ಬೈಕ್ ಮೇಲೆ ಸಂಚರಿಸಿದ ಪೊಲೀಸ್ ಕಮಿಷನರ್

Ravi Talawar
ಬೈಕ್ ಮೇಲೆ ಸಂಚರಿಸಿದ ಪೊಲೀಸ್ ಕಮಿಷನರ್
WhatsApp Group Join Now
Telegram Group Join Now
 ಹುಬ್ಬಳ್ಳಿ ಧಾರವಾಡದಲ್ಲಿ ಕಳೆದ ಹಲವಾರು ದಿನಗಳಿಂದ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಚಟುವಟಿಕೆ ತಡೆಗಟ್ಟಲು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ ಹಾಗೂ ಅವರ ತಂಡ ಅವಳಿ ನಗರದಲ್ಲಿ ಮತ್ತೊಂದು ಮಹತ್ವದ ಕಾರ್ಯ ಕೈಗೆತ್ತಿಕೊಂಡಿದೆ.
ಬುಧವಾರ ರಾತ್ರಿ ಬೈಕ್ ಮೇಲೆ ಸಂಚರಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ,  ಅವರಿಂದ ಮೆಚ್ಚುಗೆ ಗಳಿಸಿದರು. ಜೊತೆಗೆ ತಪ್ಪು ಮಾಡುತ್ತಿದ್ದವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡು ಬಿಸಿ ತಾಕಿಸಿದರು.
ಪೊಲೀಸ್ ಕಮಿಷನರ್ ಎನ್ ಶಶಿಕುಮಾರ, ಡಿಸಿಪಿಗಳಾದ ಮಹಾನಿಂಗ್ ನಂದಗಾವಿ, ಆರ್ ರವೀಶ್ ಅವರಿಗೆ ಎಸಿಪಿ ಹಾಗೂ ಸಿಪಿಐ ಸಾಥ್ ನೀಡಿದ್ದರು. ಅವರೊಂದಿಗೆ ಖಾಕಿಪಡೆ ಕೂಡ ಬೈಕಿನಲ್ಲಿ ಕಾರ್ಯಾಚರಣೆ ನಡೆಸಿದರು.
ಧಾರವಾಡ ನಗರದಾದ್ಯಂತ ಜುಬಿಲಿ ಸರ್ಕಲ್ ವಿವೇಕಾನಂದ ಸರ್ಕಲ್ ಕೆಸಿಡಿ ರಸ್ತೆ   ವಿವಿಧೆಡೆ ವಾಹನ ತಪಾಸಣೆ ನಡೆಸಲಾಯಿತು. ಹುಬ್ಬಳ್ಳಿ ಧಾರವಾಡದ ಜನತೆಯ ನೆಮ್ಮದಿ ಜೀವನಕ್ಕಾಗಿ ನಿರಂತರವಾಗಿ ಹಗಲು ರಾತ್ರಿ ಎನ್ನದೇ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ ಕಮಿಷನರ್ ಎನ್ ಶಶಿಕುಮಾರ್ ಹಾಗೂ ಅವರ ತಂಡ  ಮೀಟರ್ ಬಡ್ಡಿ, ಗಾಂಜಾ ಮಾಫೀಯಾ, ರೌಡಿಶೀಟರ್ ಗಳಿಗೆ ಬಿಸಿ ತಾಕಿಸುವುದು ಸೇರಿದಂತೆ ಯಾವುದೇ ಪ್ರದೇಶಗಳಲ್ಲಿ ಸಣ್ಣ ಗಲಾಟೆಯು ಆಗದಂತೆ ಎಚ್ಚರಿಕೆವಹಿಸುತ್ತಿದ್ದು, ಎಲ್ಲ ಸಮಾಜದವರೊಂದಿಗೆ ಉತ್ತಮ ಒಡನಾಟ ಹೊಂದುವ ಕೆಲಸ ಮಾಡುತ್ತಿರುವುದು ಅವಳಿನಗರದ ಜನತೆಗೆ ಸಮಾಧಾನದ ಸಂಗತಿಯಾಗಿದೆ.
WhatsApp Group Join Now
Telegram Group Join Now
Share This Article