ಜಮ್ಮು-ಕಾಶ್ಮೀರ ವಿಧಾನಸಭಾ ಸ್ಪೀಕರ್​ ಆಗಿ ಅಬ್ದುಲ್ ರಹೀಂ ರಾಥರ್ ಆಯ್ಕೆ

Ravi Talawar
ಜಮ್ಮು-ಕಾಶ್ಮೀರ ವಿಧಾನಸಭಾ ಸ್ಪೀಕರ್​ ಆಗಿ ಅಬ್ದುಲ್ ರಹೀಂ ರಾಥರ್ ಆಯ್ಕೆ
WhatsApp Group Join Now
Telegram Group Join Now

ನ್ಯಾಷನಲ್ ಕಾನ್ಫರೆನ್ಸ್​ನ ಹಿರಿಯ ನಾಯಕ ಮತ್ತು ಶಾಸಕ ಅಬ್ದುಲ್ ರಹೀಂ ರಾಥರ್ ಅವರು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಹಂಗಾಮಿ ಸ್ಪೀಕರ್ ಮುಬಾರಕ್ ಗುಲ್ ಅವರು ಹೊಸ ಅಸೆಂಬ್ಲಿ ಸ್ಪೀಕರ್ ಅಬ್ದುಲ್ ರಹೀಮ್ ರಾಥರ್ ಅವರನ್ನು ಅಭಿನಂದಿಸಿದರು. 80 ವರ್ಷದ ಅಬ್ದುಲ್ ರಹೀಮ್ ರಾಥರ್ ಅವರು ಈಗಾಗಲೇ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಸ್ಪೀಕರ್ ಹುದ್ದೆಯನ್ನು ಅಲಂಕರಿಸಿದ್ದಾರೆ.

ಸರ್ಕಾರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಪಾಲುದಾರರು ಇಂದು ಸ್ಪೀಕರ್ ಹುದ್ದೆಗೆ ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡಲು ಶಾಸಕಾಂಗ ಪಕ್ಷದ ಸಭೆಯನ್ನು ನಡೆಸಿದರು. ಅವರು ಏಳನೇ ಬಾರಿಗೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಬದಲಿಗೆ 1977 ರಿಂದ 2014 ರವರೆಗೆ ನಿರಂತರವಾಗಿ ನ್ಯಾಷನಲ್ ಕಾನ್ಫರೆನ್ಸ್ ಟಿಕೆಟ್‌ನಲ್ಲಿ ಬುದ್ಗಾಮ್ ಜಿಲ್ಲೆಯ ಚಾರ್-ಎ-ಷರೀಫ್ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗಳನ್ನು ಗೆದ್ದಿದ್ದಾರೆ.

WhatsApp Group Join Now
Telegram Group Join Now
Share This Article