ಶ್ರೀ ಸಿದ್ಧರಾಮ ಶಿವಯೋಗಿಗಳ ರಥಯಾತ್ರೆ!

Ravi Talawar
ಶ್ರೀ ಸಿದ್ಧರಾಮ ಶಿವಯೋಗಿಗಳ ರಥಯಾತ್ರೆ!
WhatsApp Group Join Now
Telegram Group Join Now

 

ನೇಸರಗಿ: ಮಹಾನ್ ಪವಾಡ ಪುರುಷ, ಸಂತ, ಸಿದ್ದಿಪುರುಷ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸುಕ್ಷೇತ್ರ ಚುಳಕಿ ಮಠಕ್ಕೆ ಆಗಮಿಸಿ 100 ವರ್ಷವಾದ ಪ್ರಯುಕ್ತ ಶ್ರೀ ಸಿದ್ದರಾಮೇಶ್ವರ ಶಿವಯೋಗಿಗಳ ರಥಯಾತ್ರೆ ಶತಮಾನೋತ್ಸವ ಕಾರ್ಯಕ್ರಮವು ದಿ. 20 ರಿಂದ ದಿ 24 ರವರೆಗೆ ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮದಿಂದ ವಾದ್ಯ ಮೇಳ , ಭಜನೆ ಮುಖಾಂತರ ಪ್ರಾರಂಭವಾಗಿ ಪುರಪ್ರವೇಶ ಮಾಡಿ ಇಂಚಲ ಶಿವಯೋಗಿ ಮಠದ ಡಾ ಶಿವಾನಂದ ಭಾರತಿ ಮಹಾಸ್ವಾಮಿಗಳ ಕೃಪಾಶಿರ್ವಾದದಿಂದ ಮತ್ತು ಗವಿಮಠ, ಚುಳಕಿ ಹಾಗೂ ಮಲ್ಲಾಪೂರ- ನೇಸರಗಿ ಗಾಳೇಶ್ವರ ಮಠದ ಪೀಠಧಿಪತಿಗಳಾದ ಶ್ರೀ ಚಿದಾನಂದ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನೆರವೇರಲಿದೆ.

 

ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ಕೀರ್ತನೆ, ಭಜನೆ, ಮಹಾಪ್ರಸಾದ ನೆರವೇರಿಸಿ, ಅಲ್ಲಿಂದ ಪಕ್ಕೀರೇಶ್ವರ ದರ್ಶನ ಪಡೆದು ಹುಬ್ಬಳ್ಳಿ ಶ್ರೀ ಸಿದ್ಧಾರೂಢ ಮಠಕ್ಕೆ ಆಗಮಿಸಿ ನಂತರ ದಿ 21ರಂದು ಬೈಲಹೊಂಗಲ ತಾಲೂಕಿನ ಮುರಕಿಭಾವಿ ಗ್ರಾಮದ ಶ್ರೀ ಸಿದ್ಧಾರೂಢ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಮುಖ ಬೀದಿಗಳಲ್ಲಿ ಉತ್ಸವ ನೆರವೇರಿಸಿ ಅಲ್ಲಿಂದ ಮಲ್ಲಾಪೂರ ಕೆ ಎನ್ ಗ್ರಾಮದ ಶ್ರೀ ಗಾಳೇಶ್ವರ ಮಠಕ್ಕೆ ಆಗಮಿಸಿ ಅಲ್ಲಿ ಮಹಾಪೂಜೆ, ಕೀರ್ತನೆ, ವೇದಾಂತ ಪರಿಷತ್ ಕಾರ್ಯಕ್ರಮ ಜರುಗುವವು.

22 ರಂದು ನೇಸರಗಿ ಗ್ರಾಮದ ಶ್ರೀ ಚನ್ನವೃಷಬೆಂದ್ರ ಮಠದಲ್ಲಿ ಉತ್ಸವ ಅಲ್ಲಿಂದ ಮದನಬಾವಿ ಶ್ರೀ ಚನ್ನವೃಷಬೆಂದ್ರ ಮಠ, ಇಂಚಲ ಸಾಧು ಸಂಸ್ಥಾನ ಮಠ, ಸೊಗಲ ಸೋಮೇಶ್ವರ, ಜಾಲಿಕಟ್ಟಿ ಬಸವೇಶ್ವರ, ಯರಗಟ್ಟಿಯ ರಾಜ ರಾಜೇಶ್ವರಿ ದೇವಸ್ಥಾನ ಹಾಗೂ ದಿ 23 ರಂದು ಅನೇಕ ದೇವಸ್ಥಾನ, ಮಠಗಳ ದರ್ಶನ ಮೂಲಕ ದಿ 24 ರಂದು ಚುಳಕಿ ಗ್ರಾಮದ ಗವಿಮಠಕ್ಕೆ ಆಗಮಿಸಿ ಶ್ರೀ ಚುಳಕ್ಕೆಪ್ಪಜ್ಜನವರಿಗೆ ತುಲಾಭಾರ, ಕರ್ತು ಗದ್ದುಗೆ ಪೂಜೆ, ಬೆಳ್ಳಿ ಕವಚ, ವೇದಾಂತ ಪರಿಷತ್, ಕುಂಬೊತ್ಸವ, ಕುಂಕುಮೋತ್ಸವ, ಉಡಿ ತುಂಬುವದು, ಹೋಮ, ಹವನ ಧಾರ್ಮಿಕ ಕಾರ್ಯಕ್ರಮ, ಮಹಾಪ್ರಸಾದ ನೆರವೇರುವದೆಂದು ಮಠದ ರಥಯಾತ್ರೆ ಕಮಿಟಿ ಸದಸ್ಯರು ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article