Ad imageAd image

ಬರುವ ಬೆಳಗಾವಿ ಚಳಿಗಾಲದ ಅಧಿವೇಶನದ ಒಳಗೆ ನೂತನ ಮುಖ್ಯಮಂತ್ರಿ: ಬಿ ವೈ. ವಿಜಯೇಂದ್ರ 

Ravi Talawar
ಬರುವ ಬೆಳಗಾವಿ ಚಳಿಗಾಲದ ಅಧಿವೇಶನದ ಒಳಗೆ ನೂತನ ಮುಖ್ಯಮಂತ್ರಿ: ಬಿ ವೈ. ವಿಜಯೇಂದ್ರ 
WhatsApp Group Join Now
Telegram Group Join Now
ಬೆಳಗಾವಿ: ಮೊನ್ನೆ ನಡೆದ ಹರಿಯಾಣ ರಾಜ್ಯದ ಚುನಾವಣೆ ಬಿಜೆಪಿ ಜಯಕ್ಕೆ  ಹೊಸ ಹುರುಪು ಬಂದಿದ್ದು ಮತ್ತು ಜಮ್ಮು ಕಾಶ್ಮೀರ ರಾಜ್ಯದಲ್ಲಿ 29 ಸ್ಥಾನಗಳನ್ನು ಗೆಲುವು ಸಾದಿಸುವದರ ಮೂಲಕ ಮುಂಬರವ ಮಹಾರಾಷ್ಟ್ರ ರಾಜ್ಯ ವಿಧಾನಸಭೆ ಚುನಾವಣೆಯ ಗೆಲುವಿನ ಮುನ್ಸೂಚನೆ ಅಗಿದ್ದು. ವಾಲ್ಮೀಕಿ ಹಗರಣ, ಎಸ್ಡಿಪಿಐಡಿಪಿ,ಮುಡಾ ಹಗರಣ ಸಿಲುಕಿರುವ ಕಾಂಗ್ರೆಸ್ ಸರ್ಕಾರ ಕೋಮಾದಲಿದ್ದು ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾಣದೆ, ಗುದ್ದಲಿ ಪೂಜೆ ನೆರವೇರದೆ ಭ್ರಷ್ಟಾಚಾರ ಸಾಬೀತಾಗಿ ನಿವೇಶನ ಮರಳಿ ಕೊಟ್ಟು ತಪ್ಪು ಒಪ್ಪಿಕೊಂಡು ಹಾಗೆ ಆಗಿ ಬರುವ ಕೆಲವು ದಿನಗಳಲ್ಲಿ ಸಿ ಎಮ್ ಸಿದ್ರಾಮಯ್ಯ ಅವರು ರಾಜೀನಾಮೆ ನೀಡುತ್ತಾರೆ. ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನ ನಡೆಯುವ ಒಳಗೆ ನೂತನ ಸಿ ಎಮ್ ಬರಲಿದ್ದಾರೆ ಎಂದು ಕರ್ನಾಟಕ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ. ವಿಜಯೇಂದ್ರ ಹೇಳಿದರು.
