ಚನ್ನಮ್ಮನ ಕಿತ್ತೂರು. ವೀರ ರಾಣಿ, ಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ಚನ್ನಮ್ಮಾಜಿ ಬ್ರಿಟಿಷರ ಜೊತೆ ಯುದ್ಧ ಮಾಡಿ ಬ್ರಿಟಿಷ್ ರಾಯಭಾರಿ ಟ್ಯಾಕರೇ ಅವನನ್ನು ಕೊಂದು ಸಂಗ್ರಾಮ ಗೆದ್ದು 200 ವರ್ಷ ಆದ ಸಂದರ್ಭದಲ್ಲಿ ಇಂದು ಚನ್ನಮ್ಮನ ಪಟ್ಟಣದಲ್ಲಿ ಚನ್ನಮ್ಮಾಜಿಯ ವೀರ ಜ್ಯೋತಿಗೆ ಪೂಜೆ ನೆರವೇರಿಸಿ ತಾಯಿ ಚನ್ನಮ್ಮಾಜಿ ಮೂರ್ತಿಗೆ ಪೂಜೆ, ಮಾಲಾರ್ಪಣೆ ಮಾಡುವುದರ 200 ನೇ ವಿಜಯೋತ್ಸವ ಕಿತ್ತೂರು ಉತ್ಸವ 2024 ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಈ ಒಂದು ಸಮೃಮದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ವಿ ಪ ಸದಸ್ಯ ಚನ್ನರಾಜ ಹಟ್ಟಿಹೊಳಿ, ಬೆಳಗಾವಿ ಉತ್ತರ ಶಾಸಕ ಆಶಿಫ್ ರಾಜು ಸೇಠ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನವಲಗಟ್ಟಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಶ್ರೀಮತಿ ರೋಹಿಣಿ ಪಾಟೀಲ, ಸೇರಿದಂತೆ ರಾಜಕೀಯ ಮುಖಂಡರು, ಅಧಿಕಾರಿಗಳು ಪಾಲ್ಗೊಂಡಿದ್ದರು.