ಸಂಗ್ರಾಮ ವಿಜಯಕ್ಕೆ 200 ವರ್ಷ; ಚನ್ನಮ್ಮ ಅಂಚೆ ಚೀಟಿ ಬಿಡುಗಡೆಗೆ ಮನವಿ

Ravi Talawar
ಸಂಗ್ರಾಮ ವಿಜಯಕ್ಕೆ 200 ವರ್ಷ; ಚನ್ನಮ್ಮ ಅಂಚೆ ಚೀಟಿ ಬಿಡುಗಡೆಗೆ ಮನವಿ
WhatsApp Group Join Now
Telegram Group Join Now

 

ಬೆಳಗಾವಿ: ಕಿತ್ತೂರು ಸಂಸ್ಥಾನದ ಮಹಾರಾಣಿ ವೀರ ವನಿತೆ ರಾಣಿ ಚೆನ್ನಮ್ಮ ಅವರ 1824ರ ಮೊಟ್ಟ ಮೊದಲ ಬ್ರಿಟಿಷರ ವಿರುದ್ಧ ಸಂಗ್ರಾಮದ ವಿಜಯಕ್ಕೆ ಇದೇ ಅಕ್ಟೋಬರ್ 23 ಕ್ಕೆ 200 ವರ್ಷ ಪೂರೈಸಿದ್ದು, ಈ ಐತಿಹಾಸಿಕ ವಿಜಯದ ಸಲುವಾಗಿ ರಾಣಿ ಚೆನ್ನಮ್ಮ ಅವರ ಅಂಚೆ ಚೀಟಿಯನ್ನು ಬಿಡುಗಡೆ ಮಾಡುವಂತೆ ಕಿತ್ತೂರು ಕರ್ನಾಟಕ ನಿಯೋಗದ ಪ್ರಮುಖರು ಮನವಿ ಸಲ್ಲಿಸಿದ್ದರು. ಅವರ ಮನವಿ ಮೇರೆಗೆ ಕೇಂದ್ರ ಸಚಿವರಾದ ಜ್ಯೋತಿರಾದಿತ್ಯ ಸಿಂದಿಯಾ ಅವರನ್ನು ಕಿತ್ತೂರು ಕರ್ನಾಟಕ ನಾಯಕರ ನಿಯೋಗದ ಪ್ರಮುಖರೊಂದಿಗೆ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲಾಯಿತು.

 

ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ರವರು ಕಿತ್ತೂರು ಕರ್ನಾಟಕ ನಿಯೋಗದ ಪ್ರಮುಖರು, ರಾಜ್ಯಸಭಾ ಸಂಸದರಾದ ಈರಣ್ಣ ಕಡಾಡಿ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಅರವಿಂದ ಬೆಲ್ಲದ್, ಅಭಯ್ ಪಾಟೀಲ್, ಮಾಜಿ ಸಂಸದರಾದ ಶ್ರೀ ಅಣ್ಣಾಸಾಹೇಬ್ ಜೊಲ್ಲೆ , ಮಾಜಿ ಶಾಸಕರು ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ, ವಿಶ್ವನಾಥ್ ಪಾಟೀಲ್, ಡಾ . ರವಿ ಪಾಟೀಲ, ಮಲ್ಲಣ್ಣ ಯಾದವಾಡ, ಪಕ್ಷದ ಪ್ರಮುಖರು ಮುಖಂಡರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article