ಬೈಲಹೊಂಗಲದಲ್ಲಿ ವಕ್ಫ ಕಾನೂನನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಬೈಲಹೊಂಗಲ: ರಾಜ್ಯದ ರೈತರ ಜಮೀನಿನ ಮೇಲೆ ಅನಧಿಕೃತವಾಗಿ ವಕ್ಫ ಹೆಸರು ನಮೂದವಾಗಿರುವದನ್ನು ರದ್ದುಗೊಳಿಸಬೇಕು. ವಕ್ಫ ಕಾನೂನು ದುರ್ಭಳಕೆ ಆಗುತ್ತಿದ್ದು ಕೂಡಲೇ ರದ್ದುಪಡಿಸುವಂತೆ ಒತ್ತಾಯಿಸಿ, ನಾಗರಿಕ ಹಿತ ರಕ್ಷಣಾ ವೇದಿಕೆ, ವಿಶ್ವ ಹಿಂದೂ ಪರಿಷತ್, ಭಜರಂಗ ದಳ, ಮಾಜಿಸೈನಿಕರ ಸಂಘ, ರೈತ ಪರ ಸಂಘಟಣೆಗಳು, ದಲಿತ ಸಂಘರ್ಷ ಸಮೀತಿ, ವಿಶ್ವಕರ್ಮ ಸಮಾಜ, ರಾಜಸ್ಥಾನ ಸಂಘ, ಹಡಪದ ಸಮಾಜ ಆಶ್ರಯದಲ್ಲಿ ಪಟ್ಟಣದ ಎಸ್.ಆರ್.ಸರ್ಕಲ್ದಲ್ಲಿ ಸುಮಾರು ಎರಡು ಘಂಟೆಗಳ ಕಾಲ ರಸ್ತೆ ರೋಖೋ ನಡೆಸಿ ಪ್ರತಿಭಟಿಸಿ ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಅರ್ಪಿಸಿದರು.
ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ರಾಜ್ಯದಲ್ಲಿ ವಕ್ಫ ಕಾನೂನು ದುರ್ಭಳಕೆ ಮಾಡಿಕೊಂಡು ರೈತರ ಜಮೀನು, ಸ್ಮಶಾನ ಭೂಮಿ, ಮಠ, ದೇವಾಲಯಗಳು ಇನ್ನೀತರ ಸ್ಥಳಗಳ ಪಹಣಿ ಪತ್ರಿಕೆಯಲ್ಲಿ ಏಕಾ ಏಕಿ ವಕ್ಫ ಆಸ್ತಿ ಎಂದು ನಮೂದಾಗುತ್ತಿದ್ದು ಇದರಿಂದ ಜನ ಸಾಮಾನ್ಯರಲ್ಲಿ ಆತಂಕ ಉಂಟು ಮಾಡಿದೆ. ಕೂಡಲೇ ರಾಜ್ಯ ಸರಕಾರ ಪಹಣಿ ಪತ್ರಿಕೆಯಲ್ಲಿರುವ ವಕ್ಫ ಆದೇಶವನ್ನು ಸಂಪೂರ್ಣವಾಗಿ ರದ್ದು ಮಾಡಬೇಕು. ಕೂಡಲೇ ಕೇಂದ್ರ ಸರಕಾರ ವಕ್ಫ ಕಾಯ್ದೆಯನ್ನು ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟ ಮಾಡಿ ಸರಕಾರಕ್ಕೆ ಬಿಸಿ ಮುಟ್ಟಿಸಲಾಗುದೆಂದರು.
ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ ವಕ್ಫ ಕಾನೂನನ್ನು ಸಂಪೂರ್ಣ ದುರ್ಭಳಕೆ ಮಾಡಿಕೊಂಡು ರೈತರ, ಸ್ಮಶಾನ ಭೂಮಿಗಳು ಸೇರಿದಂತೆ ಇತರೇ ಜಮೀನುಗಳ ಪಹಣಿ ಪತ್ರಿಕೆಯಲ್ಲಿ ವಕ್ಫ ಆಸ್ತಿ ಎಂದು ನಮೂದ ಮಾಡಿ ವಂಚನೆಯೊಂದಿಗೆ ಘೋರ ಅನ್ಯಾಯ ಮಾಡುತ್ತಿರುವ ಸರಕಾರದ ವಿರುದ್ಧ ಕಿಡಿ ಕಾರಿ ಕೂಡಲೇ ಈ ಕಾನೂನು ರದ್ದು ಪಡಿಸದಿದ್ದರೆ ಇಲ್ಲದಿದ್ದರೆ ಅಮರಣ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವದೆಂದು ಎಚ್ಚರಿಕೆ ನೀಡಿದರು.
