ಟೊರಾಂಟೋ, ಅಕ್ಟೋಬರ್ 31: ಭಾರತ ಮತ್ತು ಕೆನಡಾ ನಡುವಿನ ಭಿನ್ನಾಭಿಪ್ರಾಯ ಹೊಸ ಅತಿರೇಕ ಮಟ್ಟ ತಲುಪುತ್ತಿದೆ. ಕೆನಡಾ ದೇಶವು ಭಾರತವನ್ನು ಉತ್ತರಕೊರಿಯಾ, ಇರಾನ್, ಚೀನಾ, ರಷ್ಯಾ ದೇಶಗಳ ಪಟ್ಟಿಯೊಂದಕ್ಕೆ ಸೇರಿಸಿದೆ.
ಕೆನಡಾದ ಸೈಬರ್ ಭದ್ರತೆಗೆ ಧಕ್ಕೆ ಒದಗಿಸುವ ದೇಶಗಳ ಪಟ್ಟಿ ಅದು. ಕೆನಡಾದ ಸೈಬರ್ ಸೆಕ್ಯೂರಿಟಿ ಸೆಂಟರ್ನ ವಾರ್ಷಿಕ ವರದಿಯೊಂದರಲ್ಲಿ ಈ ಪಟ್ಟಿ ನೀಡಲಾಗಿದ್ದು ಇದರಲ್ಲಿ ಭಾರತದ ಹೆಸರು ಮೊದಲ ಬಾರಿಗೆ ನಮೂದಾಗಿದೆ. 2025-26ರ ವರ್ಷದಲ್ಲಿ ಸರ್ಕಾರಿ ಪ್ರಾಯೋಜಿತವಾಗಿಯೇ ಯಾವ್ಯಾವ ದೇಶಗಳು ಕೆನಡಾ ಭದ್ರತೆಗೆ ಅಪಾಯ ತರಬಹುದು ಎಂಬುದನ್ನು ಈ ವರದಿ ಹೇಳಿದೆ.