ವಕ್ಫ್ ಹೆಸರು ತೆಗೆದಿದ್ದರೆ ಉಗ್ರ ಹೋರಾಟ: ಮಹಾಲಿಂಗಪ್ಪ ಗುಂಜಿಗಾಂವಿ

Ravi Talawar
ವಕ್ಫ್ ಹೆಸರು ತೆಗೆದಿದ್ದರೆ ಉಗ್ರ ಹೋರಾಟ: ಮಹಾಲಿಂಗಪ್ಪ ಗುಂಜಿಗಾಂವಿ
WhatsApp Group Join Now
Telegram Group Join Now

ಮಹಾಲಿಂಗಪುರ: ಅ.೩೧., ನಗರದ ಪ್ರವಾಸಿ ಮಂದಿರದಲ್ಲಿ ಶ್ರೀರಾಮ ಸೇನಾ (ರಿ) ಕರ್ನಾಟಕ
ಆಶ್ರಯದಲ್ಲಿ ಪತ್ರಿಕಾಗೋಷ್ಠಿ ಜರುಗಿತು.

ಶ್ರೀರಾಮ ಸೇನಾ ರಾಜ್ಯ ಉಪಾಧ್ಯಕ್ಷರಾದ ಮಹಾಲಿಂಗಪ್ಪ ಗುಂಜಿಗಾಂವಿ ಅವರು ಚಿಕ್ಕಮಗಳೂರು
ದತ್ತ ಪೀಠದಲ್ಲಿಯ ಇಸ್ಲಾಮಿಕ್ ಅತಿಕ್ರಮಣ ಮುಕ್ತಿಗಾಗಿ, ಸಂಪೂರ್ಣ ಹಿಂದೂ ಪೀಠಕ್ಕಾಗಿ ನಡೆಯುವ
ದತ್ತ ಮಾಲಾ ಅಭಿಯಾನ ಕುರಿತು, ಮಾಹಿತಿ ನೀಡುವುದರ ಜೊತೆಗೆ ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಅತ್ಯಂತ ಸುಂದರ ರಮಣೀಯ ದತ್ತ ಪೀಠ ಇಸ್ಲಾಮಿಕ್ ಅತಿಕ್ರಮದ ಮೂಲಕ ಹಿಂದೂಗಳ ಭಾವನೆಗೆ
ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ.

ಇದರ ವಿರುದ್ಧ ನಿರಂತರ ೨೦ ವರ್ಷಗಳಿಂದ ಶ್ರೀರಾಮ ಸೇನಾ ಸಂಘರ್ಷ, ಹೋರಾಟ,ರಥಯಾತ್ರೆ, ಶೋಭಾಯಾತ್ರೆ,ಕಾನೂನು ಹೋರಾಟ, ಧರ್ಮ ಸಭೆ, ಸಾಮೂಹಿಕ ದತ್ತ ಜಪ ಮುಂತಾದವುಗಳ ಮೂಲಕ ನಮ್ಮ ಹಕ್ಕನ್ನು ಪಡೆಯಲು ಪ್ರಯತ್ನ ನಡೆಯುತ್ತಲೇ ಇದೆ.ಪ್ರತಿವರ್ಷದಂತೆ ಈ ವರ್ಷವೂ ದತ್ತ ಮಾಲಾ ಅಭಿಯಾನ ೨೦೨೪ ನವೆಂಬರ ೪ ರಿಂದ ನವೆಂಬರ್ ೧೦ ರ ವರೆಗೆ ಜರುಗಲಿದೆ.

ನವೆಂಬರ್ ೪- ಮಾಲಾ ಧಾರಣೆ ನವೆಂಬರ್ ೭- ದತ್ತ ದಿಪೋತ್ಸವ ನವೆಂಬರ್ ೯- ಪಡಿ ಸಂಗ್ರಹ ( ಭೀಕ್ಷಾಟನೆ )
ನವೆಂಬರ್ ೧೦- ಚಿಕ್ಕಮಗಳೂರಲ್ಲಿ ಧರ್ಮ ಸಭೆ, ಶೋಭಯಾತ್ರೆ, ದತ್ತ ಪೀಠದಲ್ಲಿ ಹೋಮ, ಹವನ. ಪ್ರಸಾದ ವಿತರಣೆ ಕಾರ್ಯಕ್ರಮ ಆಯೋಜನೆಯಾಗಿದ್ದು, ನವೆಂಬರ್ ೧೦ ಕ್ಕೆ ಜರುಗುವ ಧರ್ಮ ಸಭೆಗೆ ಮುಖ್ಯ ಅತಿಥಿಯಾಗಿ ಹಿಂದೂ ಸಿಂಹಿಣಿ, ಪ್ರಖರ ಹಿಂದೂವಾದಿ, ಹೈದ್ರಾಬಾದ್ ನಲ್ಲಿ ಲೋಕಸಭೆ ಚುನಾವಣೆಯಲ್ಲಿ ಓವೈಸಿ ವಿರುದ್ಧ ತೊಡೆ ತಟ್ಟಿದ್ದ ಶ್ರೀಮತಿ ಮಾಧವಿ ಲತಾ, ವಿಧಾನ ಪರಿಷತ್ ಸದಸ್ಯ, ಹಿಂದೂವಾದಿ ಸಿ. ಟಿ. ರವಿ, ಮಾಜಿ ಸಂಸದ, ಲೇಖಕ,ಅಪ್ಪಟ ಹಿಂದುವಾದಿ ಪ್ರತಾಪ್ ಸಿಂಹ ಧರ್ಮ ಸಭೆಯಲ್ಲಿ ಭಾಗವಹಿಸಲಿದ್ದು ಹಿಂದೂ ಹೃದಯ ಸಾಮ್ರಾಟ್ ಪ್ರಮೋದಜಿ ಮುತಾಲಿಕರ ನೇತೃತ್ವದಲ್ಲಿ ಎಲ್ಲ ರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿ.

