ನವದೆಹಲಿ: ಕೆಲವು ಶಂಕಿತ ಉಗ್ರರು ಸ್ಫೋಟಕ ವಸ್ತುಗಳೊಂದಿಗೆ ಪ್ರಯಾಣಿಸುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪುರಿ- ನವದೆಹಲಿ ಪುರುಷೋತ್ತಮ ಎಕ್ಸ್ ಪ್ರೆಸ್ ರೈಲನ್ನು ಉತ್ತರ ಪ್ರದೇಶದ ತುಂಡ್ಲಾ ರೈಲು ನಿಲ್ದಾಣದಲ್ಲಿ ಮೂರು ಗಂಟೆಗಳಿಗೂ ಹೆಚ್ಚು ಕಾಲ ತಾತ್ಕಾಲಿಕವಾಗಿ ನಿಲ್ಲಿಸಲಾಯಿತು ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಇಂದು ಮುಂಜಾನೆ ಸುಮಾರು 2-30 ರಿಂದ 6 ರವರೆಗೂ ರೈಲಿನಲ್ಲಿ ಶೋಧ ಕಾರ್ಯ ನಡೆಸಲಾಯಿತು. ಆದರೆ ಅಂತಹ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲದ ಕಾರಣ ಸಾಮಾಜಿಕ ಜಾಲತಾಣ ಎಕ್ಸ್ ಬಳಕೆದಾರರಿಂದ ಪಡೆದ ಮಾಹಿತಿ ಹುಸಿಯಾಗಿತ್ತು ಎಂದು ಅವರು ಹೇಳಿದ್ದಾರೆ.
ಬೆಳಿಗ್ಗೆ 2.30 ರ ವೇಳೆಯಲ್ಲಿ ಎಲ್ಲಾ ಕೋಚ್ಗಳಲ್ಲಿನ ಪ್ರತಿಯೊಬ್ಬ ಪ್ರಯಾಣಿಕರನ್ನು ಎಚ್ಚರಗೊಳಿಸಲಾಯಿತು ಮತ್ತು ಅವರ ಲಗೇಜ್ಗಳನ್ನು ಮೆಟಲ್ ಡಿಟೆಕ್ಟರ್ ಮತ್ತು ಶ್ವಾನ ದಳಗಳೊಂದಿಗೆ ಸಂಪೂರ್ಣವಾಗಿ ಪರಿಶೀಲಿಸಲಾಯಿತು ಆದರೆ ಏನೂ ಕಂಡುಬಂದಿಲ್ಲ ಎಂದು ಪ್ರಯಾಗ್ರಾಜ್ ರೈಲು ವಿಭಾಗದ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.