ಬಳ್ಳಾರಿ ಅ 22. ಬಳ್ಳಾರಿ ನಗರದ ರಾವ್ ಬಹದ್ದೂರ್ ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜು, ಕ್ರೀಡಾ ಇಲಾಖೆ, ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, (ವಿಟಿಯು), ಬೆಳಗಾವಿ, ಕಲಬುರ್ಗಿ ವಿಭಾಗ ಸಹಯೋಗದಲ್ಲಿ ಪುರುಷರ ಕಬಡ್ಡಿ ಪಂದ್ಯಾವಳಿ 21 ಮತ್ತು 22 ಅಕ್ಟೋಬರ್ 2024 ರಂದು ಆಯೋಜಿಸಲಾಗಿದೆ.
ಡಾ ಸವಿತಾ ಸೋನೋಳಿ ಉಪ ಪ್ರಾಂಶುಪಾಲರು, ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜು, ಡಾ ಗಿರೀಶ ಎಚ್, ಮುಖ್ಯಸ್ಥರು, ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗ , ಕಲಬುರ್ಗಿ ವಲಯದ ವಿವಿಧ ಕಾಲೇಜುಗಳಿಂದ ದೈಹಿಕ ಶಿಕ್ಷಣ ನಿರ್ದೇಶಕರು- ಎಸ್ ವಿಜಯ್ ಮಹಾಂತೇಶ್, ಆರ್. ವೈ .ಎಂ .ಇ. ಸಿ , ಬಳ್ಳಾರಿ, ಅಶೋಕ್ -ಬಿಐಟಿಎಂ, ಬಳ್ಳಾರಿ, ಮಂಜುನಾಥ – ಪಿಡಿಐಟಿ, ಹೊಸಪೇಟೆ, ಪ್ರಭು – ಬಿಜಿಎಂಐಟಿ, ಮುಧೋಳ, ಪವನ್ – ಬಿ.ಕೆ.ಐ.ಟಿ, ಭಾಲ್ಕಿ, ಇತರೆ ಅಧಿಕಾರಿಗಳು-ಶ್ರೀನಿವಾಸ್, ಸಂಘರ್ಷ , ಪಂಪಾಪತಿ ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ಮುಖ್ಯ ಅತಿಥಿಗಳು, ಡಾ ಸವಿತಾ ಸೋನೋಳಿ “ಕ್ರೀಡೆಯಲ್ಲಿ ಸಮಗ್ರ ಮನೋಭಾವನೆಯಲ್ಲಿ ಭಾಗವಹಿಸಿ, ಪಂದ್ಯವನ್ನು ಆಟವನ್ನು ಗೆಲ್ಲಲು ನಿಮ್ಮ ಪ್ರಯತ್ನ ಅವಶ್ಯಕ, ಮತ್ತು ಫಲಿತಾಂಶ ಏನಾಗಲಿ ಫಲಿತಾಂಶವನ್ನು ಸ್ವೀಕರಿಸಿ” ಶುಭ ಹಾರೈಸಿದರು.