ಪರಿಶಿಷ್ಟ ಜಾತಿ ಒಳ ಮೀಸಲಾತಿ: ಕೇಂದ್ರಕ್ಕೆ ಪತ್ರ ಬರೆಯುವಂತೆ ಸಿದ್ದರಾಮಯ್ಯಗೆ ಶಾಸಕರ ಒತ್ತಾಯ

Ravi Talawar
ಪರಿಶಿಷ್ಟ ಜಾತಿ ಒಳ ಮೀಸಲಾತಿ: ಕೇಂದ್ರಕ್ಕೆ ಪತ್ರ ಬರೆಯುವಂತೆ ಸಿದ್ದರಾಮಯ್ಯಗೆ ಶಾಸಕರ ಒತ್ತಾಯ
WhatsApp Group Join Now
Telegram Group Join Now

ಬೆಂಗಳೂರು, ಅಕ್ಟೋಬರ್​ 22: ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಗೃಹ ಸಚಿವ ಜಿ. ಪರಮೇಶ್ವರ ನೇತೃತ್ವದಲ್ಲಿ ಸೋಮವಾರ ಸಭೆ ನಡೆಯಿತು. ಸಭೆಯಲ್ಲಿ ಉಪ ಜಾತಿಗಳ ಗಣತಿಗೆ ಯಾವ ದತ್ತಾಂಶವನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂಬುವುದರ ಬಗ್ಗೆ ಮಧ್ಯಪ್ರವೇಶಿಸುವಂತೆ ಕೇಂದ್ರ ಸರ್ಕಾರಕ್ಕೆ  ಪತ್ರ ಬರೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಸೂಚಿಸಲು ನಿರ್ಧರಿಸಲಾಯಿತು.

ಒಳ ಮೀಸಲಾತಿ ಜಾರಿಗೊಳಿಸುವ ಸಂಬಂಧ ಆಗಸ್ಟ್​ 1 ರಂದು ಸುಪ್ರೀಂಕೋರ್ಟ್​ ತೀರ್ಪು ನೀಡಿತ್ತು. ಒಳ ಮೀಸಲಾತಿ ಜಾರಿಗೊಳಿಸಲು ರಾಜ್ಯಗಳಿಗೆ ಅಧಿಕಾರವಿದೆ. ಆದರೆ ಅದು ಪರಿಶೀಲಿಸಬಹುದಾದ ಪ್ರಾಯೋಗಿಕ ಡೇಟಾ ಆಧರಿಸಬೇಕು ಎಂದು ಹೇಳಿತ್ತು.

ಸೋಮವಾರ ನಡೆದ ಸಭೆಯಲ್ಲಿ ಈ ವಿಚಾರವಾಗಿ ಚರ್ಚಿಸಲಾಗಿದೆ. ಕೇಂದ್ರ ಸರ್ಕಾರದಿಂದ ಸ್ಪಷ್ಟತೆ ಪಡೆದಯದೆ ಎಸ್​ಸಿ ಕೋಟಾದ ವರ್ಗೀಕರಣವನ್ನು ಜಾರಿಗೊಳಿಸುವುದು ಪ್ರತಿಕೂಲವಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಸಂಬಂಧ 2011ರ ಜನಗಣತಿ ವರದಿಯನ್ನು ಪರಿಗಣಿಸಬೇಕೇ ಅಥವಾ ಜಾತಿ ಗಣತಿ ಎಂದು ಕರೆಯಲಾಗುವ ಸಾಮಾಜಿಕ-ಆರ್ಥಿಕ ಶೈಕ್ಷಣಿಕ ಸಮೀಕ್ಷೆಯನ್ನು ಪರಿಗಣಿಸಬಹುದೇ ಎಂಬುವುದರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಬೇಕೆಂದು ನಿರ್ಧರಿಸಲಾಗಿದೆ.

ಎಸ್​ಸಿಎಸ್​ಪಿ, ಟಿಎಸ್​ಪಿ ಅನುದಾನ ಬಳಸಿ ಪರಿಶಿಷ್ಟ ಜಾತಿಗಳ ಉಪಜಾತಿಗಳ ಸಮೀಕ್ಷೆ ನಡೆಸುವುದು ಎಂದು ಕೆಲವರು ಸಲಹೆ ನೀಡಿದರು. ಇನ್ನೂ ಕೆಲವುರು ಹಿಂದುಳಿದ ವರ್ಗಗಳ ಆಯೋಗ 2015ರಲ್ಲಿ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯಲ್ಲಿರುವ ಅಂಕಿಅಂಶಗಳನ್ನು ಪರಿಗಣಿಸುವ ಬಗ್ಗೆ ಸಲಹೆ ನೀಡಿದರು.

WhatsApp Group Join Now
Telegram Group Join Now
Share This Article