ಬಾಲಿವುಡ್ ಚಿತ್ರರಂಗಕ್ಕೆ ಗ್ಯಾಂಗ್ಸ್ಟಾರ್ ಲಾರೆನ್ಸ್ ಬಿಷ್ಣೋಯ್ ದೊಡ್ಡ ತಲೆನೋವಾಗಿದೆ. ಬಿಷ್ಣೋಯ್ ಸಮುದಾಯಕ್ಕೆ ಬಾಲಿವುಡ್ನ ನಟ ಸಲ್ಮಾನ್ ಖಾನ್ ಹಾಗೂ ಮೂಲಗಳ ಪ್ರಕಾರ ಬಾಲಿವುಡ್ನ ಅನೇಕ ನಟರು ಹಿಂದೂ ಧರ್ಮವನ್ನು ಅವಮಾನಿಸಿದ್ದಾರೆ ಈ ರೀತಿ ಸೇಡು ತೀರುಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.
ಈ ಕಾರಣಕ್ಕೆ ಸಲ್ಮಾನ್ ಖಾನ್ ಸೇರಿದಂತೆ ಅನೇಕರನ್ನು ಹತ್ಯೆ ಮಾಡಲು ಹಲವು ರೀತಿಯಲ್ಲಿ ಪ್ರಯತ್ನ ಮಾಡಿದ್ದಾರೆ. ಈಗಾಗಲೇ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ಅಲ್ಲಿಯೇ ಕೂತು ಈ ಕೆಲಸವನ್ನು ಮಾಡುತ್ತಿದ್ದಾರೆ. ಅವರ ಮೇಲೆ ಈಗಾಗಲೇ ಅನೇಕ ಪ್ರಕರಣಗಳು ಇದೆ. ಈ ಪೈಕಿ ಅವರ ಮೇಲಿದ್ದ ಪಂಜಾಬ್‌ನ ಮೊಹಾಲಿಯಲ್ಲಿ ವಿದ್ಯಾರ್ಥಿಯೊಬ್ಬರ ಮೇಲೆ ಹಲ್ಲೆ ಪ್ರಕರಣದಲ್ಲಿ ಖುಲಾಸೆಯಾಗಿದೆ.