ವಿಜಯಪುರ, ಅಕ್ಟೋಬರ್ 30: ವಕ್ಫ್ ಮಂಡಳಿಯಿಂದ ರೈತರಿಗೆ ನೋಟಿಸ್, ರೈತರ ಪಹಣಿಯಲ್ಲಿ ವಕ್ಫ್ ಹೆಸರು ಉಲ್ಲೇಖದಿಂದ ಸುದ್ದಿಯಾಗಿರುವ ವಿಜಯಪುರ ಜಿಲ್ಲೆಯಲ್ಲಿ ರಹಸ್ಯವಾಗಿಯೇ ವಕ್ಫ್ ಹೆಸರಿನಲ್ಲಿ ಆಸ್ತಿ ಕಬಳಿಕೆ ನಡೆಯುತ್ತಿದೆಯಾ ಎಂಬ ಅನುಮಾನ ಇದೀಗ ಬಲವಾಗಿದೆ. ಇದಕ್ಕೆ ಬಲವಾದ ಪುರಾವೆಯೂ ದೊರೆತಿದೆ. ಅಂತ್ಯಸಂಸ್ಕಾರಕ್ಕೆಂದು ಮುಸ್ಲಿಂ ಕುಟುಂದವರಿಗೆ ತುಸು ಜಾಗ ನೀಡಿದ್ದ ಹಿಂದೂ ಕುಟುಂಬವೊಂದರ ಇಡೀ ಆಸ್ತಿಯನ್ನೇ ವಕ್ಫ್ಗೆ ಸೇರಿದ್ದು ಎಂದು ದಾಖಲೆಗಳಲ್ಲಿ ಉಲ್ಲೇಖಿಸಿರುವ ವಿಚಾರ ಈಗ ಬೆಳಕಿಗೆ ಬಂದಿದೆ.
ವಿಜಯಪುರ ಜಿಲ್ಲೆಯ ಹೊನ್ನುಟಗಿ ಗ್ರಾಮದ ಸರ್ವೆ ನಂಬರ್ 271 ರ 13 ಎಕರೆ 8 ಗುಂಟೆ ಜಾಗಕ್ಕೆ ವಕ್ಪ್ ಬೋರ್ಡ್ ಎಂದು ನಮೂದಿಸಲಾಗಿದೆ.