ನೇಗಿನಹಾಳದಲ್ಲಿ ಕಿತ್ತೂರು ಚೆನ್ನಮ್ಮನ ಜ್ಯೋತಿಯಾತ್ರೆಗೆ ಅದ್ದೂರಿ ಸ್ವಾಗತ

Ravi Talawar
ನೇಗಿನಹಾಳದಲ್ಲಿ ಕಿತ್ತೂರು ಚೆನ್ನಮ್ಮನ ಜ್ಯೋತಿಯಾತ್ರೆಗೆ ಅದ್ದೂರಿ ಸ್ವಾಗತ
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 45;
WhatsApp Group Join Now
Telegram Group Join Now

ನೇಗಿನಹಾಳ:ವೀರಮಾತೆ ರಾಣಿ ಕಿತ್ತೂರು ಚೆನ್ನಮ್ಮಾಜಿಯು ೧೮೨೪ರಲ್ಲಿ ಬ್ರಿಟಿಷ್  ದಿಗೆ ಹೋರಾಡಿ ಬ್ರಿಟಿಷ್ ಅಧಿಕಾರಿ ಧಾರವಾಡದ ಕಲೆಕ್ಟರ್ ಠ್ಯಾಕರೆ ಅನ್ನುಯುದ್ದದಲ್ಲಿ ಗುಂಡಿಕ್ಕಿ ಕೊಂದು ಬ್ರಿಟಿಷರನ್ನು ಹಿಮ್ಮೆಟಿಸಿದ ಸವಿ ನೆನಪಿಗಾಗಿ ಪ್ರತಿವರ್ಷ ವಿಜಯೋತ್ಸವ ಮಾಡುತ್ತಾ ಬರುತ್ತಿದ್ದು ಇಗ ೨೦೦ವರ್ಷಗಳು ಗತಿಸಿದ್ದು ಅದರ ಸವಿ ನೆನಪಿಗಾಗಿ ರಾಜ್ಯಾದ್ಯಂತ ಅದ್ದೂರಿಯಾಗಿ ಉತ್ಸವ
ಹಮ್ಮಿಕೊಳ್ಳಲಾಗಿದೆ ಎಂದು ಚೆನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ಗ್ರಾಮದ ವಿಠ್ಠಲ-ರುಕ್ಮಿಣಿ ಮಂದಿರದ ಸಭಾಭವನದ ಮುಂದೆ ಚೆನ್ನಮ್ಮನ ಜ್ಯೋತಿ ಯಾತ್ರೆಯ ರಥಕ್ಕೆ ಸ್ವಾಗತ ಕೋರಿ ಪೂಜೆ ಸಲ್ಲಿಸಿ ಮಾತನಾಡಿದರು. ನಮ್ಮ ನಾಡು ವೀರತ್ವದ ಗುಣ ಹೊಂದಿದೆ ಇಲ್ಲಿ ಶರಣಾಗತಿ ಬೇಡಿ ಬಂದವರಿಗೆ ರಕ್ಷಣೆ ನೀಡಿ ದಾಸೋಹ ಮಾಡಿದೆ. ದಂಡೆದ್ದು ಬಂದವರಿಗೆ ಸೋಲಿನ ರುಚಿ ತೋರಿಸಿ ಹಿಮ್ಮೆಟಿಸಿದೆ ಹೀಗಾಗಿ ಈ ವರ್ಷದ ಉತ್ಸವ ಅತ್ಯಂತ ಅದ್ದೂರಿಯಾಗಿ ನಡೆಯುತ್ತಿದೆ
ಎಂದರು. ಮೆರವಣಿಗೆಯಲ್ಲಿ ಮಹಿಳೆಯರು ಕೊರಳಲ್ಲಿ ಡೊಳ್ಳುಗಳ ಹಾಕಿಕೊಂಡು ಬಾರಿಸಿ ಚನ್ನಮ್ಮನ ಅಭಿಮಾನ ಮೆರೆದರು. ಬ್ಯಾಂಡ್, ಹಾಗೂ ವಿವಿಧ ಸಂಸ್ಕೃತಿ ತಂಡಗಳು ಭಾಗವಹಿಸಿದ್ದು ಪ್ರತಿಯೊಬ್ಬರೂ ತೆಲೆಗೆ ಹಳದಿ ಪೇಟ ಧರಿಸಿ
ಮೆರವಣಿಗೆಯ ಅಂದ ಹೆಚ್ಚಿದರು.

ಈ ಸಂದರ್ಭದಲ್ಲಿ ಬೈಲಹೊಂಗಲ ತಹಶಿಲ್ದಾರ ಹನುಮಂತ ಶಿರಹಟ್ಟಿ, ಬಸವರಾಜ ಹುಬ್ಬಳ್ಳಿ, ಬಸವರಾಜ ಕೆರಕನ್ನವರ, ಯುವ ಧುರೀಣ ನಾನಾಸಾಹೇಬ ಪಾಟೀಲ, ಕಾಶಿನಾಥ ಇನಾಮದಾರ, ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ, ಮಹಾದೇವಿ ಕೋಟಗಿ, ಶಿವಾನಂದ ದಿವಾಣದ, ಶ್ರೀಕಾಂತ ಹಡಗಿನಹಾಳ, ಮಹಾದೇವ ಮಡಿವಾಳರ, ಸುಭಾಷ ರುಮೋಜಿ, ಶಿವಾಜಿ ಮುತ್ತಗಿ, ಪ್ರಲ್ಹಾದ ಘಂಟಿ, ಮಹಾಂತೇಶ ದಿವಾಣದ, ಬಸವರಾಜ ಪೂಜೇರಿ, ಬಸನಗೌಡ ಪಾಟೀಲ ಹಾಗೂ ಗ್ರಾಮ ಪಂಚಾಯತಿ ಸದಸ್ಯರು,
ಸಿಬ್ಬಂದಿಗಳು, ಆಶಾ, ಅಂಗನವಾಡಿ ಕಾರ್ಯಕರ್ತರು, ಶಾಲಾ-ಕಾಲೇಜುಗಳ ಶಿಕ್ಷಕರು, ವಿದ್ಯಾರ್ಥಿಗಳು, ನೂರಾರು ಜನ ಗ್ರಾಮಸ್ಥರು ಉಪಸ್ಥಿತರಿದ್ದರು.

ನೇಗಿನಹಾಳ ಗ್ರಾಮದಲ್ಲಿ ಶಾಸಕ ಬಾಬಾಸಾಹೇಬ ಪಾಟೀಲ ಅವರು ಚನ್ನಮ್ಮನ ಜ್ಯೋತಿ ಯಾತ್ರೆ ರಥಕ್ಕೆ ಪೂಜೆ ಸಲ್ಲಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರೆವಣಿಗೆಯ ಮೂಲಕ ಬಿಳ್ಕೋಟರು.

WhatsApp Group Join Now
Telegram Group Join Now
Share This Article