ಮುಗಳಖೋಡ(೨೭) ಸಮಿಪದ ಖಣದಾಳ ಗ್ರಾಮದ ಶ್ರೀ ಬೀರಸಿದ್ದೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ರವಿವಾರ 27 ರಂದು ಬೆಳಿಗ್ಗೆ ಶ್ರೀ ಬೀರಸಿದ್ದೇಶ್ವರ ಗದ್ದುಗೆಗೆ ಮಹಾಭಿಷೇಕ, ಪೂಜೆ ಸಲ್ಲಿಸಿ ರಾತ್ರಿ 10 ಗಂಟೆಗೆ ಮುಗಳಖೋಡದ ಬೀರಸಿದ್ದೇಶ್ವರ ಹಾಗೂ ಖಣದಾಳದ ಭೀರಸಿದ್ದೇಶ್ವರ ಡೊಳ್ಳಿನ ಗಾಯನ ಸಂಘದವರಿಂದ ಗಾಯನ ಕಾರ್ಯಕ್ರಮ.
ಸೋಮವಾರ 28 ರಂದು ಬೆಳಿಗ್ಗೆ 9 ಗಂಟೆಗೆ ಮಾಳಪ್ಪನ ಪಾದಗಟ್ಟಿಯಿಂದ ಶ್ರೀ ಬೀರಸಿದ್ದೇಶ್ವರ ಮಂದಿರದ ವರೆಗೆ ಸಕಲ ವಾದ್ಯ ವೃಂದ ದೊಂದಿಗೆ ಪಲ್ಲಕ್ಕಿ ಉತ್ಸವ ಜರುಗುವುದು.ರಾಯಬಾಗ ಪಿ ಎಲ್ ಡಿ ಬ್ಯಾಂಕಿನ ಅಧ್ಯಕ್ಷರಾದ ಮಾನ್ಯ ಪ್ರತಾಪರಾವ ಅಣ್ಣಾ ಪಾಟೀಲ, ಹಾಗೂ ಯುವ ರಾಜಕೀಯ ಧುರೀಣ ಶಿವರಾಜ ಅಣ್ಣಾ ಪಾಟೀಲ ಇವರನ್ನು ಸನ್ಮಾನಿಸಲಾಗುವುದು ಸಕಲ ಸದ್ಭಕ್ತರು ಆಗಮಿಸಿ ತನು ಮನ ಧನ ಧಾನ್ಯ ದಿಂದ ಸೇವೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾಗಿ ಎಂದು ಜಾತ್ರಾ ಸಮಿತಿಯ ಕುಮಾರ ರಾಯಪ್ಪ ಹೊಸಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.