ಜನರ ಅಪೇಕ್ಷೆಗೆ ತಕ್ಕಂತೆ ಕೆಲಸ ಕಾರ್ಯ ಮಾಡುವೆ: ಬಾಬಾಸಾಹೇಬ ಪಾಟೀಲ 

Ravi Talawar
ಜನರ ಅಪೇಕ್ಷೆಗೆ ತಕ್ಕಂತೆ ಕೆಲಸ ಕಾರ್ಯ ಮಾಡುವೆ: ಬಾಬಾಸಾಹೇಬ ಪಾಟೀಲ 
WhatsApp Group Join Now
Telegram Group Join Now
ನೇಸರಗಿ: ಕಿತ್ತೂರು ಚನ್ನಮ್ಮನ ಮತಕ್ಷೇತ್ರದ ಸರ್ವಾoಗಿನ ಮೂಲಭೂತ ಸೌಕರ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡುತ್ತಿದ್ದು ಸಾರ್ವಜನಿಕರ ಅಪೇಕ್ಷೆಗಳು ಬಹಳಷ್ಟು ಇದ್ದು ಹಂತ ಹಂತವಾಗಿ ಕೆಲಸ ಕಾರ್ಯಗಳನ್ನು ಮಾಡಲಾಗುವದೆಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
ಅವರು ಸಮೀಪದ  ದೇಶನೂರ ಗ್ರಾಮದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುಧಾನದಲ್ಲಿ ಸಿ ಸಿ ರಸ್ತೆ ನಿರ್ಮಾಣಕ್ಕೆ 10 ಲಕ್ಷ ರೂಪಾಯಿಗಳ ಅನುಧಾನದ ಕಾಮಗಾರಿಗೆ ಭೂಮಿಪೂಜೆ, ತಾಲೂಕಿನ ಹೊಸಕೋಟಿ ಗ್ರಾಮದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ  10 ಲಕ್ಷ ರೂಪಾಯಿಗಳ ಸಿ ಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ, ದೇಶನೂರ ಗ್ರಾಮದಲ್ಲಿ   ಮಹಿಳಾ ಮತ್ತು ಮಕ್ಕಳ   ಇಲಾಖೆ ಮತ್ತು ನರೇಗಾ ಯೋಜನೆಯಡಿಯಲ್ಲಿ 20 ಲಕ್ಷ ರೂಪಾಯಿಗಳ ಅನುಧಾನದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ ದೇಶನೂರ ಗ್ರಾಮದ ಎಲ್ಲ ಆಗು ಹೋಗುಗಳ ಅಹವಾಲು ಸ್ವೀಕರಿಸಿದ್ದೇನೆ. ರೈತರ, ಬಡವರ ಕೆಲಸ ಮಾಡುವ ಉದ್ದೇಶದಿಂದ ಹೆಚ್ಚಿನ ಪ್ರಯತ್ನ ಮಾಡಲಾಗುವದು ಎಂದರು.
ಕಾರ್ಯಕ್ರಮದಲ್ಲಿ ಯುವ ಮುಖಂಡರಾದ ಸಚಿನ ಪಾಟೀಲ,ಹಿರಿಯ ಮುಖಂಡರು, ಮಾಜಿ ಗ್ರಾಂ ಪಂ ಅಧ್ಯಕ್ಷ ದೀಪಕಗೌಡ ಪಾಟೀಲ, ಪ್ರಕಾಶ ಮುಂಗರವಾಡಿ, ಪಂಚಾಯತ ರಾಜ ಸಹಾಯಕ ಇಂಜಿನಿಯರ್ ಮಹೇಶ ಹೊಲಿ,ರಾಮಚಂದ್ರ ಸಾಳವಂಕಿ,ಮಲ್ಲಿಕಾರ್ಜುನ ಕಲ್ಲೋಳಿ, ಅಣ್ಣಪ್ಪ ಕಡಕೋಳ, ಅಯೂಬ್ ಗಣಾಚಾರಿ, ಸದಾಶಿವ ಕಮತಗಿ, ಶಾನ ರಾಮಣ್ಣವರ, ದಾನಮ್ಮ ಹರಕುಣಿ, ರಾಜು ಮುಚoಡಿ , ಮುಸ್ತಫಾ ಅಥಣಿ, ಶಿವಲೀಲಾ ಪಾಟೀಲ, ಸೋಮನಿಂಗ ಕೋಟಗಿ,ಶಿವಾನಂದ ಮೆಟ್ಯಾಳ,ರಾಯನಗೌಡ ಪಾಟೀಲ, ನಿಂಗಪ್ಪ ತಳವಾರ, ಸುರೇಶ ಅಗಸಿಮನಿ, ಪ್ರಕಾಶ ತೋಟಗಿ, ಯಮನಪ್ಪ ಪೂಜೇರಿ,ತಾಲೂಕ ಅಂಗನವಾಡಿ ಅಧಿಕಾರಿಗಳು, ಶಿಕ್ಷಕರು, ಕಾರ್ಯಕರ್ತರು, ದೇಶನೂರ ಗ್ರಾಮಸ್ಥರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article