ಅಥವಾ ರಿಜಿಸ್ಟರ್ ಪೋಸ್ಟ್​ ಮೂಲಕ ನೋಟಿಸ್​ ಬರಬೇಕು. ಪಕ್ಷದಿಂದ ಅಧಿಕೃತವಾಗಿ ನೋಟಿಸ್​ ಬಂದ ಮೇಲೆ ಉತ್ತರಿಸುತ್ತೇನೆ ಎಂದರು.

WhatsApp Group Join Now
Telegram Group Join Now
Share This Article