ಮಾಧವ್ ​ನ್ಯಾಷನಲ್​ ಪಾರ್ಕ್​ ಇದೀಗ ಮಧ್ಯಪ್ರದೇಶದ 8ನೇ ರಾಷ್ಟ್ರೀಯ ಹುಲಿ ಸಂರಕ್ಷಣಾ ಉದ್ಯಾನ!

Ravi Talawar
ಮಾಧವ್ ​ನ್ಯಾಷನಲ್​ ಪಾರ್ಕ್​ ಇದೀಗ ಮಧ್ಯಪ್ರದೇಶದ 8ನೇ ರಾಷ್ಟ್ರೀಯ ಹುಲಿ ಸಂರಕ್ಷಣಾ ಉದ್ಯಾನ!
WhatsApp Group Join Now
Telegram Group Join Now

ಭೋಪಾಲ್​, ಮಧ್ಯಪ್ರದೇಶ: ಈಗಾಗಲೇ ಏಳು ರಾಷ್ಟ್ರೀಯ ಹುಲಿ ಸಂರಕ್ಷಣಾ ಉದ್ಯಾನ ಹೊಂದಿರುವ ಮಧ್ಯಪ್ರದೇಶದಲ್ಲಿ ಎಂಟನೇ ಪಾರ್ಕ್ ಪ್ರಸ್ತಾಪಕ್ಕೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್​ಟಿಸಿಎ) ತಾಂತ್ರಿಕ ಸಮಿತಿ ಸಮ್ಮತಿ ಸೂಚಿಸಿದೆ. ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಮಾಧವ್​ ರಾಷ್ಟ್ರೀಯ ಪಾರ್ಕ್​ ಹುಲಿ ಸಂರಕ್ಷಣೆ ಉದ್ಯಾನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಕನ್ಹಾ, ಸಾತ್ಪುರ್​, ಬಂಢಾವಗಢ್​​, ಪೆಂಚ್​, ಸಂಜಯ್​ ದುಬ್ರಿ, ಪನ್ನಾ ಮತ್ತು ವೀರಂಗನ ದುರ್ಗಾವತಿ ಎಂಬ ಎಂಟು ಹುಲಿ ಸಂರಕ್ಷಿತ ತಾಣವನ್ನು ಮಧ್ಯಪ್ರದೇಶ ಹೊಂದಿದೆ. ಈ ಕುರಿತು ಮಾತನಾಡಿರುವ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಹೆಚ್ಚುವರಿ ಪ್ರಧಾನ ಮುಖ್ಯಸ್ಥರಾದ ಎಲ್​ ಕೃಷ್ಣಮೂರ್ತಿ ಮಾತನಾಡಿ, ಎನ್​ಟಿಸಿಎ ತಾಂತ್ರಿಕ ಸಮಿತಿಯು ಮಾಧವ್​ ರಾಷ್ಟ್ರೀಯ ಉದ್ಯಾನವನ್ನು ಹುಲಿ ಸಂರಕ್ಷಿತಧಾಮವಾಗುವ ಪ್ರಸ್ತಾವಕ್ಕೆ ಸಮ್ಮತಿಸಿದೆ. ಈ ಉದ್ಯಾನ 1,751 ಚ. ಕಿ.ಮೀ ಇದ್ದು, ಪ್ರಮುಖ ಪ್ರದೇಶ 375 ಚ.ಕಿ.ಮೀ ವ್ಯಾಪಿಸಿದೆ. ಬಫರ್​ ಪ್ರದೇಶ 1,276 ಚ. ಕಿ.ಮೀ ಇದೆ. ಈ ಪಾರ್ಕ್​ನಲ್ಲಿ ಹುಲಿಗಳನ್ನು ಬಿಡಲು ಸಮಿತಿ ಸಮ್ಮತಿಸಿದೆ ಎಂದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

WhatsApp Group Join Now
Telegram Group Join Now
Share This Article