Ad imageAd image

ಪೈಲಟ್ ಸಾವು, ಟರ್ಕಿಶ್​ ಏರ್​ಲೈನ್ಸ್​ ನ್ಯೂಯಾರ್ಕ್​ನಲ್ಲಿ ತುರ್ತು ಭೂಸ್ಪರ್ಶ

Ravi Talawar
ಪೈಲಟ್ ಸಾವು, ಟರ್ಕಿಶ್​ ಏರ್​ಲೈನ್ಸ್​ ನ್ಯೂಯಾರ್ಕ್​ನಲ್ಲಿ ತುರ್ತು ಭೂಸ್ಪರ್ಶ
WhatsApp Group Join Now
Telegram Group Join Now

ಪೈಲಟ್​ ಸಾವನ್ನಪ್ಪಿದ ಹಿನ್ನೆಲೆಯಲ್ಲಿಸಿಯಾಟಲ್​ನಿಂದ ಇಸ್ತಾನ್​ಬುಲ್​ಗೆ ಹೊರಟಿದ್ದ ಟರ್ಕಿಶ್​ ಏರ್​ಲೈನ್ಸ್​ ವಿಮಾನವು ನ್ಯೂಯಾರ್ಕ್​ನಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ಏಕಾಏಕಿ ಕ್ಯಾಪ್ಟನ್ ಕುಸಿದುಬಿದ್ದಿದ್ದರು ಎಂದು ವಿಮಾನಯಾನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಂಗಳವಾರ ರಾತ್ರಿ ಸಿಯಾಟಲ್‌ನಿಂದ 204 ಫ್ಲೈಟ್ ಟೇಕ್ ಆಫ್ ಆದ ನಂತರ ಪೈಲಟ್ ಇಲ್ಸೆಹಿನ್ ಪೆಹ್ಲಿವಾನ್, ಪ್ರಜ್ಞೆ ಕಳೆದುಕೊಂಡರು. ಟರ್ಕಿಶ್ ಏರ್ಲೈನ್ಸ್ ವಕ್ತಾರ ಯಾಹ್ಯಾ ಉಸ್ತುನ್ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ತಕ್ಷಣವೇ ಚಿಕಿತ್ಸೆ ಸಿಕ್ಕರೂ, ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ, ನಂತರ ಮತ್ತೋರ್ವ ಪೈಲಟ್ ಮತ್ತು ಸಹ-ಪೈಲಟ್ ನಿಯಂತ್ರಣವಹಿಸಿಕೊಂಡು ನ್ಯೂಯಾರ್ಕ್​ನಲ್ಲಿ ವಿಮಾನ ಕೆಳಗಿಳಿಸಿದರು.

ಬುಧವಾರ ಬೆಳಗ್ಗೆ 6 ಗಂಟೆಯ ಮೊದಲು ವಿಮಾನವು ನ್ಯೂಯಾರ್ಕ್‌ನ ಜಾನ್ ಎಫ್ ಕೆನಡಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು. ವಿಮಾನವು ಸಿಯಾಟಲ್‌ನಿಂದ ಹೊರಟ ಎಂಟು ಗಂಟೆಗಳ ನಂತರ ನ್ಯೂಯಾರ್ಕ್‌ನಲ್ಲಿ ಇಳಿಯಿತು. ಪೆಹ್ಲಿವಾನ್ ಅವರು 2007 ರಿಂದ ಟರ್ಕಿಶ್ ಏರ್‌ಲೈನ್ಸ್‌ನಲ್ಲಿ ಮಾಡುತ್ತಿದ್ದಾರೆ.

ಪ್ರಯಾಣಿಕರು ನ್ಯೂಯಾರ್ಕ್‌ನಿಂದ ತಮ್ಮ ಸ್ಥಳಗಳಿಗೆ ತಲುಪಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಏರ್‌ಲೈನ್ ವಕ್ತಾರರು ತಿಳಿಸಿದ್ದಾರೆ.

ಪೈಲಟ್ ಸಾವಿಗೆ ಕಾರಣ ತಿಳಿದುಬಂದಿಲ್ಲ. ಸಾಮಾನ್ಯವಾಗಿ, ಪೈಲಟ್‌ಗಳು ಪ್ರತಿ 12 ತಿಂಗಳಿಗೊಮ್ಮೆ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ, ಆದರೆ 40 ವರ್ಷಕ್ಕಿಂತ ಮೇಲ್ಪಟ್ಟವರು ಪ್ರತಿ ಆರು ತಿಂಗಳ ನಂತರ ತಮ್ಮ ವೈದ್ಯಕೀಯ ಪ್ರಮಾಣಪತ್ರವನ್ನು ನವೀಕರಿಸಬೇಕು.

WhatsApp Group Join Now
Telegram Group Join Now
Share This Article