ಚಿತ್ರ ನಟ ಶಿವರಂಜನ ಬೋಳಣ್ಣವರ, ಪ್ರಮೋದಕುಮಾರ ವಕ್ಕುಂದಮಠ, ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ಮೆಳವಂಕಿ, ಉದ್ಯಮಿ ವಿಜಯ ಮೆಟಗುಡ್ಡ, ನಿಂಗಪ್ಪ ಚೌಡಣ್ಣವರ, ಜಿ.ಪಂ.ಮಾಜಿ ಸದಸ್ಯ ಶಂಕರ ಮಾಡಲಗಿ, ಕಾಶೀನಾಥ ಬಿರಾದಾರ, ರೈತ ಸಂಘದ ಮುಖಂಡ ಮಹಾಂತೇಶ ಕಮತ, ಬಿ.ಎಂ.ಚಿಕ್ಕನಗೌಡರ ಮಾತನಾಡಿ, ರಾಜ್ಯದಲ್ಲಿ ವಕ್ಫ ಕಾನೂನನ್ನು ಸಂಪೂರ್ಣವಾಗಿ ದುರ್ಭಳಕೆ ಮಾಡಿಕೊಂಡು ರೈತರ ಮತ್ತು ಮನೆ, ಮಠ-ಮಂದಿರ, ಇತರೇ ಪ್ರಮುಖ ಸ್ಥಳಗಳ ಪಹಣಿ ಪತ್ರಿಕೆಯಲ್ಲಿ ವಕ್ಫ ಆಸ್ತಿ ಎಂದು ನಮೂದಾಗುತ್ತಿದ್ದು ಇದನ್ನು ಕೂಡಲೇ ರಾಜ್ಯ ಸರಕಾರ ರದ್ದುಪಡಿಸಬೇಕೆಂದು ಹರಿಹಾಯ್ದರು. ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ನಾಚಿಕೆ, ಮಾನ, ಮರ್ಯಾದೆ ಇದೆಯಾ ಅಂತಾ ಪ್ರಶ್ನಿಸುತ್ತಾರೆ, ರಾಜ್ಯದಲ್ಲಿ ಇಷ್ಟೊಂದು ಆವಾಂತರ ನಡೆದರೂ ರೈತರ ಭೂಮಿ ಕಬಳಿಸುತ್ತಿರುವ ನಿಮ್ಮ ಸರಕಾರಕ್ಕೆ ನಾಚಿಕೆ ಆಗುವದಿಲ್ಲವೇ ಆಕ್ರೋಶ ವ್ಯಕ್ತಪಡಿಸಿದರು.
ಚಂದ್ರಶೇಖರ ಕೊಪ್ಪದ, ಸಂತೋಷ ಹಡಪದ, ಪುಂಡಲೀಕ ಭಜಂತ್ರಿ, ವಿಜಯ ಪತ್ತಾರ, ಸಿ.ಕೆ.ಮೆಕ್ಕೆದ, ರಾಜು ಬೊಂಗಾಳೆ, ಬೀರಪ್ಪ ದೇಶನೂರ, ಗೂಳಪ್ಪ ಇಟಗಿ, ವೀರನಗೌಡಾ ದೊಡ್ಡವೀರಪ್ಪನವರ, ಅಪ್ಪಣ್ಣ ಹಡಪದ, ಗೀರೀಶ ಹಲಸಗಿ, ಚಿದಂಬರ ಮೇಟಿ, ಸುರೇಶ ಸಂಪಗಾಂವಿ, ಶ್ರೀಕಾಂತ ಶಿರಹಟ್ಟಿ, ಕುಬೇರ ಪೀರಗೋಜಿ, ಬಸಯ್ಯ ಹಿರೇಮಠ, ಸಂಗಮೇಶ ಸವದತ್ತಿಮಠ, ರವಿ ಸಿದ್ದಣ್ಣವರ ಮಾತನಾಡಿ, ಸರಕಾರದ ವಿರುದ್ಧ ಕಿಡಿ ಕಾರಿದರು. ಉಪವಿಭಾಗಾಧಿಕಾರಿ ಪ್ರಭಾವತಿ ಫಕ್ಕೀರಪೂರ ಮನವಿ ಸ್ವೀಕರಿಸಿ ಮಾತನಾಡಿ, ತಮ್ಮ ಮನವಿಯನ್ನು ಸರಕಾರದ ಗಮನಕ್ಕೆ ತರುವದಾಗಿ ಭರವಸೆ ನೀಡಿದ ನಂತರ ಪ್ರತಿಭಟಣೆಯನ್ನು ಹಿಂದಕ್ಕೆ ಪಡೆದರು.
ಸೋಮನಾಥ ಸೊಪ್ಪಿಮಠ, ಎಫ, ಎಸ್.ಸಿದ್ದನಗೌಡರ, ಮುರಗೆಪ್ಪ ಗೂಂಡ್ಲೂರು, ಬಸವರಾಜ ರಾಯರ, ಮಹಾಂತೇಶ ಜಿಗಜಿನ್ನಿ, ಅಶೋಕ ಜವಳಿ, ನಾರಾಯಣ ನಲವಡೆ, ನಾಗರಾಜ ಗೂಂಡ್ಲೂರ, ಮಲ್ಲಿಕಾರ್ಜುನ ಹುಂಬಿ, ಸುಭಾಶ ತುರಮರಿ ಸೇರಿದಂತೆ ನೂರಾರು ನಾಗರಿಕರು ಇದ್ದರು.