ಬೆಂಗಳೂರು, ಅಕ್ಟೋಬರ್ 25: ಜೈಲಲ್ಲಿ ದರ್ಶನ್ ವಿಡಿಯೋ ಕಾಲ್ ಮಾಡಿದ್ದ ಕೇಸ್ನಲ್ಲಿ ಆತನಿಗೆ ಮೊಬೈಲ್ ಮತ್ತು ಸಿಮ್ ಕಾರ್ಡ್ ಕೊಟ್ಟಿದ್ದು ಯಾರು ಎಂಬುದೇ ಗೊತ್ತಿರಲಿಲ್ಲ. ಆ ಬಗ್ಗೆ ತನಿಖೆ ಮಾಡುತ್ತಿರುವ ಪರಪ್ಪನ ಅಗ್ರಹಾರ ಪೊಲೀಸರು ಈಗ ಸಿಮ್ ಕೊಟ್ಟ ವ್ಯಕ್ತಿಯನ್ನು ಪತ್ತೆ ಮಾಡಿದ್ದಾರೆ.
ದರ್ಶನ್ ರೌಡಿಶೀಟರ್ ಧರ್ಮನ ಮೊಬೈಲ್ನಿಂದ ಬ್ಯಾಡರಹಳ್ಳಿ ರೌಡಿ ಶೀಟರ್ ಸತ್ಯನಿಗೆ ವಿಡಿಯೋ ಕಾಲ್ ಮಾಡಿದ್ದ. ಈ ಮೊಬೈಲ್ ಧರ್ಮನಿಗೆ ಸೇರಿತ್ತು ಎಂಬುದು ಗೊತ್ತಾಗಿದೆ. ಬಾಣಸವಾಡಿ ರೌಡಿ ಶೀಟರ್ ಧರ್ಮನಿಗೆ ಬಾಣಸವಾಡಿಯ ಟೂರ್ಸ್ ಅಂಡ್ ಟ್ರಾವೆಲ್ಸ್ ಮಾಲೀಕ ಮಣಿವಣ್ಣನ್ ಎಂಬಾತ ಸಿಮ್ ನೀಡಿದ್ದ ಎಂಬುದು ಗೊತ್ತಾಗಿದೆ.