ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಸಂಸದೆ ಪ್ರಿಯಂಕಾ ಜಾರಕಿಹೊಳಿ ಭೇಟಿ-ಪರಿಶೀಲನೆ

Ravi Talawar
ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಸಂಸದೆ ಪ್ರಿಯಂಕಾ ಜಾರಕಿಹೊಳಿ ಭೇಟಿ-ಪರಿಶೀಲನೆ
WhatsApp Group Join Now
Telegram Group Join Now
ಬೆಳಗಾವಿ: ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ  ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಭೇಟಿ ನೀಡಿ, ವಿಮಾನ ನಿಲ್ದಾಣ ವಿಕ್ಷೀಸಿ, ನೂತನ ನಿರ್ಮಾಣವಾಗುತ್ತಿರುವ ಟರ್ಮಿನಲ್ ಅಭಿವೃದ್ಧಿ ಕಾಮಗಾರಿಗಳ ಕುರಿತು  ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಟರ್ಮಿನಲ್ ಕಟ್ಟಡ, ರನ್‌ವೇ, ಟ್ಯಾಕ್ಸಿ ವೇ, ಬ್ಯಾಗೇಜ್ ಹ್ಯಾಂಡಲಿಂಗ್ ವ್ಯವಸ್ಥೆ, ಸೆಕ್ಯುರಿಟಿ ಸ್ಕ್ಯಾನರ್ ಸೇರಿದಂತೆ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿ, ಭದ್ರತಾ ಉಪಕರಣಗಳೂ ಸೇರಿದಂತೆ ಬಾಕಿ ಕಾಮಗಾರಿಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಅಂತರಾಷ್ಟ್ರೀಯ ಮಟ್ಟಕ್ಕೆ ವಿಮಾನ ನಿಲ್ದಾಣಮೇಲ್ದರ್ಜೆಗೆ ಏರಿಸುವ ಕಾಮಗಾರಿ ಕುರಿತು ಸುದೀರ್ಘ ಚರ್ಚೆ ನಡೆಸಿದ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು,  ಹಾಗೂ  ಸ್ಥಗಿತಗೊಂಡ ವಿಮಾನ ಮರು ಆರಂಭಿಸಲು ಅಧಿಕಾರಿಗಳಿಗೆ ಸೂಚಿಸಿದರು.  ರಾಜ್ಯದ ವಿವಿಧ ಜಿಲ್ಲೆಗಳಿಗೆ ಬೆಳಗಾವಿಯಿಂದ ಸಂಪರ್ಕ ಕಲ್ಪಿಸುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎನ್ನುತ್ತ, ಇದರಿಂದ ಬೆಳಗಾವಿ ಅಭಿವೃದ್ಧಿ ಉದ್ಯಮಿ, ಕೈಗಾರಿಕಾ  ಅನುಕೂಲವಾಗಲಿದೆ  ಎಂದು ತಿಳಿಸಿದ ಅವರು, ನಿಲಜಿಯಿಂದ ಸಾಂಬ್ರಾವರೆಗೂ  ಶೀಘ್ರವೇ  ರಸ್ತೆ ಕಾಮಗಾರಿ ಆರಂಭಿಸಿ ಜನರಿಗೆ ಸುಗಮ ಸಂಚಾರಕ್ಕೆ ಅನೂಕೂಲ ಮಾಡಿಕೊಂಡುವಂತೆ ಸೂಚಿಸಿದರು.
ಇದೇ ವೇಳೆ ಸಂಸದೆ ಪ್ರಿಯಂಕಾ ಅವರಿಗೆ ಮಾಹಿತಿ ನೀಡಿದ ವಿಮಾನ ನಿಲ್ದಾಣದ ನಿರ್ದೇಶಕ ಎಸ್ ತ್ಯಾಗರಾಜನ್ ಅವರು,  ನೆರೆಯ ಮಹಾರಾಷ್ಟ್ರ ಮತ್ತು ಗೋವಾದೊಂದಿಗೆ ಗಡಿ ಹಂಚಿಕೊಂಡಿರುವ ಬೆಳಗಾವಿ ಮೂರು ರಾಜ್ಯಗಳಿಗೆ ಕೇಂದ್ರಸ್ಥಾನವಾಗಿದೆ.  357 ಕೋಟಿ ರೂ. ವೆಚ್ಚದ  ಹೊಸ ಟರ್ಮಿನಲ್ ನಿರ್ಮಾಣದಿಂದ ಸಂಪರ್ಕ ವ್ಯವಸ್ಥೆ ಸುಧಾರಿಸಲಿದೆ.  ಬೆಳಗಾವಿ ಪ್ರಗತಿ ಹೊಂದಲು ಅನೂಕುಲವಾಗಲಿದೆ.  ವಿಮಾನ ನಿಲ್ದಾಣ ಮೇಲ್ದರ್ಜೆಗೇರಿಸುವುದನ್ನು ಒಳಗೊಂಡಂತೆ ಎಲ್ಲ ಭೌತಿಕ ಕಾಮಗಾರಿಗಳು ಕಾರ್ಯರಂಭದಲ್ಲಿವೆ.  ಶೀಘ್ರವೇ ಎಲ್ಲ ಕಾಮಗಾರಿಗಳು ಮುಗಿದು ವಿಮಾನಗಳ ಹಾರಾಟ ನಡೆಯಲಿದೆ ಎಂದು ತಿಳಿಸಿದರು.
