ಅಸ್ಸಾಂ ಪೌರತ್ವ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಎತ್ತಿಹಿಡಿದ ಸುಪ್ರೀಂಕೋರ್ಟ್​

Ravi Talawar
ಅಸ್ಸಾಂ ಪೌರತ್ವ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಎತ್ತಿಹಿಡಿದ ಸುಪ್ರೀಂಕೋರ್ಟ್​
WhatsApp Group Join Now
Telegram Group Join Now

ಅಸ್ಸಾಂ  ಪೌರತ್ವ ಕಾಯ್ದೆಯ ಸಿಂಧುತ್ವವನ್ನು ಸುಪ್ರೀಂಕೋರ್ಟ್​ ಎತ್ತಿಹಿಡಿದಿದೆ. ಅಸ್ಸಾಂನಲ್ಲಿನ ನಿರ್ದಿಷ್ಟ ವಲಸಿಗರಿಗೆ ಪೌರತ್ವವನ್ನು ನೀಡುವ ನಿಬಂಧನೆಯಾದ ಪೌರತ್ವ ಕಾಯ್ದೆಯ ಸೆಕ್ಷನ್ 6A ಯ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠದಿಂದ ಈ ಮಹತ್ವದ ನಿರ್ಧಾರ ಹೊರಬಿದ್ದಿದ್ದು, 4:1ರ ಬಹುಮತದೊಂದಿಗೆ ಸೆಕ್ಷನ್ ಪರವಾಗಿ ತೀರ್ಪು ನೀಡಿದೆ.

ಆದರೆ ಜನವರಿ 1966 ಮತ್ತು ಮಾರ್ಚ್ 1971 ರ ನಡುವೆ ಅಸ್ಸಾಂಗೆ ಪ್ರವೇಶಿಸಿದ 17,861 ವ್ಯಕ್ತಿಗಳನ್ನು ಈ ಸೆಕ್ಷನ್ ಅಡಿಯಲ್ಲಿ ಭಾರತೀಯ ನಾಗರಿಕರು ಎಂದು ಗುರುತಿಸಲಾಗಿದೆ. ಇದಲ್ಲದೆ, ಇದೇ ಅವಧಿಯಲ್ಲಿ 32,381 ವ್ಯಕ್ತಿಗಳನ್ನು ವಿದೇಶಿಯರ ನ್ಯಾಯಮಂಡಳಿಗಳು ವಿದೇಶಿಯರೆಂದು ಗೊತ್ತುಪಡಿಸಲಾಗಿದೆ ಎಂದು ಅದು ಹೇಳಿದೆ.

WhatsApp Group Join Now
Telegram Group Join Now
Share This Article