ಬೆಂಗಳೂರು : ರಾಜ್ಯಕ್ಕೆ ಸಚಿವನಾದರೂ ನಾನು ಚಾಮರಾಜಪೇಟೆಯ ಮನೆ ಮಗ. ಕ್ಷೇತ್ರದ ಎಲ್ಲ ಬಡವರಿಗೆ ಸೂರು ಕಲ್ಪಿಸುವುದು ನನ್ನ ಸಂಕಲ್ಪ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ಚಾಮರಾಜಪೇಟೆಯ ವೆಂಕಟರಾಮನಗರ ಕೊಳಗೇರಿಯ 318 ಕುಟುಂಬಗಳಿಗೆ ಶುದ್ಧ ಕ್ರಯ ಪತ್ರ ವಿತರಿಸಿ ಮಾತನಾಡಿದ ಅವರು, ನೀವು ಆಶೀರ್ವಾದ ಮಾಡಿದ್ದರಿಂದ ಐದು ಬಾರಿ ಶಾಸಕ ನಾದೆ, ಮಂತ್ರಿಯಾದೆ. ಹೀಗಾಗಿ ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ ಎಂದು ಹೇಳಿದರುನಾನು ಮೊದಲ ಬಾರಿ ಉಪ ಚುನಾವಣೆಗೆ ಸ್ಪರ್ಧೆ ಮಾಡಿದಾಗ ಮಾತು ಕೊಟ್ಟಿದ್ದೆ. ಅದರಂತೆ ವೆಂಕಟರಾಮನಗರ ಕೊಳಗೇರಿ ನಿವಾಸಿಗಳಿಗೆ. ಶುದ್ಧ ಕ್ರಯ ಪತ್ರ ನೀಡಿದ್ದೇನೆ. ಸದ್ಯ ದಲ್ಲೇ ಇಲ್ಲೇ ಖಾತೆ ಮೇಳ ಮಾಡಿ ಖಾತೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಕ್ಷೇತ್ರದ ಲ್ಲಿ ವಸತಿ ರಹಿತರ ಸಮೀಕ್ಷೆ ನಡೆಸುತ್ತಿದ್ದು ಎಲ್ಲ ಕುಟುಂಬಗಳಿಗೆ ಸೂರು ಕಲ್ಪಿಸಲಾಗುವುದು ಎಂದು ಹೇಳಿದರು.
ಸ್ಲಂ ಬೋರ್ಡ್ ಆಯುಕ್ತ ಅಶೋಕ್, ಅಭಿಯಂತರ ಸುಧೀರ್, ತಾಂತ್ರಿಕ ಸಲಹೆಗಾರ ಬಾಲರಾಜು, ಕೆ ಎಂ ಡಿಸಿ ಅಧ್ಯಕ್ಷ ಅಲ್ತಾಫ್ ಖಾನ್, ಮುಖಂಡರಾದ ಅಪ್ಪೋಡ ಚಂದ್ರ ಶೇಖರ್, ಕೋಕಿಲ ಚಂದ್ರಶೇಖರ್ ರವಿ, ರಾಜು, ವಿನಾಯಕ್, ನಾರಾಯಣಸ್ವಾಮಿ, ಗಜೇಂದ್ರ ಮತ್ತಿತರರು ಉಪಸ್ಥಿತರಿದ್ದರು.