ರಾಜ್ಯವು ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲಿ: ಸದಾಶಿವ ಹಳ್ಳೂರ

Ravi Talawar
ರಾಜ್ಯವು ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲಿ: ಸದಾಶಿವ ಹಳ್ಳೂರ
WhatsApp Group Join Now
Telegram Group Join Now

 

ರನ್ನ ಬೆಳಗಲಿ: ನ.7.,ಪಟ್ಟಣದ ದತ್ತಾತ್ರೇಯ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಸರ್ಕಾರಿ ಹೆಣ್ಣು
ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ರನ್ನ ಬೆಳಗಲಿಯ ಆಶ್ರಯದಲ್ಲಿ ಶುಕ್ರ ವಾರ ದಂದು ೬೯ ನೇ
ಕನ್ನಡ ರಾಜ್ಯೋತ್ಸವ ಸಮಾರಂಭ ಕಾರ್ಯಕ್ರಮ ಜರುಗಿತು.

ರಾ? ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸದಾಶಿವ ಹಳ್ಳೂರ ಅಧ್ಯಕ್ಷರು ಎಸ್.ಡಿ.ಎಂ.ಸಿ ಅವರು
ಭಾರತದ ಶ್ರೇ?ತೆಯಲ್ಲಿ ನಮ್ಮ ರಾಜ್ಯವು ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲಿ, ಕನ್ನಡ
ನಮ್ಮ ಮಾತೃಭಾ? ಹಲವಾರು ಭಾ?ಗಳನ್ನು ಕಲಿತರು, ಅರ್ಥೈಸಿಕೊಳ್ಳುವ ಏಕೈಕ ಭಾ?
ಅದುವೇ ಮಾತೃಭಾ?. ಕನ್ನಡ ಭಾ? ವ್ಯಾಕರಣದಲ್ಲಿ ಹಿಡಿತವನ್ನು ಸಾಧಿಸಿದರೆ. ಉಳಿದ ಭಾ?ಗಳನ್ನು
ಅರ್ಥೈಸಿಕೊಳ್ಳಲು ಸುಲಭವಾಗುತ್ತದೆ. ಪ್ರತಿಯೊಂದು ಕನ್ನಡದ ಪದಗಳು ಪ್ರತ್ಯೇಕವಾದ
ಅರ್ಥವನ್ನು ಹೊಂದಿರುವ ವಿಶಿ?ವಾದ ಭಾ? ಕನ್ನಡ ಎಂದು ತಿಳಿಸಿದರು.
ಶಾಲೆಯ ಎಸ್.ಡಿ.ಎಂ.ಸಿ ಸದಸ್ಯರಾದ ಸದಾಶಿವ ಪೂಜೇರಿ(ಗುಲಗಂಜಿಕೊಪ್ಪ) ಅವರು ನಾಡ
ಧ್ವಜಾರೋಹಣವನ್ನು ನೆರವೇರಿಸಿದರು. ಮಹಾಲಿಂಗಪ್ಪ ಮೆಳ್ಳಿಗೇರಿ ಭುವನೇಶ್ವರಿ ದೇವಿಯ
ಭಾವಚಿತ್ರಕ್ಕೆ ಪೂಜಿ ಸಲ್ಲಿಸಿದರು.

ಶಾಲೆಯ ಮುಖ್ಯ ಗುರುಮಾತೆಯರಾದ ಶ್ರೀಮತಿ ಎಸ್.ಎಲ್.ಕಠಾರೆ ಅವರು ಭಾರತ ಮಾತೆಯ
ಜೇ? ಪುತ್ರಿ ಕರ್ನಾಟಕ ಮಾತೆ.ರಾ? ಮತ್ತು ನಾಡಿನ ಬಗ್ಗೆ ಗೌರವ ಮತ್ತು ಅಭಿಮಾನ ಎಲ್ಲ
ವಿದ್ಯಾರ್ಥಿಗಳಲ್ಲಿ ಇರಲೇಬೇಕು. ಕನ್ನಡಿಗರ ಸ್ವಾಭಿಮಾನದ ಸಂಕೇತವೇ ನಾಡ ಧ್ವಜ ಅದುವೇ
ಸೌಭಾಗ್ಯದ ಸಂಕೇತವಾಗಿದೆ. ಕನ್ನಡ ನಾಡ ಧ್ವಜಗಳನ್ನು ಹಾಗೂ ದೀಪಾವಳಿಯ ನಿಮಿತ್ಯ ನಾಡ
ಧ್ವಜದ ಬಣ್ಣದ ಹಾಳೆಗಳಲ್ಲಿ ಆಕಾಶಬುಟ್ಟಿ ಮತ್ತು ದೀಪದ ಹಣತೆಗಳನ್ನು ಮಣ್ಣಿನಲ್ಲಿ ತಯಾರಿಸಿದ
ವಿದ್ಯಾರ್ಥಿಗಳಿಗೆ ಅಭಿನಂದಿಸಿ ಅವರ ಉತ್ಸಾಹಕ್ಕೆ ಪ್ರೋತ್ಸಹಾದಾಯಕವಾಗಿ ಪ್ರಾಸ್ತಾವಿಕ ನುಡಿಯಲ್ಲಿ
ಅಭಿನಂದನೆಯನ್ನು ಸಲ್ಲಿಸಿ ಸ್ವಾಗತ ಗೈದರು.

ಈ ವೇಳೆ ಶಿಕ್ಷಕಿಯರಾದ ಶ್ರೀಮತಿ ಎಸ್.ಪಿ. ಜೋಶಿ, ಶ್ರೀಮತಿ ಎಚ್. ಬಿ. ಜಮಾದಾರ, ಶ್ರೀಮತಿ ಆರ್.ಡಿ. ಬಂಡಿ,
ಶ್ರೀಮತಿ ಎಸ್.ಎಚ್. ಮಾದರ, ಕುಮಾರಿ ರೂಪಾ ದಂಡಿನ, ಹಾಗೂ ಅಡಿಗೆ ಸಿಬ್ಬಂದಿಯವರಾದ ಶೋಭಾ
ವೀರಘಂಟಿ, ಕಾಳಮ್ಮ ಬಡಿಗೇರ, ಭಾರತಿ ಮಳ್ಳಿಗೇರಿ.ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.ಶಿಕ್ಷಕರಾದ
ರಾಘವೇಂದ್ರ ನೀಲನ್ನವರ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

WhatsApp Group Join Now
Telegram Group Join Now
Share This Article