     ಅವರು ಗುರುವಾರದಂದು ನಗರದ ಸಂಕಮ ಹೋಟೆಲ್ ದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿ ಉದ್ದೇಸಿಸಿ ಮಾತನಾಡಿ ಸರ್ಕಾರದ ಜಿಲ್ಲಾ ಸಚಿವರು ಬೆಂಗಳೂರು ನಮ್ಮ ಸ್ವಗ್ರಹ ಅಂತ ಆರಾಮವಾಗಿ ಅಡಾಡುತ್ತಿದ್ದಾರೆ, ಜಿಲ್ಲಾವಾರು ಕೆಲಸಗಳು ಆಗ್ತಾ ಇಲ್ಲ, ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೀತಾ ಇಲ್ಲಾ. ಎಲ್ಲ ಸಚಿವರು ಸಿದ್ರಾಮಯ್ಯ ಅವರೆ ಈ ಅವಧಿಗೆ ಸಿ ಎಮ್ ಅಂತ ಹೇಳಿ ಸಿ ಎಮ್ ಕುರ್ಚಿಗೆ ಹಲವಾರು ಮುಖಂಡರು ಟವಲ ಹಾಕುವ ಕೆಲಸ ಮಾತ್ರ ಮಾಡುತ್ತಿದ್ದು, ಯಾವ ಗ್ಯಾರಂಟಿ ಯೋಜನೆಗಳು ಲೋಕಸಭೆ ಚುನಾವಣೆ ನಂತರ ಜನರ ಕೈಗೆ ಸಿಗತಾ ಇಲ್ಲಾ, ಜನ ಕಾಂಗ್ರೆಸ್ ಸರ್ಕಾರದ ವಿರುದ್ಧ ನಿರಸನಗೊಂಡಿದ್ದಾರೆ. ನಮ್ಮ ಪಕ್ಷ ವಿರೋಧ ಪಕ್ಷವಾಗಿ ವಾಲ್ಮೀಕಿ ಹಗರಣದ  ವಿರುದ್ಧ ಹೋರಾಟ ಮಾಡಿ ಸಚಿವ ನಾಗೇಂದ್ರ ಅವರನ್ನು ರಾಜೀನಾಮೆ ಕೊಡಿಸಲು ಯಶಶ್ವಿಯಾಗಿ, ಮುಡಾ ಹಗರಣ ಸಿ ಎಮ್ ಸಿದ್ರಾಮಯ್ಯ ಭಾಗಿಯಾಗಿದ್ದು ಕೋಟ್ಯಂತರ ರೂಪಾಯಿಗಳ ಬೆಳೆ ಬಾಳುವ  ಮುಡಾ ನಿವೇಶನ ಪಡೆದು ನಮ್ಮ ಹೋರಾಟದ ಪಲವಾಗಿ ಪಡೆದ ನಿವೇಶನಗಳನ್ನು ಮುಡಾ ಗೆ ವಾಪಸ್ಸು  ಕೊಟ್ಟು ತಪ್ಪು ಮಾಡಿದ್ದೇವೆ  ಎಂದು ತಾವೇ ಸಾಬೀತು ಮಾಡಿ  ಇಂದು ಸಿ ಎಮ್. ಸಿದ್ರಾಮಯ್ಯ ರಾಜೀನಾಮೆ ನೀಡುವ ಪರಿಸ್ಥಿತಿಗೆ ಬಂದಿದೆ ಎಂದರು.ನಮ್ಮ ಪಕ್ಷದಲ್ಲಿ ಕೆಲವೊಂದು ಸಮಸ್ಯೆಗಳು ಇರುವದು ಸರಿ ಅವುಗಳನ್ನು ಹಿರಿಯ, ಕಿರಿಯ, ಪಕ್ಷದ ಮುಖಂಡರೊಂದಿಗೆ   ಚರ್ಚಿಸಿ ಪಕ್ಷ ಸಂಘಟನೆ ಮಾಡಿ ಇನ್ನೂ ಮೂರು ವರ್ಷ ಉತ್ತಮ ವಿರೋಧ ಪಕ್ಷವಾಗಿ ಜನಪರ ಹೋರಾಟ ಮಾಡಿ ಮುಂದಿನ ಚುನಾವಣೆಯಲ್ಲಿ 150 ಸೀಟುಗಳನ್ನು ಗೆದ್ದು ಎಲ್ಲರ ಸಹಕಾರದಿಂದ ಆಡಳಿತಕ್ಕೆ ಬರುತ್ತೇವೆ ಎಂದರು.
