ಸಹಕಾರಿ ರಂಗವನ್ನು ಮುಚ್ಚಿಸಲು ಒಂದು ವರ್ಗದ ಹುನ್ನಾರ: ರಮೇಶ ಕತ್ತಿ.

Ravi Talawar
ಸಹಕಾರಿ ರಂಗವನ್ನು ಮುಚ್ಚಿಸಲು ಒಂದು ವರ್ಗದ ಹುನ್ನಾರ: ರಮೇಶ ಕತ್ತಿ.
WhatsApp Group Join Now
Telegram Group Join Now

ಹುಕ್ಕೇರಿ: ಹಿರಿಯರ ದೂರದೃಷ್ಠಿಯಿಂದ ಎಲ್ಲ ಸಮುದಾಯದ ಹಿತಬಯಸಿ ಸ್ಥಾಪನೆಯಾದ ಸಹಕಾರ ಸಂಘದಲ್ಲಿ ಸ್ವಾರ್ಥ, ತೊರದು ನಿಸ್ವಾರ್ಥ ಮನೋಭಾವನೆಯಿಂದ ಕಾರ್ಯನಿರ್ವಹಿಸಿದರೆ ಮಾತ್ರ ಸಂಘ ಹಾಗೂ ರೈತ ಉಳಿದು ಬೆಳೆಯಲು ಸಾಧ್ಯವೆಂದು ಬಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.

ಹುಕ್ಕೇರಿ ಪಟ್ಟಣದ ವಿಶ್ವರಾಜ ಸಭಾಭವನದಲ್ಲಿ ಹಮ್ಮಿಕೊಂಡ ಸಹಕಾರ ಇಲಾಖೆ, ರಾಜ್ಯ ಸಹಕಾರ ಮಹಾಮಂಡಳ ಹಾಗೂ ಬೆಳಗಾವಿ ಜಿಲ್ಲಾ ಸಹಕಾರ ಯುನಿಯನ್ ಇವುಗಳ ಸಂಯುಕ್ತಾಶ್ರಯದಲ್ಲಿ ಹುಕ್ಕೇರಿ ತಾಲೂಕಿನ ವಿವಿದೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಗಳ ಅದ್ಯಕ್ಷ ಹಾಗೂ ಕಾರ್ಯನಿರ್ವಾಹಕರಿಗೆ ಸಂಘದ ಸಂಗದ ಸರ್ವೋತೋಮುಖ ಬೆಳವಣಿಗೆಗೆ ಒಂದು ದಿನದ ರಾಜ್ಯ ಮಟ್ಟದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಹಕಾರ ಸಂಘದ ಮೂಲಕ ರಾಜ್ಯದ ೩೦ ಲಕ್ಷ ಜನ ರೈತರು ಶೂನ್ಯ ಬಡ್ಡಿದರದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಸಾಲ, ಮನ್ನಾ ಸೌಲಭ್ಯ ಪಡೆದುಕೊಂಡಿದ್ದಾರೆ. ಆದರೆ ಇಂದು ಸಹಕಾರಿ ರಂಗವನ್ನ ಮುಚ್ಚಿಸಲು ಒಂದು ವರ್ಗ ಹುನ್ನಾರ ನಡೆಸಿರುವದು ಕಳವಳಕರ ಸಂಗತಿ ಎಚ್ಚರಗೊಳ್ಳುವದು ಅನಿವಾರ್ಯ ಎಂದರು.

ಕೃಷಿ ಪತ್ತಿನ ಸಹಕಾರಿ ಸಂಘಗಳು ಸಾಲಕ್ಕೆ ಸೀಮಿತವಾಗದೆ ಕೃಷಿ ಉತ್ಪನದ ವ್ಯಾಪಾರ ಅಭಿವೃಧ್ದಿ ಯೋಜನೆಗೆ ಒತ್ತು ನೀಡಬೇಕು ಸಂಸ್ಥೆಗಳು ಆರ್ಥಿಕವಾಗಿ ಸದೃಡವಾಗಿರಲು ಸಾದ್ಯವೆಂದರು. ಸಹಕಾರಿ ಸಂಘವು ರಾಜ್ಯದಲ್ಲಿ ಉತ್ತರ ಕರ್ನಾಟಕ ಅದರಲ್ಲಿಯೂ ಬೆಳಗಾವಿ ಜಿಲ್ಲೆ ಸದೃಡವಾಗಿದೆಂದರು.

ಜಿಲ್ಲಾ ಸಹಕಾರ ಯುನಿಯನ್ ಅಧ್ಯಕ್ಷ ಬಿ.ಡಿ ಪಾಟೀ ಅಧ್ಯಕ್ಷತೆ ವಹಿಸಿದ್ದರು.ನಿರ್ದೇಶಕ ಬಸವರಾಜ ಎಸ್ ಸುಲ್ತಾನಪುರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಹಕಾರ ತರಬೇತಿ ಶಿಕ್ಷಕ ಶಂಕರ ಕರಬಸನ್ನವರ. ಶ್ರೀಶೈಲ್ ಯಡಹಳ್ಳಿ, ಉಪನ್ಯಾಸ ನೀಡಿದರು.

ಸಂಗಮ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ, ಪಿಕಾರ್ಡ ಬ್ಯಾಂಕಿನ ಅಧ್ಯಕ್ಷ ದುರದುಂಡಿ ಪಾಟೀಲ, ಎಪಿಎಮ್ ಸಿ ಅಧ್ಯಕ್ಷ ಮಹಾದೇವ ಜಿನರಾಳೆ, ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷರಾದ ಸತ್ಯಪ್ಪ ನಾಯಿಕ, ಅಣ್ಣಾಗೌಡ ಪಾಟೀಲ, ರಾಜು ಮುನ್ನೋಳಿ, ರಾಜು ಬಿರಾದಾರಪಾಟೀಲ, ಸಿಡಿಓ ಎಸ.ಎಸ್ ಪಾಟೀಲ, ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕ ಎಸ.ಯಡಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಪಿಕೆಪಿಎಸ ಅಧ್ಯಕ್ಷ ಸತ್ಯಪ್ಪಾ ನಾಯಿಕ ವಂದಿಸಿದರು.

ಬೆಳಗಾವಿ ಜಿಲ್ಲಾ ಸಹಕಾರಿ ರಂಗದಲ್ಲಿ ೪೨ ವರ್ಷಗಳ ಕಾಲ ಉತ್ತಮ ಆಡಳಿತ ನಿರ್ವಹಿಸಿದ ಆತ್ಮ ತೃಪ್ತಿ,ಯಿದ್ದು ಅಧ್ಯಕ್ಷ ಸ್ಥಾನಕ್ಕೆ ರಾಜೇನಾಮಿ ನೀಡಿದ್ದರೂ ಸಹ ತಾಲೂಕಿನ ರೈತರ ಸಹಕಾರಿ ಸಂಘಗಳ ಮೇಲ್ವಿಚಾರಣೆಯೊಂದಿಗೆ ಮನೆ ಮನೆಗೆ ಸಾಲ ಸೌಲಭ್ಯ ಮುಟ್ಟಿಸುವ ವ್ಯವಸ್ಥೆಯನ್ನ ಕೈಬಿಡುವದಿಲ್ಲ. ರಮೇಶ ಕತ್ತಿ

 

 

WhatsApp Group Join Now
Telegram Group Join Now
Share This Article