ವಿಕ್ರಮ್ ಗೌಡ ಎನ್‌ಕೌಂಟರ್ ನ್ಯಾಯಾಂಗ ತನಿಖೆಗೆ ನಕ್ಸಲ್ ಪುನರ್ವಸತಿ ಸಮಿತಿ ಆಗ್ರಹ

Ravi Talawar
ವಿಕ್ರಮ್ ಗೌಡ ಎನ್‌ಕೌಂಟರ್ ನ್ಯಾಯಾಂಗ ತನಿಖೆಗೆ ನಕ್ಸಲ್ ಪುನರ್ವಸತಿ ಸಮಿತಿ ಆಗ್ರಹ
WhatsApp Group Join Now
Telegram Group Join Now

ಬೆಂಗಳೂರು: ಪಶ್ಚಿಮ ಘಟ್ಟಗಳ ಕೆಲವು ಭಾಗಗಳಲ್ಲಿ ಸಕ್ರಿಯವಾಗಿರುವ ಸಿಪಿಐ (ಮಾವೋವಾದಿ)ಪಕ್ಷದ ಎಡಪಂಥೀಯ ಉಗ್ರಗಾಮಿಗಳು (ಎಲ್‌ಡಬ್ಲ್ಯೂಇಗಳು) ಶರಣಾಗಲು ಮತ್ತು ಮುಖ್ಯವಾಹಿನಿಗೆ ಸೇರುವಂತೆ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿಯ ಸದಸ್ಯರು ಮನವಿ ಮಾಡಿದ್ದಾರೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) ಮಾರ್ಗಸೂಚಿಗಳ ಪ್ರಕಾರ ಇತ್ತೀಚೆಗೆ ನಡೆದ ನಕ್ಸಲ್ ನಾಯಕ ವಿಕ್ರಮ್ ಗೌಡನ ಎನ್‌ಕೌಂಟರ್ ಹತ್ಯೆಯ ಬಗ್ಗೆ ಸರ್ಕಾರ ತನಿಖೆ ನಡೆಸುವಂತೆಯೂ ಅವರು ಸಲಹೆ ನೀಡಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸದಸ್ಯರಾದ ಬಂಜಗೆರೆ ಜಯಪ್ರಕಾಶ್, ಪಾರ್ವತೀಶ ಬಿಳಿದಾಳೆ, ಕೆ.ಪಿ. ಶ್ರೀಪಾಲ್, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗ ಪರಧಿಯಿಂದಾಚೆ ಪೊಲೀಸ್‌ ಪಡೆಗಳಿಂದ ನಡೆಯುವ ಎನ್‌ಕೌಂಟರ್‌ಗಳ ಕುರಿತು ಪಾರದರ್ಶಕ ತನಿಖೆ ನಡೆಸುವುದು ಸರ್ಕಾರದ ಹೊಣೆ.ಈ ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ಸತ್ಯಾಂಶವನ್ನು ಸಾರ್ವಜನಿಕರಿಗೆ ತಿಳಿಸಬೇಕು’ ಎಂದು ಒತ್ತಾಯಿಸಿದರು.

ಸಮಿತಿಯು ಈಗಾಗಲೇ ವಿಕ್ರಂಗೌಡ ಅವರ ಎನ್‌ಕೌಂಟರ್‌ ನಡೆದ ಸ್ಥಳ ಸೇರಿದಂತೆ ಹೆಬ್ರಿ ತಾಲ್ಲೂಕಿನ ಹಲವು ಸ್ಥಳಗಳಿಗೆ ಭೇಟಿ ನೀಡಿದೆ. ಅಲ್ಲಿರುವ ಆದಿವಾಸಿಗಳಿಗೆ ಮೂಲಸೌಕರ್ಯ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ. ಈ ಕೊರತೆಗಳ ಲಾಭ ಪಡೆದು ಕೆಲ ತೀವ್ರಗಾಮಿ ಸಂಘಟನೆಗಳು ಅಲ್ಲಲ್ಲಿ ಸಂಚರಿಸುತ್ತಿರಬಹುದು. ಸರ್ಕಾರ ಆದಿವಾಸಿಗಳ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು. ಸರ್ಕಾರದ ನಿರ್ಲಕ್ಷ್ಯ ಅಥವಾ ನಿಧಾನಗತಿಯ ಕ್ರಮಗಳು ಬೇರೆ ಸ್ವರೂಪ ಪಡೆದುಕೊಂಡು ಇಂತಹ ಹೋರಾಟಗಾರರಿಗೆ ಜನ್ಮಕೊಡುತ್ತವೆ. ಅರಣ್ಯ ಮತ್ತು ಪೊಲೀಸ್‌ ಇಲಾಖೆ ಸಿಬ್ಬಂದಿ ಕಿರುಕುಳ ನೀಡುತ್ತಿರುವ ಬಗ್ಗೆ ಆದಿವಾಸಿಗಳು ಆಪಾದಿಸಿದ್ದಾರೆ ಎಂದರು.

WhatsApp Group Join Now
Telegram Group Join Now
Share This Article