ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮತ್ತೆ ವರ್ಗಾವಣೆ ಪರ್ವ ಶುರುವಾಗಿದ್ದು, ಶುಕ್ರವಾರ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳ 7 ಜನ ಡಿವೈಎಸ್‌ಪಿ ಹಾಗೂ 55 ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಪೊಲೀಸ್ ಸಿಬ್ಬಂದಿ ಮಂಡಳಿಯ ಸಭೆಯ ನಿರ್ಣಯದಂತೆ 7 ಮಂದಿ ಡಿವೈಎಸ್‌ಪಿ ಹಾಗೂ 55 ಇನ್ಸ್ಪೆಕ್ಟರ್ಗಳನ್ನು ವಿವಿಧೆಡೆ ವರ್ಗಾಯಿಸಲಾಗಿದೆ. ಡಿವೈಎಸ್‌ಪಿಗಳಾದ ಕೆ.ಎಂ.ಸತೀಶ್ ಅವರನ್ನು ಎಲೆಕ್ಟ್ರಾನಿಕ್‌ಸಿಟಿ ಉಪ ವಿಭಾಗಕ್ಕೆ ವರ್ಗಾಯಿಸಿದರೆ, ಗೋಪಾಲ್ ನಾಯಕ್ ಅವರನ್ನು ಬೆಂಗಳೂರಿನ ಬಿಎಂಟಿಎಫ್‌ಗೆ ವರ್ಗಾಯಿಸಲಾಗಿದೆ.