ಇಂಡಿ.ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ಕಟ್ಟಡ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೋಂದಣಿಯಾದ ಫಲಾನುಭವಿಗಳಿಗೆ ಮೇಷನ್ ಕಿಟ್,ರೋಡ್ ನಿರ್ಮಾಣ ಕಿಟ್ ಮತ್ತು ಟೈಲ್ಸ್ ಲೇಯರ್ ಟೂಲ್ ಕಿಟ್ ಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ. ನೋಂದಾಯಿಸಿ ಒಂದು ವರ್ಷ ಪೂರ್ಣಗೊಂಡಿರುವ ಕಟ್ಟಡ ಕಾರ್ಮಿಕರು ಚಾಲ್ತಿಯಲ್ಲಿರುವ. ಕಾರ್ಮಿಕ ಗುರುತಿನ ಚೀಟಿ ಆಧಾರ್ ಕಾರ್ಡ್, ಮತ್ತು ಫಲಾನುಭವಿಯ ಭಾವಚಿತ್ರ ಸದರಿ ದಾಖಲೆಗಳನ್ನು ದಿನಾಂಕ 25-10-2024 ರೊಳಗಾಗಿ ಕಾರ್ಮಿಕ ನಿರೀಕ್ಷಕರ ಕಚೇರಿ ಇಂಡಿ, ವೃತ ಇಂಡಿ ಮಿನಿ ವಿಧಾನಸೌಧ ಮೂರನೆ ಮಹಡಿ ಸಿಂದಗಿ ರಸ್ತೆ ಇಂಡಿ ಇಲ್ಲಿಗೆ ಅರ್ಜಿಗಳನ್ನು ಸಲ್ಲಿಸಬೇಕು. ಸ್ವೀಕರಿಸಲಾದ ಅರ್ಜಿಗಳನ್ನು ಪರಿಶೀಲಿಸಿ ಜೇಷ್ಠತಾ ಆಧಾರದ ಮೇಲೆ ಕಿಟ್ ಗಳನ್ನು ವಿತರಿಸಲಾಗುವುದು.ಈ ಮುಂಚೆ ಕಳೆದ ಸಾಲಿನಲ್ಲಿ ಪಡೆದಿರುವ ಫಲಾನುಭವಿಗಳಿಗೆ ವಿತರಿಸಲಾಗುವುದಿಲ್ಲ ಎಂದು ಇಂಡಿ ಕಾರ್ಮಿಕ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.