ಮೂಡಲಗಿ : ಇತ್ತೀಚೆಗಷ್ಟೇ ಮೂಡಲಗಿಯಲ್ಲಿ ಜರುಗಿದ 16ನೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲು ಕಾರಣಿಕರ್ತರಾದ ಎಲ್ಲ ಕನ್ನಡ ಮನಸ್ಸುಗಳಿಗೆ ಅಭಿನಂದನೆ ತಿಳಿಸುತ್ತೇನೆ ಎಂದು ಮೂಡಲಗಿ ತಾಲೂಕಾ ಘಟಕ ಕಸಾಪ ಅಧ್ಯಕ್ಷ ಡಾ.ಸಂಜಯ ಶಿಂಧಿಹಟ್ಟಿ ಭಾವುಕರಾಗಿ ನುಡಿದರು.
ಶುಕ್ರವಾರದಂದು ಪಟ್ಟಣದ ಆರ್ ಡಿ ಎಸ್ ಶಿಕ್ಷಣ ಸಂಸ್ಥೆಯಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಿ ಜರುಗಲು ಪ್ರತಿ ಹಂತದಲ್ಲೂ ಮಾರ್ಗದರ್ಶನ ಸಹಕಾರ ನೀಡಿದಂತ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರಾದಿಯಾಗಿ, ಜಿಲ್ಲಾ ಕಸಾಪ ಅಧ್ಯಕ್ಷರಾದ ಮಂಗಲಾ ಮೆಟಗುಡ್ಡ, ಆರ್ ಡಿ ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸಂತೋಷ ಪಾರ್ಶಿಯವರು, ತಾಲ್ಲೂಕಾ ಅಧಿಕಾರಿಗಳು, ಪುರಸಭೆ ಮುಖ್ಯಾಧಿಕಾರಿಗಳು, ಸಿಬ್ಬ೦ದಿ ವರ್ಗ, ಪುರಸಭೆಯ ಸರ್ವ ಸದಸ್ಯರು, ತಾಲ್ಲೂಕಾ ನಿವೃತ್ತ ಸೈನಿಕರ ಸ೦ಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಶ್ರೀ ಕಲ್ಮೇಶ್ವರ ಸಮಿತಿ, ಶ್ರೀ ಸತ್ಯಸಾಯಿ ಸಮಿತಿ, ಸತ್ಸಂಗ ಸಮಿತಿ, ಮಾಧ್ಯಮ ಮಿತ್ರರು, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ತಾಲೂಕಿನ ಸಮಸ್ತ ಗುರು-ಹಿರಿಯರು, ಅಂಗನವಾಡಿ ಕಾರ್ಯಕರ್ತೆತರು, ಆಶಾ ಕಾರ್ಯಕರ್ತೆಯರು, ಯುವಕ-ಯುವತಿಯರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಗೆಳೆಯರ ಬಳಗದವರು, ಕನ್ನಡಪರ ಸಂಘಟನೆಗಳು, ಹಾಗೂ ಎಲ್ಲ ಕನ್ನಡ ಮನಸ್ಸುಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು, ತಾಲ್ಲೂಕಾ ಘಟಕ ಮೂಡಲಗಿ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತ, ಅನೇಕರಿಗೆ ಸತ್ಕರಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಬಿ.ಆರ್.ತರಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು ಹಾಗೂ ನೆರೆದಿದ್ದ ಅನೇಕರು ಸಮ್ಮೇಳನದ ಕುರಿತು ಅನಿಸಿಕೆ ಹಂಚಿಕೊಂಡರು.
ವೇದಿಕೆ ಮೇಲೆ ಹಿರಿಯರಾದ ಶಂಕ್ರಯ್ಯ ಹಿರೇಮಠ, ಆರ್ ಡಿ ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸಂತೋಷ ಪಾರ್ಶಿ, ಕಸಾಪ ಪದಾಧಿಕಾರಿಗಳಾದ ಬಿ ವಾಯ್ ಶಿವಾಪೂರ, ವಿ.ಎಸ್.ಹಂಚಿನಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಎಸ್.ಎನ್,ಕಂಬಾರ ಸ್ವಾಗತಿಸಿದರು, ನಿಂಗಪ್ಪ ಸಂಗ್ರೇಜಿಕೊಪ್ಪ ನಿರೂಪಿಸಿದರು,ಎ.ಎಚ್.ಒಂಟಗೊಡಿ ವಂದಿಸಿದರು.