ನೇಸರಗಿ: ಕಿತ್ತೂರು ರಾಣಿ ಚನ್ನಮ್ಮಾಜಿ ಸ್ವತಂತ್ರ ಸಂಗ್ರಾಮದ ಉತ್ಸವ ಆಗಿ 200 ವರ್ಷ ಕಳೆದ ಪ್ರಯುಕ್ತ ಬಿಜೆಪಿ ಹಿರಿಯ ನಾಯಕರಾದ ಸಚಿವ ಜೋಶಿ, ಸಂಸದ ಕಾಗೇರಿ, ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ನೇತೃತ್ವದಲ್ಲಿ ಕೇಂದ್ರ ಸರ್ಕಾರಕ್ಕೆ ಕಿತ್ತೂರ ಚನ್ನಾಮಾಜಿಯಾ ಅಂಚೆ ಚೀಟಿ ಬಿಡುಗಡೆಗೆ ಮನವಿ ಮಾಡಿತ್ತು. ಅದಕ್ಕೆ ಸ್ಪಂದಿಸಿದ ಕೇಂದ್ರ ಸರ್ಕಾರ 23-10-2024 ರಂದು ತಾಯಿ ಚನ್ನಮ್ಮಾಜಿಯ ಅಂಚೆ ಚೀಟಿ ಬಿಡುಗಡೆಗೆ ಆದೇಶ ನೀಡಿದ್ದು ಈ ಕೇಂದ್ರ ಸರ್ಕಾರದ ಕಾರ್ಯಕ್ಕೆ ಚನ್ನಮ್ಮನ ಕಿತ್ತೂರು ಮಾಜಿ ಶಾಸಕರು, ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಹರ್ಷ ವ್ಯಕ್ತಪಡಿಸಿದ್ದಾರೆ.