ಸವದತ್ತಿ: ತಾಲೂಕಿನ ಚುಳಕಿ ಗ್ರಾಮದ ವಾಕ್ ಸಿದ್ಧಿ ಪುರುಷ, ಸಾಕ್ಷಾತ್ ಭಾಗಳಂಬ ದೇವಿಯ ಅವತಾರ ಪುರುಷರಾದ ಶ್ರೀ ಸಿದ್ದರಾಮ ಶಿವಯೋಗಿಗಳು ಚುಳಕಿ ಗ್ರಾಮಕ್ಕೆ ಆಗಮಿಸಿ 100 ವರ್ಷವಾದ ಪ್ರಯುಕ್ತ ಮಹಾನ ಶ್ರೀಗಳ ಸಿದ್ದಶತಮಾನೋತ್ಸವ ಕಾರ್ಯಕ್ರಮವು ಗುರುವಾರ ದಿ. 21-11-2024 ರಿಂದ 25-11-2024 ರವರೆಗೆ ನೆರವೇರುವದು ಎಂದು ಚುಳಕಿ ಗವಿಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳು ತಿಳಿಸಿದ್ದಾರೆ.
ದಿ. 21 ರಂದು ಬ್ರಹ್ಮಹಿ ಮಹೂರ್ಥದಲ್ಲಿ ಶ್ರೀ ಮೂರ್ತಿಗಳಿಗೆ ರುದ್ರಾಭಿಷೇಕ, ನಂತರ ಇಂಚಲದ ಶಿವಯೋಗಿಶ್ವರ ಮಠದ ಡಾ. ಶಿವಾನಂದ ಭಾರತಿ ಮಹಾಸ್ವಾಮಿಗಳ ಪಾವನ ಸಾನಿಧ್ಯದಲ್ಲಿ ಹಾಗೂ ನಾಡಿನ ಅನೇಕ ಮಠದ ಶ್ರೀಗಳು, ರಾಜಕೀಯ ಮುಖಂಡರ ಸಮ್ಮುಖದಲ್ಲಿ ಶಿದ್ದರಾಮೇಶ್ವರ ಕಲ್ಯಾಣ ಮಂಟಪ ಉದ್ಘಾಟನೆ ಸಮಾರಂಭ ನಡೆಯುವದು, ದಿ. 22 ರಂದು ದೇವಿ ಉಪನ್ಯಾಸರಿಂದ ಸಾಮೂಹಿಕ ದೇವಿ ಪಾರಾಯಣ, ಶ್ರೀ ಭಗಳಂಬ ದೇವಿಯ ಮೂರ್ತಿ ಉತ್ಸವ, ದಿ 23 ರಂದು ಭಗಳಾಂಬ ದೇವಿಯ ಮೂರ್ತಿ ಪ್ರಾಣ ಪ್ರತಿಷ್ಠಾಪನೆ,, ದಿ. 25 ರಂದು ಶ್ರೀ ಶಿವರಾಮ ಶಿವಯೋಗಿಗಳ ಭಾವಚಿತ್ರ ಪಲ್ಲಕ್ಕಿ ಮೆರವಣಿಗೆ ನಡೆಯಲಿದ್ದು, ದಿ 26 ರಂದು ದಿಪೋತ್ಸವ ನೆರವೇರಲಿದೆ ಈ ಒಂದು ಪವಿತ್ರ ಕಾರ್ಯಕ್ರಮದಲ್ಲಿ ನಾಡಿನ ಶ್ರೀಗಳು, ರಾಜಕೀಯ ಮುಖಂಡರು ಪಾಲ್ಗೊಳುತ್ತಾರೆ ಎಂದು ಜಾತ್ರಾ ಉತ್ಸವ ಕಮಿಟಿ ಸದಸ್ಯರು ತಿಳಿಸಿದ್ದಾರೆ.