ಬಿಮ್ಸ್ ವಿದ್ಯಾರ್ಥಿನಿ ಪಂಕಜಾ ಈಜು ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

Ravi Talawar
ಬಿಮ್ಸ್ ವಿದ್ಯಾರ್ಥಿನಿ ಪಂಕಜಾ ಈಜು ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ
WhatsApp Group Join Now
Telegram Group Join Now

ಬೆಳಗಾವಿ, ಅಕ್ಟೊಬರ್ 22: ರಾಜ್ಯ ಮಟ್ಟದ ಪ್ಯಾರಾ ಈಜು ಚಾಂಪಿಯನ್‌ಶಿಪ್‌ ನಲ್ಲಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ದ್ವಿತೀಯ ವರ್ಷದ ವಿದ್ಯಾರ್ಥಿನಿ ಪಂಕಜಾ ರೆವನ್ನಕರ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಪಡೆದುಕೊಂಡಿದ್ದಾಳೆ.

ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಫೆಡರೇಷನ್ ಆಫ್‌ ಪ್ಯಾರಾ ಸ್ವಿಮ್ಮಿಂಗ್‌ ಇಂಡಿಯಾ ಅಡಿಯಲ್ಲಿ ಕರ್ನಾಟಕ ಪ್ಯಾರಾ ಸ್ವಿಮ್ಮಿಂಗ್‌ ಅಸೋಸಿಯಷನ್‌ ಆಯೋಜಿಸಿದ ರಾಜ್ಯ ಮಟ್ಟದ ಪ್ಯಾರಾ ಈಜು ಚಾಂಪಿಯನ್‌ಶಿಪ್‌ ನಲ್ಲಿ 1 ಚಿನ್ನ ಮತ್ತು 2 ಬೆಳ್ಳಿ ಪದಕಗಳನ್ನು ಪಡೆದು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿನಿಯ ಸಾಧನೆ ಬಿಮ್ಸ್ ಗೆ ಹೆಮ್ಮೆ ತಂದಿದೆ ಎಂದು ಬೆಳಗಾವಿ ಬಿಮ್ಸ್ ನ ಗೌರವಾನ್ವಿತ ನಿರ್ದೇಶಕರಾದ ಡಾ. ಅಶೋಕ ಕುಮಾರ ಶೆಟ್ಟಿ ಮತ್ತು ಬಿಮ್ಸ್‌ ನ ಮುಖ್ಯ ಆಡಳಿತ ಅಧಿಕಾರಿ ಸಿದ್ದು ಹುಲ್ಲೋಳಿ, ಎಲ್ಲ ವಿಭಾಗದ ಮುಖ್ಯಸ್ಥರು, ಎಲ್ಲ ಭೋದಕ ಹಾಗೂ ಭೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

 

WhatsApp Group Join Now
Telegram Group Join Now
Share This Article