  ನಿಲ್ದಾಣ ಕಾರ್ಯಾರಂಭ ಮಾಡಿದ ನಂತರ ಈ ಭಾಗದ ಸರ್ವಾಂಗೀಣ ಬೆಳವಣಿಗೆಗೆ ಅನುಕೂಲವಾಗಲಿದೆ.  ಕೃಷಿ ಉತ್ಪನ್ನಗಳ ರಫ್ತಿಗೂ ಅನುಕೂಲವಾಗಲಿದೆ. ವ್ಯಾಪಾರ ವಹಿವಾಟಿಗೂ ಉತ್ತೇಜನ ದೊರೆಯಲಿದ್ದು, ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆ ಸಹಕಾರಿಯಾಗಲಿದೆ ಎಂದು ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರಿಗೆ  ವಿಮಾನ ನಿಲ್ದಾಣದ ನಿರ್ದೇಶಕ ಎಸ್ ತ್ಯಾಗರಾಜನ್  ಹೇಳಿದರು.
ಮೂರು ರಾಜ್ಯಗಳಿಗೆ ಕೇಂದ್ರಸ್ಥಾನವಾಗಿರುವ ವಿಮಾನ ನಿಲ್ದಾಣಕ್ಕೆ ಮುಂದಿನ ದಿನಗಳಲ್ಲಿ ಹೆಚ್ಚಿನ ವಿಮಾನ  ಹಾರಾಟ ನಡೆಯಲಿದೆ, ಹೀಗಾಗಿ  ಕಾರ್‌  ಪಾರ್ಕೀಂಗ್‌  ನಗರ,  ಸಂಖ್ಯೆ ಆದಾರದ ಮೇಲೆ  ಮಾಸ್ಟರ್ ಪ್ಲ್ಯಾನ್  ಈಗಾಗಲೇ ಹಾಕಲಾಗಿದೆ. ಅದಕ್ಕಾಗಿ,   ಸ್ಥಳ ನಿಗದಿ ಪಡಿಸಲಾಗಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಎಸ್ ತ್ಯಾಗರಾಜನ್  ಹೇಳಿದರು.
ಈ ಸಂದರ್ಭದಲ್ಲಿ ವಿಮಾನ ನಿಲ್ದಾಣದ  ನಿರ್ದೇಶಕ ಎಸ್ ತ್ಯಾಗರಾಜನ್ ,  ಡಿಜಿಎಂ, ಸಿಎನ್ ಎಸ್  ಪ್ರತಾಪ್ ರಾವ್ ದೇಸಾಯಿ,   ಪೊಲೀಸ್‌ ಅಧಿಕಾರಿ ಬಾಬು ಚೌಗಲಾ, ಶ್ರವಣ್ಣನ ಡಿಜಿಎಂ ಸಿವಿಲ್ ,  ಮಾನ್ಯೇಜರ್ ಸುದೀಶ ರಾಗಲ್  , ಮಾನ್ಯೇಜರ್ ಮೊಹನಿ ಶಂಕರ್,     ಸೀನಿಯರ್ ಸೂಪರಿಂಟೆಂಡ್ ಸುಭಾಷ್ ಪಾಟೀಲ,  ಇಂಡಿಗೋ ಸೀನಿಯರ್ ಗ್ರಾಹಕರ ಸರ್ವೀಸ್  ಆಶಾರಾಣಿ ಬಸನೆ, ಮಾನ್ಯೇಜರ್ ಸಾಯಿನಾಥ್, ಸ್ಟಾರ್ ಎರ್ ಗ್ರಾಹಕರ ಸರ್ವೀಸ್  ಸೈಯದ್ ಹುಸೇನ್  ಹಾಗೂ ಇತರರು ಇದ್ದರು.
WhatsApp Group Join Now
Telegram Group Join Now
Share This Article