ದತ್ತ ಪೀಠದಲ್ಲಿರುವ ಅನಧಿಕೃತ ಇಸ್ಲಾಮಿಕ್ ಕುರುಹುಗಳನ್ನು ಮೂಲ ದರ್ಗಾ ನಾಗೇನಹಳ್ಳಿಗೆ ಸ್ಥಳಾಂತರ.ಕೇವಲ ಹಿಂದೂ ಅರ್ಚಕರು ಇರಬೇಕು. ಮೌಲ್ವಿ ತಗೆದು ನಾಗೇನಹಳ್ಳಿಗೆ ಕಳುಹಿಸಬೇಕು.ದತ್ತ ಭಕ್ತರಿಗೆ ಮಹಾ ಪ್ರಸಾದ ವ್ಯವಸ್ಥೆ ಆಗಲೇಬೇಕು.ವಸತಿ ವ್ಯವಸ್ಥೆ ಸಹ ಆಗ್ಬೇಕು.ಪೀಠದಲ್ಲಿ ಕಳುವಾದ ಎಲ್ಲವೂ ಪೀಠಕ್ಕೆ ತಿರುಗಿಸಬೇಕು.ನಿತ್ಯ ಗಾಣಗಪುರದಿಂದ ದತ್ತ ಪೀಠಕ್ಕೆ ಬಸ್ ಸೇವೆ ಪ್ರಾರಂಭ ಆಗ್ಬೇಕು ಎಂಬ ಬೇಡಿಕೆಗಳನ್ನು ಸರ್ಕಾರ ಆದಷ್ಟು ಬೇಗ ಈಡೇರಿಸಬೇಕು. ಮತ್ತೇ ಗೊರಿಗಳಿಗೆ ಹಸಿರು ಚಾದರ್ ಬಂದ್.ನಮಾಜ್ ಬಂದ್,ಮಾಂಸಹಾರ ಬಂದ್,ಅರ್ಚಕರ

ನೇಮಕ,ದತ್ತ ಪೀಠದ ಆಸ್ತಿ ಕಬಳಿಸಿದವರಿಗೆ ನೋಟೀಸ್ ನೀಡಿ ಕಾರ್ಯಕ್ರಮ ಜರಗಿಸಬೇಕೆಂಬ ಅನೇಕ
ಹೋರಾಟಗಳು ಹೀಗೆ ಹಂತಹಂತವಾಗಿ ಯಶಸ್ವಿಯತ್ತ ಮುನ್ನುಗ್ಗುತ್ತಿದ್ದು ಈ ಸಾರಿ ನಮ್ಮ ಜಿಲ್ಲೆಯಿಂದ ಅತಿ ಹೆಚ್ಚಿನ
ಸಂಖ್ಯೆಯಲ್ಲಿ ಮಾಲಾ ಧಾರಿಗಳು ದತ್ತ ಪೀಠಕ್ಕೆ ಹೊರಡುವವರಿದ್ದಾರೆ ಎಂಬ ಮಾಹಿತಿಯನ್ನು ನೀಡಿದರು.

ಈ ಸಮಯದಲ್ಲಿ ತಾನಾಜಿ ಕಿರಿಕಿರಿ, ಮಹಾಂತೇಶ ಗುಡೇಜಾರ, ಈಶ್ವರ ಕ್ವಾಣ್ಯಾಗೋಳ, ಅನಿಲ ಹೋಣ್ಣಪ್ಪಗೋಳ, ಪ್ರಹ್ಲಾದ ನುಲಿ, ಚೇತನ ಬಂಡೋಲ, ರಘು ಕಬಾಡಿ, ರವಿ ಲಾತೂರ ಯಮನಪ್ಪ ಕೋರಿ ಇದ್ದರು.

WhatsApp Group Join Now
Telegram Group Join Now
Share This Article