ರೈತ ಆತ್ಮಹತ್ಯೆ : 5 ಲಕ್ಷ ರೂಗಳ ಪರಿಹಾರದ ಆದೇಶ ಪ್ರತಿ ವಿತರಿಸಿದ ಶಾಸಕ ಲಕ್ಷ್ಮಣ ಸವದಿ

Ravi Talawar
ರೈತ ಆತ್ಮಹತ್ಯೆ : 5 ಲಕ್ಷ ರೂಗಳ ಪರಿಹಾರದ ಆದೇಶ ಪ್ರತಿ ವಿತರಿಸಿದ ಶಾಸಕ ಲಕ್ಷ್ಮಣ ಸವದಿ
WhatsApp Group Join Now
Telegram Group Join Now

ಅಥಣಿ: ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಆತ್ಮಹತ್ಯೆಯೇ ಅಂತಿಮ ಪರಿಹಾರವಲ್ಲ. ಆದ್ದರಿಂದ ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆಗೆ ಮುಂದಾಗಬಾರದು ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ ಹೇಳಿದರು

ಅವರು ಪಟ್ಟಣದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಸಾಲಬಾಧೆ ತಾಳಲಾರದೆ  ಆತ್ಮಹತ್ಯೆ ಮಾಡಿಕೊಂಡ ತಾಲೂಕಿನ ಮುರಗುಂಡಿ ಗ್ರಾಮದ ಶ್ರೀಮತಿ ಚೇತನಾ ಭರತೇಶ ಪಾಟೀಲ ಇವರಿಗೆ ಕೃಷಿ ಇಲಾಖೆಯಿಂದ ಆತ್ಮಹತ್ಯೆ  ಪರಿಹಾರ ಯೋಜನೆಯಡಿ ಮಂಜೂರಾದ 5 ಲಕ್ಷ ರೂಗಳ ಪರಿಹಾರ ಧನದ ಆದೇಶ ಪ್ರತಿಯನ್ನು ಮೃತಳ ಪತಿ ಭರತೇಶ ಪಾಟೀಲ ಅವರಿಗೆ ವಿತರಿಸಿ  ಮಾತನಾಡಿದರು
ರೈತ ಸಮುದಾಯ ಸಂಕಷ್ಟದಲ್ಲಿದೆ ಸಾಕಷ್ಟು ರೈತರು ಆರ್ಥಿಕ ತೊಂದರೆಯಲ್ಲಿದ್ದಾರೆ. ಹಣಕಾಸಿನ ತೊಂದರೆ, ಮಾಡಿರುವ ಸಾಲಗಳಿಗೆ ಅಂಜಿ ಆತ್ಮಹತ್ಯೆಯಂತಹ ಕಠಿಣ ನಿರ್ಧಾರ ಕೈಗೊಳ್ಳಬಾರದು. ರೈತರ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಹಾಗಾಗಿ ಯಾವೊಬ್ಬ ರೈತರು ಆತ್ಮಹತ್ಯೆ ಹಾದಿ ತುಳಿಯಬಾರದು. ಏನೇ ಸಮಸ್ಯೆ ಎದುರಾದರೂ ನನ್ನ ಗಮನಕ್ಕೆ ತನ್ನಿ, ನಿಮ್ಮೊಂದಿಗೆ ನಾನಿದ್ದೇನೆ ಎಂದು ಧೈರ್ಯ ತುಂಬಿದರು.
ಸರ್ಕಾರ ಮಟ್ಟದಲ್ಲಿ ನಿರಂತರ ಪ್ರಯತ್ನಿಸಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಮಂಜೂರು ಮಾಡಿಸಿ ಚೆಕ್‌ ಕೊಡುತ್ತಿದ್ದೇನೆ. ಪರಿಹಾರ ಧನವನ್ನು ಮಕ್ಕಳ ಉತ್ತಮ ಶಿಕ್ಷಣ, ಮದುವೆಯಂತಹ ಒಳ್ಳೆಯ ಕಾರ್ಯಗಳಿಗೆ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಕೃಷಿ ಇಲಾಖೆಯ ಅಧಿಕಾರಿ ನಿಂಗನಗೌಡ ಬಿರಾದಾರ. ಭರಮಾ ಮಗಾಡಿ. ಮುರುಗೇಶ ಕನಕರೆಡ್ಡಿ. ಭೀಮು ಸಡ್ಡಿ. ಅನಿಲಕುಮಾರ ನರೋಟೆ. ಸೇರಿದಂತೆ ಹಲವರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article