ಬೈಲಹೊಂಗಲ. ಡಾ. ವೀರೇಂದ್ರ ಹೆಗ್ಗಡೆ ಹಾಗೂ ಮಾತೋಶ್ರೀ ಹೇಮಾವತಿ ವೀ. ಹೆಗ್ಗಡೆ ಅವರ ಆಶೀರ್ವಾದದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಬೈಲಹೊಂಗಲ ಇವರ ಆಶ್ರಯದಲ್ಲಿ ಇಂದು ದಿ 16-11-2024 ರಿಂದ 23-11-2024 ರವೆಗೆ ತಾಲೂಕಿನ ಕೊರವಿಕೊಪ್ಪ ಗ್ರಾಮದ ಶ್ರೀ ಮಡಿವಾಳೇಶ್ವರ ದೇವಸ್ಥಾನದಲ್ಲಿ ಮದ್ಯವರ್ಜನ ಶಿಬಿರವನ್ನು ಏರ್ಪಡಿಸಲಾಗಿದೆ.
ದಿ 16 ರಂದು ಕಾರ್ಯಕ್ರಮ ಉದ್ಘಾಟನೆ ಅನೇಕ ಮಹನೀಯರಿಂದ ನೇರವೇರುವದು.ನುರಿತ ವೈದ್ಯರ ತಂಡದಿಂದ ಶಿಬಿರಕ್ಕೆ ಬರುವ ವ್ಯಸನಿಗಳಿಗೆ ತಿಳಿ ಹೇಳಿ, ವ್ಯಸನದಿಂದ ಆಗುವ ದುಷ್ಟಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ತಮ್ಮ ಕುಟುಂಬಕ್ಕೆ, ಗ್ರಾಮಕ್ಕೆ ಆದರ್ಶ ವ್ಯಕಿಯಾಗಿ ಸುಂದರ ಜೀವನ ನಡೆಸಲು ಸರ್ವ ವ್ಯಸನಿಗಳ ಪರಿವರ್ತನೆಗೆ ಶ್ರೀ ಧರ್ಮಸ್ಥಳ ಗ್ರಾಮೀಣಭಿವೃದ್ಧಿ ಯೋಜನೆಯ ಉದ್ದೇಶವಾಗಿದ್ದು ಇಲ್ಲಿಯವರೆಗೂ 1885 ಮದ್ಯವರ್ಜನೆ ಶಿಬಿರಗಳು ಕರ್ನಾಟಕ ರಾಜ್ಯದೆಂತ ಯಶಶ್ವಿಯಾಗಿದ್ದು ಈಗ 1886 ನೇ ಶಿಬಿರವು ಕೊರವಿಕೊಪ್ಪ ಗ್ರಾಮದಲ್ಲಿ ನೆರವೇರುತ್ತಿದ್ದು ಇದರ ಸದುಪಯೋಗವನ್ನು ಪಡೆದು ಇಂದಿನಿಂದ ಪ್ರಾರಂಭವಾಗುವ ಮದ್ಯವರ್ಜನ ಶಿಬಿರದಲ್ಲಿ ಕುಟುಂಬಸ್ಥರು ಮದ್ಯ ವ್ಸಸನಿಗಳನ್ನು ಕರೆತರುವ ಕೆಲಸ ಮಾಡಬೇಕು.
ಪ್ರತಿದಿನ ಅನೇಕ ಮಹನೀಯರಿಂದ ಹವ್ಯಾಸಗಳಿಂದ ಆಗುವ ಪರಿಣಾಮ, ಕುಟುಂಬಕ್ಕೆ ಹಾಗೂ ಸಮಾಜದಲ್ಲಿ, ಆರೋಗ್ಯದಲ್ಲಿ ಆಗುವ ತೊಂದರೆಗಳ ಕುರಿತು ಅನೇಕ ಮಠಾಧೀಶರು, ರಾಜಕೀಯ ಮುಖಂಡರು, ತತ್ವಜ್ಞಾನಿಗಳು ಪ್ರವಚನ ನೀಡಲಿದ್ದಾರೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಭಿವೃದ್ಧಿ ಯೋಜನೆಯ ಬೈಲಹೊಂಗಲ ತಾಲೂಕಾ ಯೋಜನಾಧಿಕಾರಿಗಳಾದ ವಿಜಯಕುಮಾರ ಎಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.