ಉತ್ತರ ಕರ್ನಾಟಕ ಅಭಿವೃದ್ಧಿಗೆ ಒತ್ತು ಈ ಕಾಂಗ್ರೆಸ್ ಸರ್ಕಾರ ಕೊಡ್ತಾ ಇಲ್ಲ. ಈ ಭಾಗದವರು ಸಿ ಎಮ್. ಆದರೆ ನಮದೇನು ತಕರಾರು ಇಲ್ಲಾ. ಮಹದಾಯಿ ನೀರಾವರಿ ಹೋರಾಟ, ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ, ಒಂದು ಸಮುದಾಯದ ಒಲಿಕೆಯ ವಿರುದ್ಧ ಪಕ್ಷದ ಹೈಕಮಾಂಡ್ ಮತ್ತು ರಾಜ್ಯದ ಪಕ್ಷದ  ಹಿರಿಯ, ಕಿರಿಯ ನಾಯಕರೊಂದಿಗೆ, ಪಧಾಧಿಕಾರಿಗಳೊಂದಿಗೆ  ಚರ್ಚಿಸಿ ಪಕ್ಷ ಮುನ್ನಡೆಸುತ್ತೇನೆ. ಪಕ್ಷ ನನಗೆ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಿದ್ದು ಸಂಘಟನೆ ಮಾಡಲು ಅದಕ್ಕೆ ಶ್ರಮಿಸುತ್ತೇನೆ ಎಂದರು. ಮುಂದಿನ ಸಿ ಎಮ್ ಯಾರಾಗುತ್ತಾರೆ ಎಂಬುದು ಆ ಪಕ್ಷದ ನಾಯಕರಿಗೆ ಬಿಟ್ಟಿದ್ದು, ಅನೇಕ ಏರಿಳಿತ ಕಂಡು ನಮ್ಮ ತಂದೆ ಬಿ ಎಸ್ ಯಡಿಯೂರಪ್ಪ ಅವರು  ಉನ್ನತ ಮಟ್ಟಕ್ಕೆ ಬಂದವರು ಅವರೊಂದಿಗೆ 1998 ರಿಂದ ಜೊತೆ ಇದ್ದೇನೆ. ರಾಜಕೀಯದಲ್ಲಿ ವಿರೋಧ ಇರುವದು  ಸಹಜ ಎಂದರು. ಮುಂದೆ ನಿಮ್ಮ ಪಕ್ಷದ  ಸಿ ಎಮ್. ಅಥವಾ ಕಾಂಗ್ರೆಸ್ ಪಕ್ಷದ ಸಿ ಎಮ್ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ಇಲ್ಲಾ ನಾವು ಇನ್ನೂ 3 ವರ್ಷ ವಿರೋಧ ಪಕ್ಷವಾಗಿ ಕಾರ್ಯ ಮಾಡುತ್ತೇವೆ ಎಂದರು.
     ವೇದಿಕೆಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಡಿ ಎಮ್, ಐಹೋಳೆ, ವಿಠ್ಠಲ ಹಲಗೇಕರ, ಮಾಜಿ ಸಂಸದೆ ಮಂಗಳಾ ಅಂಗಡಿ, ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡರ, ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ, ಸಂಜಯ ಪಾಟೀಲ, ಅರವಿಂದ ಪಾಟೀಲ, ಮಹೇಶ ಕುಮಟಳ್ಳಿ, ಬಾಳಾಸಾಹೇಬ ಒಡ್ಡರ, ಮಾಜಿ ವಿ ಪ ಸದಸ್ಯರಾದ ಮಹಾಂತೇಶ ಕವಟಗಿಮಠ, ವಿವೇಕರಾವ್ ಪಾಟೀಲ, ಅರುಣ ಶಹಾಪುರ, ರಾಜ್ಯ ವಕ್ತಾರ ಎಮ್ ಬಿ ಜಿರಲಿ, ಬೆಳಗಾವಿ ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಶುಭಾಷಗೌಡ  ಪಾಟೀಲ, ರಾಜ್ಯ ಬಿಜೆಪಿ  ಮಾಧ್ಯಮ  ಸಲಹೆಗಾರ ಎಫ್ ಎಸ್. ಸಿದ್ದನಗೌಡರ, ಡಾ. ರಾಜೇಂದ್ರ ನೇರಲಿ, ಗೀತಾ ಸುತಾರ, ಜಿಲ್ಲಾ ಮಾಧ್ಯಮ ಸಂಚಾಲಕ ಸಚಿನ ಕಡಿ, ಮುರುಘೆoದ್ರಗೌಡ ಪಾಟೀಲ, ಜಿಲ್ಲಾ ಉಪಾಧ್ಯಕ್ಷ ಗುರು ಮೆಟಗುಡ, ಮಹೇಶ ಭಾತೆ, ರಾಜೇಂದ್ರ ಹರಕುನಿ, ಸೇರಿದಂತೆ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article