ರಾಜ್ಯದ 7 ಮಂದಿ ಪೊಲೀಸ್​ ಅಧಿಕಾರಿಗಳಿಗೆ ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕ

Ravi Talawar
ರಾಜ್ಯದ 7 ಮಂದಿ ಪೊಲೀಸ್​ ಅಧಿಕಾರಿಗಳಿಗೆ ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕ
WhatsApp Group Join Now
Telegram Group Join Now

ಬೆಂಗಳೂರು: ಪ್ರತಿ ವರ್ಷ ಕೊಡ ಮಾಡುವ ಕೇಂದ್ರದ ಗೃಹಮಂತ್ರಿ ದಕ್ಷತಾ ಪದಕಕ್ಕೆ‌ ಈ ಬಾರಿ ರಾಜ್ಯದ ಏಳು ಮಂದಿ ಪೊಲೀಸ್ ಅಧಿಕಾರಿಗಳು ಭಾಜನರಾಗಿದ್ದಾರೆ.

ಕ್ಲಿಷ್ಟ ರೀತಿಯ ಅಪರಾಧ ಪ್ರಕರಣಗಳನ್ನು ಭೇದಿಸಿ ಉತ್ತಮ ತನಿಖೆ ನಡೆಸುವ ತನಿಖಾಧಿಕಾರಿಗಳಿಗೆ ಪ್ರತಿ ವರ್ಷ ಕೇಂದ್ರ ಗೃಹ ಸಚಿವಾಲಯವು ಗೃಹ ಮಂತ್ರಿ ಹೆಸರಿನಲ್ಲಿ ಪದಕ ನೀಡುತ್ತದೆ. ಇದೇ ರೀತಿ, ಈ ವರ್ಷ ಅಪರಾಧ ಪ್ರಕರಣಗಳಲ್ಲಿ ಅತ್ಯುತ್ತಮ ತನಿಖೆ ನಡೆಸಿದ್ದ ಇಬ್ಬರು ಡಿವೈಎಸ್ಪಿ ಸೇರಿ 7 ಮಂದಿ ಅಧಿಕಾರಿಗಳಿಗೆ ಪದಕ ಲಭಿಸಿವೆ.

ಪದಕ ಪಡೆದವರ ವಿವರ: ರಾಜ್ಯ ಆಂತರಿಕಾ ಭದ್ರತಾ ವಿಭಾಗದ ಡಿವೈಎಸ್ಪಿ ಬಸವರಾಜ್ ಕೆ., ಬೆಂಗಳೂರು ನಗರದ ಎಸಿಪಿ ವಿ.ಎಲ್. ರಮೇಶ್, ಇನ್​ಸ್ಪೆಕ್ಟರ್​ಗಳಾದ ಉಮೇಶ್ ಕಾಂಬ್ಳೆ, ನರೇಂದ್ರ ಬಾಬು, ವಸಂತ್ ಕೆ.ಎಂ, ರಮೇಶ್ ಎಚ್, ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್​ಎಸ್​ಎಲ್) ಸೇವೆ ಸಲ್ಲಿಸುತ್ತಿರುವ ಡೆಪ್ಯೂಟಿ ಡೈರೆಕ್ಟರ್ ಡಾ.ಪ್ರವೀಣ್ ಸಂಗನಾಳ್ ಮಠ ಅವರಿಗೆ ಪದಕ ದೊರೆತಿದೆ.
WhatsApp Group Join Now
Telegram Group Join Now
Share This Article