ಬೆಳಗಾವಿ: ವಕ್ಪ ಅಸ್ತಿ ವಿವಾದ ರಾಜ್ಯದೆಂತ ರೈತರ ಹಾಗೂ ಮಠ, ಮಂದಿರಗಳ ಅಸ್ತಿ ವಕ್ಪ ಅಸ್ತಿ ಎಂದು ಖಾತೆ ಉತ್ತಾರದಲ್ಲಿ ಬರುತ್ತಿರುವ ಹಿನ್ನೆಲೆಯಲ್ಲಿ ನಾಮಕೆ ವಾಸ್ತೆ ಯಾರಿಗೂ ಅನ್ಯಾಯವಾಗಲು ಬಿಡಲ್ಲ, ರೈತರಿಗೆ, ಜಮೀನು ಮಾಲಕರಿಗೆಎಂದು ಹೇಳಿ ಮಾತಿನ ಮೂಲಕ ಕಣ್ಣೋರೆಸುವ ತಂತ್ರ ಮಾಡಿ ಒಂದು ಸಮುದಾಯದ ಮೆಚ್ಚುಗೆಗೆ ಮತ್ತು ಮಹಾರಾಷ್ಟ್ರ, ಜಾರ್ಕಂಡ ವಿಧಾನ ಸಭಾ ಚುನಾವಣೆ ಪ್ರಯುಕ್ತ ನಾಟಕ ಆಡುತಿದ್ದು, ಖಾತೆ ಉತ್ತಾರ ವರ್ಗವಾಗಿ, ಮೋಡೆಷನ್ ಆಗಿ ಸರ್ಕಾರದಿಂದ ಜಮೀನು, ಜಾಗೆಗಳ ಮಾಲೀಕರಿಗೆ ಭರವಸೆಯ ನೋಟೀಸ್ ಹೋಗಬೇಕಿತ್ತು ಆದರೆ ಇವರೆಗೂ ಯಾವುದೇ ನೋಟೀಸ್ ನೀಡಿಲ್ಲ ಅದಕ್ಕಾಗಿ ರಾಜ್ಯ ಬಿಜೆಪಿ ವತಿಯಿಂದ 3 ತಂಡಗಳನ್ನು ರಚಿಸಿ ಹೋರಾಟಕ್ಕೆ ಕರೆ ನೀಡಿದೆ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ನೇತೃತ್ವ, ವಿರೋಧ ಪಕ್ಷದ ನಾಯಕ ಆರ್ ಅಶೋಕ ನೇತೃತ್ವದ, ವಿ ಪ ನಾಯಕ ಚಲುವಾದಿ ನಾರಾಯಣ ಸ್ವಾಮಿ ನೇತೃತ್ವದಲ್ಲಿ ನಮ್ಮ ಭೂಮಿ ನಮ್ಮ ಹಕ್ಕು ಘೋಷ್ ವಾಕ್ಯಗಳೊಂದಿಗೆ ಕಾಂಗ್ರೆಸ್ ಸರ್ಕಾರದ ಅನ್ಯಾಯದ ವಿರುದ್ಧ, ಅಕ್ರಮಗಳ ವಿರುದ್ಧ, ಕಬಳಿಕೆಯ ವಿರುದ್ಧ, ನಮ್ಮ ಭೂಮಿಯನ್ನು ವಕ್ಪ ಕರಾಳ ಹಸ್ತದಿಂದ ರಕ್ಷಿಸಲು ಬಿಜೆಪಿ ಸಂಘಟಿತ ಹೋರಾಟ ನೀಡುತ್ತಿದ್ದು. ಪ್ರತಿ ಜಿಲ್ಲೆಗೆ ವಕ್ಪ ಅಸ್ತಿ ರಕ್ಷಣೆಗೆ 5 ತಂಡಗಳನ್ನು ರಚಿಸಲಾಗಿದ್ದು, ತಮ್ಮ ನವಿಕೃತ ಪಹಣಿ ಪತ್ರಗಳಲ್ಲಿ ವಕ್ಪ ಅಂತಾ ಬಂದರೆ ನಮ್ಮ ತಂಡಕ್ಕೆ ಸಂಪರ್ಕಿಸಬೇಕು ಎಂದರು.ಈ ತಂಡದಲ್ಲಿ ವಕೀಲರು ಇರುತ್ತಾರೆ, ಉಚಿತವಾಗಿ ಮುಂದಿನ ಕೆಲಸ ಕಾರ್ಯ ಮಾಡಲಾಗುವದೆಂದರು. ಜಿಲ್ಲೆಯ ಆನಂದವಾಡಿ ಗ್ರಾಮದಲ್ಲಿ ಇಂತ ಪ್ರಕರಣ ಬೆಳಕಿಗೆ ಬಂದಿದೆ ಎಂದು ರಾಜ್ಯ ಮಾಜಿ ಬಿಜೆಪಿ ವಕ್ತಾರರು, ವಕ್ಪ ಹೋರಾಟ ಸಮಿತಿ ಸದಸ್ಯರಾದ ಎಮ್ ಬಿ ಜಿರಲಿ ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಬಿಜೆಪಿ ಬೆಳಗಾವಿ ಜಿಲ್ಲಾ( ಗ್ರಾಮಾಂತರ )ಅಧ್ಯಕ್ಷ ಸುಭಾಷ ಪಾಟೀಲ ಮಾತನಾಡಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಇದೆ 22 ನವೆಂಬರ 2024 ರಂದು ನಮ್ಮ ಭೂಮಿ ನಮ್ಮ ಹಕ್ಕು ಎಂಬ ವೇಧ ವಾಕ್ಯಗಳೊಂದಿಗೆ ಹೋರಾಟ, ಧರಣಿಯು ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ಸಹಸ್ರಾರು ಜನ ಬಿಜೆಪಿ ಕಾರ್ಯಕರ್ತರು, ರೈತರು, ರೈತ ಹೋರಾಟಗಾರರು ಪಾಲ್ಗೊಳ್ಳುತ್ತಿದ್ದಾರೆ. ಈ ಒಂದು ಹೋರಾಟ ರಾಜ್ಯಾದ್ಯಂತ ಮಾಜಿ ಮುಖ್ಯ ಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ, ಸದಾನಂದಗೌಡ, ಜಗದೀಶ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶೋಭಾ ಕರಂದ್ಲಾಜೆ, ವಿ ಸೋಮಣ್ಣ, ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು, ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯೋತ್ಸವದ ಬಿಜೆಪಿ ಉಪಾಧ್ಯಕ್ಷ ಅನಿಲ ಬೆನಕೆ, ಮಾಜಿ ಶಾಸಕ ಸಂಜಯ ಪಾಟೀಲ, ಮಹಾನಗರ ಬಿಜೆಪಿ ಅಧ್ಯಕ್ಷ ಗೀತಾ ಸುತಾರ, ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಎಫ್ ಎಸ್. ಸಿದ್ದನಗೌಡರ, ಜಿಲ್ಲಾ ಮಾಧ್ಯಮ ಪ್ರಮುಖ ಸಚಿನ್ ಕಡಿ, ಮಲ್ಲಿಕಾರ್ಜುನ ಮಾದಮ್ಮನವರ, ನೀತಿನ ಚೌಗುಲಾ ಸೇರಿದಂತೆ ಜಿಲ್ಲಾ ಬಿಜೆಪಿ ಪಧಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.